ಕ್ಯಾಂಪ್ಕೊ ಸಂಸ್ಥೆಯ “ಸಾಂತ್ವನ” ಯೋಜನೆಯಡಿಯಲ್ಲಿ ಕ್ಯಾಂಪ್ಕೊ ಸುಳ್ಯ ಶಾಖೆಯ ಸಕ್ರೀಯ ಸದಸ್ಯ ರಝಾಕ್ ಯಂ ಎ ಅವರಿಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ರೂಪಾಯಿ 3 ಲಕ್ಷ ಮೊತ್ತದ ಸಹಾಯಧನದ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲರವರು ಡಿ. 07 ರಂದು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆ ಪುತ್ತೂರು ಇದರ ಪ್ರಾದೇಶಿಕ ವ್ಯವಸ್ಥಾಪಕರಾದ ಪ್ರಕಾಶ್ ಕುಮಾರ್ ಶೆಟ್ಟಿ, ಕ್ಯಾಂಪ್ಕೋ ಶಾಖೆಯ ಪ್ರಬಂಧಕರಾದ ಸಂತೋಷ್ ಪಿ, ಸಕ್ರೀಯ ಸದಸ್ಯ ರಝಾಕ್ ಯಂ ಎ, ಅವರ ಮಗ ಮಹಮ್ಮದ್ ಸಮಜ್, ಸಹೋದರ ಅಬೂಬಕ್ಕರ್ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.