ಒಂದು ವರ್ಷದ ಹಿಂದೆ ಅಂದರೆ ದಿ.16/12/2023ರ ಇದೇ ದಿನದಂದು ಗುತ್ತಿಗಾರಿನಲ್ಲಿ ಕು.ಸೌಜನ್ಯ ನ್ಯಾಯಪರ ಹೋರಾಟ ನಡೆದು ನ್ಯಾಯಕ್ಕಾಗಿ ಆಗ್ರಹಿಸಲಾಗಿತ್ತು. ಇಂದಿಗೆ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಸೌಜನ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಸೌಜನ್ಯ ನ್ಯಾಯಕ್ಕಾಗಿ ಪ್ರಾರ್ಥಿಸಲಾಯಿತು.
ಕು.ಸೌಜನ್ಯ ನ್ಯಾಯ ಪರ ಹೋರಾಟ ಸಮಿತಿ ಗುತ್ತಿಗಾರು ಇದರ ಎಲ್ಲಾ ಪದಾಧಿಕಾರಿಗಳು , ವಾಹನಗಳ ಚಾಲಕ-ಮಾಲಕರು ಭಾಗವಹಿಸಿದರು. ಹಿರಿಯರಾದ ಚಂದ್ರಶೇಖರ ಬಾಳುಗೋಡು ಮಾತನಾಡಿ , ಯಾವುದೇ ಅಡೆತಡೆಗಳು ಬಂದರೂ ನ್ಯಾಯಕ್ಕಾಗಿ ಹೋರಾಟ ಕೈ ಬಿಡುವುದಿಲ್ಲ, ಹೋರಾಟಗಾರ ನಾಯಕರ ಯಾವುದೇ ನಡೆಗೂ ನಮ್ಮ ಬೆಂಬಲವಿದೆ, ಕಾರ್ಯಕರ್ತರು ಎದೆಗುಂದಬಾರದು ಎಂದರು. ವಿಜೇಶ್ ಹಿರಿಯಡ್ಕ ಸ್ವಾಗತಿಸಿ ವಂದಿಸಿದರು.