ಬೆಂಗಳೂರಿನ ಕಲಾಭೂಮಿ ಪ್ರತಿಷ್ಠಾನದ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವವನ್ನು ಬೆಂಗಳೂರಿನ ಕಲಾಗ್ರಾಮದಲ್ಲಿ ಆಚರಿಸಲಾಯಿತು. ಕನ್ನಡಪರ ಹೋರಾಟಗಾರರು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಸಾ.ರಾ ಗೋವಿಂದರವರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ, ವಾಣಿಜ್ಯ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ಸುಂದರ್ ರಾಜ್, ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷರಾದ ಬಿ.ಎನ್ ಜಗದೀಶ್, ಅಂಬೇಡ್ಕರ್ ಸೇನೆಯ ಅಧ್ಯಕ್ಷರಾದ ಪಿ. ಮೂರ್ತಿ, ಕನ್ನಡವೇ ಸತ್ಯ ರಂಗಣ್ಣ, ನಿರ್ಮಾಪಕರಾದ ಕಿರಣ್ ತೋಟಂಬೈಲು, ಚೇತನ್ ರಾಜ್, ಹಿರಿಯ ನಟರಾದ ಶಂಕರ್ ಭಟ್, ಪ್ರಣಯ ಮೂರ್ತಿ, ಹಿರಿಯ ಸಾಹಿತಿಗಳಾದ ಬೆ.ಗೋ ರಮೇಶ್, ಕಲಾಭೂಮಿ ಪ್ರತಿಷ್ಠಾನದ ಅಧ್ಯಕ್ಷರಾದ ಆಸ್ಕರ್ ಕೃಷ್ಣ ಸಂಚಾಲಕರಾದ ನಿಂಗರಾಜ್ ಮತ್ತು ರಕ್ತದಾನಿ – ಮಂಜು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಾಡಿನ 69 ಸಾಧಕರಿಗೆ, ಸಮಾಜ ಸೇವಕರಿಗೆ ಹಾಗೂ ಪ್ರತಿಭಾನ್ವಿತರಿಗೆ “ಕಲಾಭೂಮಿ ರಾಜ್ಯೋತ್ಸವ ಪ್ರಶಸ್ತಿ”ಯನ್ನು ಪ್ರದಾನ ಮಾಡಲಾಗಿದ್ದು ಕ್ರೀಡಾ ಕ್ಷೇತ್ರದಲ್ಲಿನ ಗಣನೀಯ ಸೇವೆಗಾಗಿ ಸುಳ್ಯದ ಶ್ರೀಮತಿ ಮಿಥುನ ಅಶ್ವಥ್ ಜಬಳೆ ಇವರನ್ನು ಗೌರವಿಸಲಾಯಿತು.
ಶ್ರೀಮತಿ ಮಿಥುನ ಅಶ್ವಥ್‌ರವರು ಐವರ್ನಾಡು ಗ್ರಾಮದ ಜಬಳೆ ಅಶ್ವಥ್ ರವರ ಪತ್ನಿ. ಪಂಬೆತ್ತಾಡಿ ಗ್ರಾಮದ ಬಾಬ್ಲುಬೆಟ್ಟು ಬಾಬು ಗೌಡ ಹಾಗೂ ಚಂದ್ರಾವತಿ ದಂಪತಿಗಳ ಪುತ್ರಿ.