Ad Widget

ಸುಳ್ಯ ಕುಡಿಯುವ ನೀರಿನ ಯೋಜನೆ ಪೈಪ್ ಲೈನ್ ಕಾಮಗಾರಿಯ ಧೂಳಿನಿಂದ ಅಡಕತ್ತಿರಿಗೆ ಸಿಲುಕಿದ ನ.ಪಂ , ಧೂಳುಮಯವಾದ ರಥಬೀದಿ ವ್ಯಾಪಾರಸ್ಥರಿಂದ ರಸ್ತೆ ತಡೆಗೆ ಚಿಂತನೆ ?

. . . . . . . . .

ಸುಳ್ಯ : ಸುಳ್ಯ ನಗರದ ಕುಡಿಯುವ ನೀರಿನ ಪೈಪು ಲೈನ್ ಕಾಮಗಾರಿ ನಡೆಯುತ್ತಿದ್ದು ನಿತ್ಯವು ಧೂಳುಮಯವಾದ ರಸ್ತೆಯ ಕುರಿತು ದೂರು ಅರ್ಜಿಗಳು ಬರುತ್ತಿದ್ದರು ನಗರ ಪಂಚಾಯತ್ ಮಾತ್ರ ಮೂಕ ಪ್ರೇಕ್ಷಕನಾಗಿ ನಿಲ್ಲುವಂತೆ ಮಾಡಿದ್ದು ಇದರ ವಿರುದ್ದ ಇದೀಗ ಈ ರಸ್ತೆಯಲ್ಲಿನ ಅಂಗಡಿ ಮುಂಗಟ್ಟಿನ ವರ್ತಕರು ರಸ್ತೆ ತಡೆ ನಡೆಸುವ ಚಿಂತನೆ ನಡೆಸಿರುವುದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಇತ್ತ ಈ ರಸ್ತೆಯಲ್ಲಿ ನಡೆದಾಡುವ ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮತ್ತು ರಸ್ತೆ ವಾಹನ ಸಂಚಾರಿಗಳು ನಿತ್ಯ ಧೂಳು ತಿನ್ನಬೇಕಾಗಿದ್ದು ಮುಂಜಾನೆ ಒಂದು ಭಾರಿ ನೀರು ಹಾಯಿಸಿ ಮತ್ತೆ ಸುಮ್ಮನಿರುವ ಗುತ್ತಿಗೆದಾರರು ಹಾಗೂ ನಗರ ಆಡಳಿತದ ವಿರುದ್ದವು ದಿನೇ ದಿನೇ ಆಕ್ರೋಶ ವ್ಯಕ್ತವಾಗುತ್ತಿದ್ದು ಇದೀಗ ಮನವಿ ನೀಡಿ ಬೇಸತ್ತಿರುವ ರಥ ಬೀದಿಯ ವರ್ತಕರು ಕಂಗೆಟ್ಟು ರಸ್ತೆ ತಡೆಗೆ ಚಿಂತಿಸಿದ್ದು ಹೊಟ್ಟೆಪಾಡಿಗಾಗಿ ದುಡಿಯುವವರ ಪಾಡು ಈ ಕಾಮಗಾರಿಯಿಂದಾಗ ಕಷ್ಟ ಹೇಳತೀರದು ಈ ವರದಿಯ ಬಳಿಕವಾದರು ಎಚ್ಚೆತ್ತು ನಗರ ಆಡಳಿತ ಧೂಳು ಮುಕ್ತಗೊಳಿಸಲು ಗುತ್ತಿಗೆದಾರರಿಗೆ ಸೂಚಿಸುವುದೇ ಅಥವಾ ನೂತನ ಭ್ರಹ್ಮರಥ ಆಗಮನ ಹಾಗೂ ಸುಳ್ಯ ಜಾತ್ರೋತ್ಸವ ಸಂಧರ್ಭದಲ್ಲಿಯು ಇದೇ ಮುಂದುವರಿದಲ್ಲಿ ನಗರದ ರಥಬೀದಿಯಲ್ಲಿ ಉಸಿರುಗಟ್ಟುವ ವಾತಾವರಣ ಸೃಷ್ಟಿಯಾಗುವುದು ಅಂತು ಖಚಿತ ಈ ಬಗ್ಗೆ ಗಮನ ಹರಿಸಬೇಕಿದೆ ನಗರ ಆಡಳಿತ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!