Ad Widget

ಎನ್ನೆಂಪಿಯುಸಿ ಕಾಲೇಜು ವಾರ್ಷಿಕೋತ್ಸವ

. . . . .

ಸುಳ್ಯದ ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವವು ಡಿ.10ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ನ ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ “ವಿದ್ಯಾರ್ಥಿಗಳು ಶಿಕ್ಷಣ ಸಾಂಸ್ಕೃತಿಕ ಕ್ರೀಡೆಯಂತಹ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಮಾತ್ರ ವಿದ್ಯಾರ್ಥಿ ಜೀವನಕ್ಕೆ ಮೆರುಗು ಬರವಂತಹದ್ದು. ಈ ನಿಟ್ಟಿನಲ್ಲಿ ಇಂತಹ ಕಾಲೇಜು ವಾರ್ಷಿಕೋತ್ಸವಗಳು ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಪ್ರತಿಭೆಯನ್ನು ಹೊರತರಲು ಪೂರಕವಾಗುತ್ತದೆ” ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸೈಂಟ್ ಜೋಸೆಫ್ ಎಜುಕೇಶನಲ್ ಇನ್ಸಿಟ್ಯೂಷನ್ ಸುಳ್ಯ ಇದರ ಸಂಚಾಲಕರರಾದ ರೆ.ಫಾ. ವಿಕ್ಟ‌ರ್ ಡಿಸೋಜ ಮಾತನಾಡಿ ಸ್ವಾರ್ಥ ಅಹಂ ಹಾಗೂ ಅಹಂಕಾರವನ್ನು ತ್ಯಜಿಸಿದಾಗ ಉತ್ತಮ ವ್ಯಕಿಗಳಾಗಲು ಸಾಧ್ಯ. ನಾವು ಈ ಭೂಮಿಯ ಮೇಲಿನ ಋಣ ತೀರಿಸಲು ಒಳ್ಳೆಯ ರೀತಿಯಲ್ಲಿ ಸಮಾಜ ಮುಖಿಯಾಗಿ ತೊಡಗಿಸಿಕೊಳ್ಳಬೇಕು ಎಂದರು. ಗೌರವ ಉಪಸ್ಥಿತರಿದ್ದ ಕಾಲೇಜಿನ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲು ಹಾಗೂ ನೆಹರೂ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ.ಎಂ. ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಉಪಸ್ಥಿತರಿದ್ದ ಕಾಲೇಜಿನ ಪ್ರಾಂಶುಪಾಲರಾದ ಮಿಥಾಲಿ ಪಿ. ರೈ, ವಿದ್ಯಾರ್ಥಿ ಕ್ಷೇಮಾಧಿಕಾರಿ ವಿನಯ್ ನಿಡ್ಯಮಲೆ, ವಿದ್ಯಾರ್ಥಿ ನಾಯಕರಾದ ಸುಶಾಂತ್, ಗಾಯತ್ರಿ, ರಿಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಜ್ಞ ಬಳಗದವರು ಆಶಯ ಗೀತೆ ಹಾಡಿದರು. ಪ್ರಾಚಾರ್ಯರಾದ ಮಿಥಾಲಿ ಪಿ ರೈ ಕಾಲೇಜಿನ ವಾರ್ಷಿಕ ವರದಿ ವಾಚಿಸಿದರು. ಉಪನ್ಯಾಸಕಿ ಕು. ಬೇಬಿ ವಿದ್ಯಾ ಪಿ.ಬಿ ದತ್ತಿ ನಿಧಿ ಬಹುಮಾನ, ಗಣಕ ವಿಜ್ಞಾನ ಉಪನ್ಯಾಸಕಿ ನಯನ ಎಂ ಗಣಕ ವಿಜ್ಞಾನದಲ್ಲಿ ಪೂರ್ಣ ಅಂಕ ಗಳಿಸಿದವರಿಗೆ ಕೊಡ ಮಾಡಿದ ನಗದು ಬಹುಮಾನದ ಪಟ್ಟಿ ವಾಚಿಸಿದರು.

ಉಪನ್ಯಾಸಕಿ ಗೀತಾ ಎನ್ ಕಲಿಕೆಯ ಬಹುಮಾನ ವಾಚಿಸಿದರು. ಸಾಂಸ್ಕೃತಿಕ ಕಾರ್ಯದರ್ಶಿ ರಿಯಾ ಕೆ.ಜೆ ಮುಖ್ಯ ಅತಿಥಿಗಳ ಪರಿಚಯಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವಿನಯ್ ನಿಡ್ಯಮಲೆ ಕಾಲೇಜು ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿಜೇತರ ಪಟ್ಟಿ ಹಾಗೂ ಬೆಸ್ಟ್ ಔಟ್ ಗೋಯಿಂಗ್ ಸ್ಪೂಡೆಂಟ್ ಅವಾರ್ಡ್ ನ್ನು ವಾಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ನೇಷನ್ ಬಿಲ್ಡ‌ರ್ ಅವಾರ್ಡ್ ಪ್ರಶಸ್ತಿಗೆ ಭಾಜನರಾದ ಕನ್ನಡ ಉಪನ್ಯಾಸಕಿ ಬೇಬಿ ವಿದ್ಯಾರನ್ನು ಸನ್ಮಾನಿಸಲಾಯಿತು. ಉಪನ್ಯಾಸಕಿ ರೇಷ್ಮಾ ಎಂ.ಎಂ ಬೇಬಿ ವಿದ್ಯಾರ ಸನ್ಮಾನ ಪತ್ರ ವಾಚಿಸಿದರು. ರಾಜ್ಯ ಮಟ್ಟದ ಆಟಗಾರ ವಿದ್ಯಾರ್ಥಿ ಹಮತುಲ್ ಕರಾರ್ ನ್ನು ಸನ್ಮಾನಿಸಲಾಯಿತು. ಇವರ ಸನ್ಮಾನ ಪತ್ರವನ್ನು ಉಪನ್ಯಾಸಕಿ ಸಾವಿತ್ರಿ ಕೆ ವಾಚಿಸಿದರು.

ಕಾರ್ಯಕ್ರಮದಲ್ಲಿ ಆಜ್ಞ ಮತ್ತು ಬಳಗದವರು ಪ್ರಾರ್ಥಿಸಿದರು. ವಿದ್ಯಾರ್ಥಿ ನಾಯಕಿ ಗಾಯತ್ರಿ ಸ್ವಾಗತಿಸಿ, ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಮೋಘ ಎಂ.ಎಸ್‌ ವಂದಿಸಿದರು. ಕೃತಸ್ವರ, ದೀಪ್ತ ಕೆ, ಮೋಕ್ಸ್‌ ಡಿ ಎಲ್.ಎಂ, ಆರ್ ಸುಮಂತ್, ಶ್ರೇಯ ಎಂ.ಜಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಭೋದಕ-ಭೋದಕೇತರ ವೃಂದದವರು, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಉಪನ್ಯಾಸಕಿ ರೇಷ್ಮಾ ಎಂ ನಿರೂಪಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!