Ad Widget

ಡಾ. ಕೆ.ವಿ.ಚಿದಾನಂದರಿಂದ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ಸಮರ್ಪಣೆ – ಡಿ.25 ರಂದು ಸುಳ್ಯಕ್ಕೆ ಬ್ರಹ್ಮರಥ ಆಗಮನ

. . . . . . . . .

ಸುಳ್ಯ ಅಕಾಡೆಮಿ ಆಫ್‌ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷರಾಗಿರುವ ಡಾ. ಕೆ.ವಿ. ಚಿದಾನಂದ ಹಾಗೂ ಮನೆಯವರು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ನೂತನ ಬ್ರಹ್ಮರಥವನ್ನು ಕೊಡುಗೆಯಾಗಿ ನೀಡಲಿದ್ದು, ಬ್ರಹ್ಮರಥ ಸುಳ್ಯಕ್ಕೆ ಆಗಮಿಸುವ ಹಾಗೂ ಸಮರ್ಪಣೆ ಸಿದ್ಧತೆಯ ಕುರಿತು ಭಕ್ತಾಧಿಗಳ ಸಭೆಯು ಸುಳ್ಯದ ಚೆನ್ನಕೇಶವ ದೇವಸ್ಥಾನ ಸಭಾಂಗಣದಲ್ಲಿ ಡಿ.6ರಂದು ನಡೆಯಿತು.

. . . . . . .

ಕೋಟೇಶ್ವರದ ಕುಂಭಾಶಿಯಲ್ಲಿ ರಥಶಿಲ್ಪಿ ರಾಜಗೋಪಾಲಾಚಾರ್ಯರ ಉಸ್ತುವಾರಿಯಲ್ಲಿ ಬ್ರಹ್ಮರಥ ನಿರ್ಮಾಣವಾಗುತ್ತಿದ್ದು, ಡಿ.23ರಂದು ಬ್ರಹ್ಮರಥ ಸುಳ್ಯಕ್ಕೆ ತರುವ ನಿಟ್ಟಿನಲ್ಲಿ ಸುಳ್ಯದಿಂದ ಕುರುಂಜಿ ಕುಟುಂಬದವರು ಹಾಗೂ ದೇವಸ್ಥಾನದ ಭಕ್ತರು ತೆರಳಿ ಅಲ್ಲಿ ಪೂಜೆ ನಡೆಯುವುದು. ಡಿ.24ರಂದು ಬೆಳಗ್ಗೆ ಕುಂಭಾಶಿಯಿಂದ ಬ್ರಹ್ಮರಥ ಹೊರಡಲಿದ್ದು ರಾತ್ರಿ ವೇಳೆಗೆ ಪುತ್ತೂರು ತಲುಪುತ್ತದೆ. ಅಂದು ಪುತ್ತೂರಿನಲ್ಲಿ ಬ್ರಹ್ಮರಥ ಇರುತ್ತದೆ.
ಮರುದಿನ ಡಿ.25ರಂದು ಸುಳ್ಯದತ್ತ ಬ್ರಹ್ಮರಥ ಆಗಮಿಸುತ್ತದೆ. ಮಧ್ಯಾಹ್ನ ವೇಳೆಗೆ ಜಾಲ್ಸೂರಿಗೆ ತಲುಪುತ್ತದೆ. ಅಲ್ಲಿಂದ ಅದ್ದೂರಿ ಸ್ವಾಗತದೊಂದಿಗೆ ವಾಹನ ಮೆರವಣಿಗೆಯೊಂದಿಗೆ ಬ್ರಹ್ಮರಥ ಸುಳ್ಯಕ್ಕೆ ಬರಲಿದೆ.

ಡಿ.31ರಂದು ಕುರುಂಜಿಯವರು ಕುಟುಂಬದವರು ರಥವನ್ನು
ದೇವಸ್ಥಾನಕ್ಕೆ ಸಮರ್ಪಣೆ ಮಾಡಲಿದ್ದಾರೆ. 2025ರ ಜನವರಿ 1ರಂದು ರಥದ ಆಲಯದಲ್ಲಿ ವಾಸ್ತುಪೂಜೆ ನಡೆಯಲಿದ್ದು,
ಜ.2ರಂದು ಸುಳ್ಯದಲ್ಲಿ ರಥದ ಭೂಸ್ಪರ್ಶ ನಡೆಯಲಿದೆ.
ಎಂದು ಕೆ.ವಿ.ಜಿ. ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ
ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ.ವಿ. ಯವರು ಮಾಹಿತಿ ನೀಡಿದರು.

ಬ್ರಹ್ಮರಥ ಸಮರ್ಪಣೆಯ ಸಿದ್ಧತೆಗಾಗಿ ಸಮಿತಿಯನ್ನು ಮಾಡಲಾಗಿದ್ದು ಸಮಿತಿಯ ಗೌರವಾಧ್ಯಕ್ಷರಾಗಿ ಸುಳ್ಯದ ಹಿರಿಯ ಉದ್ಯಮಿ ಕೃಷ್ಣ ಕಾಮತ್ ಹಾಗೂ ಅಧ್ಯಕ್ಷರಾಗಿ ನಾರಾಯಣ ಕೇಕಡ್ಕರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಡಾ.ಲೀಲಾಧ‌ರ್ ಡಿ.ವಿ, ಉಪಾಧ್ಯಕ್ಷರಾಗಿ ಕೆ.ವಿ.ಹೇಮನಾಥ ಕುರುಂಜಿಯವರನ್ನು ಆಯ್ಕೆ ಮಾಡಲಾಯಿತು.

ಸಭೆಯ ನೇತೃತ್ವ ವಹಿಸಿದ್ದ ಜೀರ್ಣೋದ್ಧಾ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರವರು ಮಾತನಾಡಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ನೂತನ ಬ್ರಹ್ಮರಥದ ಆಗಮನವಾಗಲಿದೆ.ಡಿ.23ರಂದು ರಥಕ್ಕೆ ಪೂಜೆ ನಡೆದು ಡಿ.31 ರಂದು ದೇವರಿಗೆ ಸಮರ್ಪಣೆ ನಡೆಯಲಿದೆ. ಜ.2ರಂದು ಭೂಸ್ಪರ್ಶವಾಗಲಿದೆ ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸಿ ಯಶಸ್ವಿಗೊಳಿಸಬೇಕೆಂದರು.

ದೇವಸ್ಥಾನ ಅನುವಂಶಿಕ ಆಡಳಿತ ಮೊಕೇಸರ ಡಾ.ಹರಪ್ರಸಾದ್ ತುದಿಯಡ್ಕರವರು ಮಾತನಾಡಿ ಜನವರಿ ತಿಂಗಳಲ್ಲಿ ನಡೆಯುವ ಬ್ರಹ್ಮರಥ ಸಮರ್ಪಣೆ ಹಾಗೂ ದೈವ ದೇವರುಗಳ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು ಬ್ರಹ್ಮರಥೋತ್ಸವವನ್ನು ಎಲ್ಲರೂ ಕಣ್ತುಂಬಿಕೊಳ್ಳಬೇಕು ಎಂದು ಹೇಳಿದರು.

ಶಾಸಕಿ ಭಾಗೀರಥಿ ಮುರುಳ್ಯರವರು ಮಾತನಾಡಿ ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ಸಮರ್ಪಣೆಯಾಗಲಿದ್ದು ಎಲ್ಲರೂ ಕೈ ಜೋಡಿಸಿ ಯಶಸ್ವಿಗೊಳಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಎಂ.ಮೀನಾಕ್ಷಿ ಗೌಡ,ಎನ್.ಜಯಪ್ರಕಾಶ್ ರೈ, ನಗರ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಸದಸ್ಯೆ ಶ್ರೀಮತಿ ಕಿಶೋರಿ ಶೇಟ್, ಎಸ್.ಐ.ಸಂತೋಷ್‌, ಮಧೂರು ದೇವಸ್ಥಾನದ ಮುರಳೀಧರ್ ಉಪಸ್ಥಿತರಿದ್ದರು. ಕೃಪಾಶಂಕರ ತುದಿಯಡ್ಕ ಸ್ವಾಗತಿಸಿ, ಹರ್ಷ ಕರುಣಾಕರ ಪ್ರಾರ್ಥಿಸಿ, ಚಂದ್ರಶೇಖರ ಪೇರಾಲು ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading