ಡಿ. 17 ರಂದು ಮಂಗಳೂರು ನೇತ್ರಾವತಿ ಸಭಾಂಗಣದಲ್ಲಿ "ಪ್ಯಾನಲ್ ವಕೀಲರು ಹಾಗೂ ಅರೆಕಾಲಿಕ ಸ್ವಯಂ ಸೇವಕರು, ಕಾನೂನು ನೆರವು ಅಭಿರಕ್ಷಕರು ಹಾಗೂ LGBTQIA ಸಮುದಾಯದವರಿಗೆ ತರಬೇತಿ ಕಾರ್ಯಕ್ರಮ ನಡೆಯಿತು. ಉದ್ಘಾಟನೆಯನ್ನು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಸಂಧ್ಯಾ. ಎಸ್ ರವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಶೋಭಾ ಬಿ.ಜಿ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮಹಿಳಾ ಅಭಿವೃದ್ಧ್ದಿ ನಿಗಮದ ನಿರೀಕ್ಷಕರಾದ ಶ್ರೀಮತಿ ಚಂದ್ರಿಕಾ, ಪ್ಯಾನಲ್ ವಕೀಲರಾದ ಶ್ರೀಮತಿ ಗೌರಿ ಕೆ.ಎಸ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಉಸ್ಮಾನ್ ಹಾಗೂ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ರಾಘವೇಂದ್ರ ಹೆಚ್.ವಿ ಉಪಸ್ಥಿತರಿದ್ದರು. ಸುಳ್ಯದಿಂದ ಪ್ಯಾನಲ್ ವಕೀಲರಾದ ಪುಷ್ಪರಾಜ್ ಗಾಂಭೀರ, ಹರೀಶ ಬೂಡುಪನ್ನೆ, ರಾಮಚಂದ್ರ,
ಶ್ರೀಪಾದ ಹೆಗ್ಡೆ, ಚಂದ್ರಶೇಖರ ಉದ್ದಂತಡ್ಕ, ನಾರಾಯಣ ಜಟ್ಟಿಪಳ್ಳ ಹಾಗೂ ಭಾಸ್ಕರ ರಾವ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.