ಮಲೆನಾಡು ಜನಹಿತರಕ್ಷಣಾ ವೇದಿಕೆಯು ಈಗಾಗಲೇ ರೈತರ ಪರವಾಗಿರುವ ಹಲವು ಹೋರಾಟ,ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಇದೀಗ ಕಸ್ತೂರಿ ರಂಗನ್ ವರದಿ ವಿರೋಧಿಸಿ ಜಂಟಿಸರ್ವೆ ಹಾಗೂ ಗಡಿಗುರುತು ಆಗಬೇಕೆಂಬ ಉದ್ದೇಶದಿಂದ ಹೋರಾಟಗಳು ನಡೆಯುತ್ತಿದ್ದು ಈಗಾಗಲೇ ಗ್ರಾಮ ಮಟ್ಟದಿಂದ ಬೂತ್ ಸಮಿತಿಗಳನ್ನು ರಚಿಸಿಕೊಂಡು ಹೋರಾಟಕ್ಕೆ ಇಳಿದಿದೆ. ಈ ಹಿನ್ನಲೆಯಲ್ಲಿ ಕಸ್ತೂರಿ ರಂಗನ್ ವರದಿ ಬಾಧಿತ ಮಡಪ್ಪಾಡಿ ಗ್ರಾಮದ ಬೂತ್ ಹಾಗೂ ಹೋರಾಟದ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಮ.ಜ.ಹಿ.ರ.ವೇ ಯು ಗ್ರಾಮ ಪ್ರಮುಖರಾಗಿ ಲೋಹಿತ್ ಬಾಳಿಕಳ ಇವರನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಆಯ್ಕೆ ಮಾಡಿದೆ. ಈ ಹಿಂದೆಯೂ ಯುವಕ ಮಂಡಲ ಸೇರಿದಂತೆ ಅನೇಕ ಸಂಘಟನೆಗಳ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಇವರು ಪ್ರಸ್ತುತ ಸುಳ್ಯ ಯುವಜನ ಸಂಯುಕ್ತಮಂಡಳಿ ಇದರ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಮಲೆನಾಡು ಜನಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿ, ಸುಳ್ಯ ತಾಲೂಕು ಪದಾಧಿಕಾರಿಗಳಾದ ಚಂದ್ರಶೇಖರ ಬಾಳುಗೋಡು, ವಿನೋದ್ ಪೂಂಬಾಡಿ, ದುಷ್ಯಂತ್ ಶೀರಡ್ಕ ಹಾಗೂ ಮಡಪ್ಪಾಡಿ ಗ್ರಾಮಸ್ತರು ಉಪಸ್ಥಿತರಿದ್ದರು.
- Wednesday
- January 8th, 2025