ಸುಳ್ಯ : ಅಮರ ಸುಳ್ಯ ಸುದ್ದಿ ವರದಿಗಾರ ವಿಥುನ್ ಕರ್ಲಪ್ಪಾಡಿ ಇವರಿಗೆ ಸುಳ್ಯ ಬಿಎಸ್‌ಎನ್ ಎಲ್ ಕಸ್ಟಮರ್ ಸರ್ವಿಸ್ ಸೆಂಟರ್‌ನ ವಿಕಾಸ್ ಮೀನಗದ್ದೆ ಎಂಬವರು ದೂರವಾಣಿ ಮೂಲಕ ಬೆದರಿಕೆ ಹಾಕಿದ್ದು, ಇದರ ಬಗ್ಗೆ ದೂರು ದಾಖಲಿಸಿದ್ದರು ಅದರಂತೆ ಪತ್ರಕರ್ತರ ಸಂಘ , ಪ್ರೆಸ್ ಕ್ಲಬ್ ಖಂಡನೆ ವ್ಯಕ್ತ ಪಡಿಸುತ್ತಿದ್ದಂತೆ ಸುಳ್ಯ ಬಿಎಸ್‌ಎನ್ ಎಲ್ ಕಸ್ಟಮರ್ ಸರ್ವಿಸ್ ಸೆಂಟರ್‌ನ ವಿಕಾಸ್ ಮೀನಗದ್ದೆಯವರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದರು. ದೂರುದಾರಿಗೆ ಕ್ಷಮಾಪಣೆ ಕೇಳುವ ಮೂಲಕ ಮಾತುಕತೆಯಲ್ಲಿ ಇತ್ಯರ್ಥ ಪಡಿಸಲಾಗಿದ್ದು ಅಲ್ಲದೇ ಆತನಿಂದ ಮುಚ್ಚಳಿಕೆ ಬರೆಸಿ ಮುಂದಿನ ದಿನಗಳಲ್ಲಿ ಪತ್ರಕರ್ತನಿಗೆ ತೊಂದರೆ ಮಾಡಿದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿ ಪ್ರಕರಣವನ್ನು ಮುಕ್ತಾಯಗೊಳಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಕೃಷ್ಣ ಬೆಟ್ಟ , ಗಿರೀಶ್ ಅಡ್ಪಂಗಾಯ , ಹಸೈನಾರ್ ಜಯನಗರ , ಶರೀಫ್ ಜಟ್ಟಿಪಳ್ಳ , ಪದ್ಮನಾಭ ಮುಂಡಕಜೆ , ದಯಾನಂದ ಕಲ್ನಾರ್ , ಅಬ್ದುಲ್ ರಝಾಕ್ ಸೇರಿದಂತೆ ಇತರರು ಹಾಜರಿದ್ದರು.
- Wednesday
- December 18th, 2024