ಸುಳ್ಯ ಕುಡಿಯುವ ನೀರಿನ ಯೋಜನೆ ಪೈಪ್ ಲೈನ್ ಕಾಮಗಾರಿಯಿಂದಾಗಿ ಧೂಳುಮಯವಾಗಿದ್ದು, ನ.ಪಂ.ಅಡಕತ್ತರಿಗೆ ಸಿಲುಕಿದೆ. ರಥಬೀದಿಯ ವ್ಯಾಪಾರಸ್ಥರಿಂದ ರಸ್ತೆ ತಡೆಗೆ ಚಿಂತನೆ ಎಂಬ ವರದಿ ಪ್ರಕಟವಾಗುತ್ತಿದ್ದಂತೆ ನ.ಪಂ ಅಧ್ಯಕ್ಷೆ ಶಶಿಕಲಾ ಎ ನೀರಬಿದರೆ ಪ್ರತಿಕ್ರಿಯಿಸಿ ಈ ಸಮಸ್ಯೆಗಳನ್ನು ನಾನು ಖುದ್ದಾಗಿ ತೆರಳಿ ಅವಲೋಕಿಸಿದ್ದೇನೆ. ಇಂದು ಅದಕ್ಕೆ ಬೇಕಾಗುವ ಎಲ್ಲಾ ಪರಿಹಾರ ಕಂಡುಕೊಳ್ಳುವ ದೃಷ್ಟಿಯಿಂದ ನ.ಪಂ ಮುಖ್ಯಾಧಿಕಾರಿ ಹಾಗೂ ಹಿರಿಯ ಅಧಿಕಾರಿಗಳು ಮತ್ತು ಸ್ಥಳೀಯ ಪ್ರತಿನಿಧಿಗಳಿಗೂ ದೂರವಾಣಿ ಮುಖೇನ ಮಾಹಿತಿ ಪಡೆದುಕೊಂಡಿದ್ದು, ಈ ಬಗ್ಗೆ ಮುಖ್ಯಾಧಿಕಾರಿಗಳನ್ನು ಜೊತೆಯಲ್ಲಿ ಕರೆದೊಯ್ದು ಪರಿಹಾರಕ್ಕೆ ಪ್ರಯತ್ನ ನಡೆಸಲಾಗುವುದು. ಅಲ್ಲದೇ ನ.ಪಂ ವತಿಯಿಂದ ಧೂಳಿನ ಪ್ರಮಾಣ ಕಡಿಮೆ ಗೊಳಿಸುವ ಸಲುವಾಗಿ ಪೈಪ್ ಗಳ ಮೂಲಕ ನೀರು ಹಾಯಿಸಿ ಧೂಳು ಕಡಿಮೆ ಗೊಳಿಸುವ ಕಾರ್ಯವನ್ನು ಮಾಡಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
- Thursday
- January 9th, 2025