
ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಕೊಡಗು ಜಿಲ್ಲಾ ಘಟಕ, ಮಡಿಕೇರಿ ತಾಲೂಕು ಘಟಕ, ಸಂಪಾಜೆ ಹೋಬಳಿ ಘಟಕಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 30/12/2024 ರಂದು ಪೂ.10.30ಕ್ಕೆ ಸಂಪಾಜೆ ನಾಡಕಚೇರಿ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯಲಿದೆ. ಹಲವು ವರ್ಷಗಳಿಂದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಕಂದಾಯ ಇಲಾಖೆ ಇದುವರೆಗೂ ಸೂಕ್ತ ಜಾಗ ನೀಡದೆ ವಂಚಿಸುತ್ತಿತ್ತು. ಸರ್ವೆ ನಂಬರ್ 54/1 ರಲ್ಲಿ 39 ಎಕರೆ ಸರಕಾರದ ಜಾಗ ವಿದ್ದರೂ, ಸಮುದಾಯ ಭವನ ನಿರ್ಮಾಣಕ್ಕೆ ನೀಡಲು ಕಂದಾಯ ಇಲಾಖೆ ಮೀನಾಮೇಷ ಎಣಿಸುತ್ತಿದೆ. ಕಳೆದ ಬಾರಿಯ ಮಡಿಕೇರಿ ತಾಲೂಕು ಭೂ ಸಕ್ರಮೀಕರಣ ಸಮಿತಿಯು 5 ಸೆಂಟ್ ಜಾಗ ನೀಡಿದ್ದರೂ, ತದ ನಂತರ 50 ಸೆಂಟ್ ಜಾಗ ನೀಡುತ್ತೇವೆ ಎಂದು ನಾಗೇಶ್ ಕುಂದಲ್ಪಾಡಿಯವರ ಅಧ್ಯಕ್ಷತೆಯ ಸಮಿತಿ ಭರವಸೆ ನೀಡಿ, ನಮಗಾಗಿ ಮೀಸಲಿಟ್ಟ 5 ಸೆಂಟ್ ಜಾಗವನ್ನು ಬಿ.ಜೆ ಯಶೋಧರ ಎಂಬುವವರಿಗೆ ಮಂಜೂರು ಮಾಡಿದೆ. ನಂತರ 5 ಸೆಂಟ್ ಜಾಗವೂ ಇಲ್ಲ, 50 ಸೆಂಟ್ ಜಾಗವೂ ನೀಡದೆ ದಲಿತ ಬಂಧುಗಳಿಗೆ ಕಂದಾಯ ಇಲಾಖೆ ಅನ್ಯಾಯ ಮಾಡಿತು. ಈ ಎಲ್ಲಾ ದಲಿತ ವಿರೋಧಿ ನಡವಳಿಕೆಯನ್ನು ಮನಗಂಡು ದಿನಾಂಕ 30/12/2024 ರಂದು ಸಂಪಾಜೆ ನಾಡಕಚೇರಿ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿ, ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದ ಹೆಸರಿಗೆ ಪಹಣಿ ಪತ್ರ ನೀಡುವವರೆಗೂ ಮುಂದುವರಿಸಲಿದ್ದೇವೆ.
ಜಿಲ್ಲಾ ಸಂಚಾಲಕರಾದ ಶ್ರೀ ದಿವಾಕರ್ ಹೆಚ್ ಎಲ್, ತಾಲೂಕು ಸಂಚಾಲಕರಾದ ಶ್ರೀ ದೀಪಕ್ ಪೊನ್ನಪ್ಪ, ಹೋಬಳಿ ಸಂಚಾಲಕರಾದ ಶ್ರೀ ಶಶಿಕುಮಾರ್ ಹೆಚ್.ಬಿ, ಸಂಘಟನಾ ಸಂಚಾಲಕರಾದ ಶ್ರೀ ಸುಂದರ ಹೆಚ್.ಬಿ, ಸದಸ್ಯರಾದ ಶ್ರೀ ನಾರಾಯಣ ಹೆಚ್.ಸಿ, ಶ್ರೀ ನಾಗೇಶ್ ಹೆಚ್. ಎನ್, ಶ್ರೀ ಸಚಿನ್ ಹೆಚ್.ಎಂ ಇವರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಯಲಿದೆ.