Ad Widget

ಮೊಗ್ರ : ದೈವ ನರ್ತಕ ಗಿರಿಯಪ್ಪ ಅಜಿಲ ನಿಧನ

. . . . . . .

ಗುತ್ತಿಗಾರು ಗ್ರಾಮದ ಮೊಗ್ರ ನಿವಾಸಿ ಗಿರಿಯಪ್ಪ ಅಜಿಲರವರು ಹೃದಯಘಾತದಿಂದ ಡಿ. 12ರಂದು ರಾತ್ರಿ ನಿಧನರಾದರು. ಅವಿವಾಹಿತರಾಗಿದ್ದ ಅವರಿಗೆ 36 ವರ್ಷ ವಯಸ್ಸಾಗಿತ್ತು.

ಆರೋಗ್ಯದಿಂದಿದ್ದ ಅವರು ರಾತ್ರಿ ಊಟ ಮುಗಿಸಿ ಮಲಗುವ ಹೊತ್ತಿಗೆ ಮನೆಯಲ್ಲಿ ಹೃದಯಘಾತವಾಯಿತೆನ್ನಲಾಗಿದೆ. ತಕ್ಷಣ ಅವರನ್ನು ಕಾಣಿಯೂರಿನ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೇ ಚಿಕಿತ್ಸೆ ಫಲಿಸದೇ ಮೃತಪಟ್ಟರೆಂದು ತಿಳಿದುಬಂದಿದೆ.

ಮೊಗ್ರ ಶ್ರೀ ಕನ್ನಡ ದೇವತೆ ಯಾನೆ ಪುರುಷ ದೈವಸ್ಥಾನದಲ್ಲಿ ಬಂಟ ದೈವ, ಬೇಡವ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಊರಿನಲ್ಲಿಯೂ ದೈವ ನರ್ತಕರಾಗಿ ಪ್ರಸಿದ್ಧಿಯಾಗಿದ್ದರು. ಮೃತರು ತಂದೆ ದುಗ್ಗಣ್ಣ ಅಜಿಲ, ತಾಯಿ ಕುಸುಮಾವತಿ, ಸಹೋದರ ನೀಲಪ್ಪ, ಸಹೋದರಿ ನೀಲಾವತಿ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!