
ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೂತನ ಬೆಳ್ಳಿಯ ಪಲ್ಲಕ್ಕಿಯನ್ನು ಸೇವಾ ರೂಪದಲ್ಲಿ ಬಾಗಲಕೋಟೆಯ ಉದ್ಯಮಿ ನಾಗರಾಜ್ ಕುಲಕರ್ಣಿ, ಭಾರ್ಗವಿ ಕುಲಕರ್ಣಿ, ಭೀಮಾಜಿ ವೈ.ಎಸ್ ಗಲಗಲಿ ಜಮಖಂಡಿ ಮತ್ತು ಕುಟುಂಬಸ್ಥರು ಸಮರ್ಪಣೆ ಮಾಡಲಿದ್ದಾರೆ
ಸುಮಾರು 17.65 ಲಕ್ಷದಲ್ಲಿ ಬೆಳ್ಳಿಯ ಪಲ್ಲಕ್ಕಿ ರಚನೆಯಾಗಿದೆ. ಕಾರ್ಕಳದ ಬಜಗೋಳಿಯ ಸುಧಾಕರ ಡೋಂಗ್ರೆ ಮತ್ತು ಶಿಷ್ಯರು ನೂತನ ಪಲ್ಲಕ್ಕಿಯನ್ನು ನಿರ್ಮಿಸುತ್ತಿದ್ದಾರೆ. ಈಗ ಇರುವ ಪಲ್ಲಕ್ಕಿಯಂತೆ ನೂತನ ಪಲ್ಲಕ್ಕಿಯು ನಿರ್ಮಾಣಗೊಳ್ಳಲಿದ್ದು, ಡಿಸೆಂಬರ್ 16ರಂದು ಶ್ರೀ ದೇವಳಕ್ಕೆ ಸಮರ್ಪಣೆಯಾಗಲಿದೆ .ಅದಕ್ಕೂ ಮೊದಲು ಡಿಸೆಂಬರ್ 15 ರಂದು ನೂತನ ಬೆಳ್ಳಿಯ ಪಲ್ಲಕ್ಕಿ ಕ್ಷೇತ್ರ ಪುರಪ್ರವೇಶ ಮಾಡಲಿರುವುದು ಎಂದು ದಾನಿಗಳ ಆಪ್ತ ಸುಬ್ರಹ್ಮಣ್ಯದ ಶ್ರೀಕುಮಾರ್ ಬಿಲದ್ವಾರ ತಿಳಿಸಿರುತ್ತಾರೆ.