ಸುಳ್ಯ ಜೂನಿಯರ್ ಕಾಲೇಜು ರಸ್ತೆಯ ರಿಕ್ಷಾ ಪಾರ್ಕಿಂಗ್ ನ ರಿಕ್ಷಾ ಚಾಲಕ, ತೊಡಿಕಾನ ನಿವಾಸಿ ಅಡ್ಯಡ್ಕ ಕೋಣಗುಂಡಿ ದಿ.ಹೊನ್ನಪ್ಪ ಗೌಡರ ಪುತ್ರ ಜಗನ್ನಾಥ (50) ಎಂಬವರು ಸುಳ್ಯದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ಅವರು ರಿಕ್ಷಾ ಪಾರ್ಕಿಂಗ್ ಗೆ ಬಂದಿರಲಿಲ್ಲ. ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದುಬಂದಿದ್ದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಈ ಹಿಂದೆ ಎರಡು ದಿನಗಳ ಕಾಲ ನಾಪತ್ತೆಯಾಗಿದ್ದು ಮತ್ತೆ ಮನೆಗೆ ವಾಪಸ್ಸು ಆಗಿದ್ದರು ಎಂದು ತಿಳಿದು ಬಂದಿದೆ.