ಅರಂತೋಡಿನಲ್ಲಿ ನಿವೃತ್ತ ಶಿಕ್ಷಕರಾದ ಚಿದಾನಂದ ಅಡ್ತಲೆ ಹಾಗೂ ಸರಸ್ವತಿ ಅಡ್ತಲೆಯವರ ಸುಪುತ್ರ ಡಾ। ನಿತಿನ್ ಅಡ್ತಲೆಯವರ ಸಂಹಿತ ಆಯುರ್ವೇದ ಕ್ಲಿನಿಕ್ ಶುಭಾರಂಭಗೊಂಡಿತು. ಉದ್ಘಾಟನೆಯನ್ನು ಕಟ್ಟಡದ ಮಾಲಕರಾದ ನಿವೃತ್ತ ಶಿಕ್ಷಕಿ ಗಿರಿಜಾ ಜತ್ತಪ್ಪ ಗೌಡ ಅಳಿಕೆ ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲ ಕೆ.ಆರ್ ಗಂಗಾಧರ್ ಕುರುಂಜಿ ಶುಭ ಹಾರೈಸಿದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕರಾದ ಎ.ಕೆ ಜತ್ತಪ್ಪ ಗೌಡ ಅಳಿಕೆ, ಹೊನ್ನಪ್ಪ ಗೌಡ ಅಡ್ತಲೆ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಶ್ರಫ್ ಗುಂಡಿ, ಅರಂತೋಡು ಮೆಸ್ಕಾಂ ಶಾಖೆಯ ಜೆಇ ಅಭಿಷೇಕ್, ದೀಪಕ್ ಇಲೆಕ್ಟ್ರಿಕಲ್ಸ್ ಮಾಲಕ ಸೋಮಶೇಖರ ಪೈಕ, ನಿವೃತ್ತ ಯೋಧ ಭಾಸ್ಕರ ಗೌಡ ಕುತ್ಯಾಳ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿದಿನ ಪೂ. 9-00ರಿಂದ 1-00ರ ತನಕ ಅ. ಗಂಟೆ 2-00ರಿಂದ 3-00ರವರೆಗೆ ಕ್ಲಿನಿಕ್ ತೆರೆದಿರುತ್ತದೆ. ಹಾಗೂ 6 ತಿಂಗಳಿಂದ 14 ವರ್ಷದ ವಯೋಮಾನದ ಮಕ್ಕಳಿಗೆ ಪ್ರತೀ ತಿಂಗಳ ಪುಷ್ಯ ನಕ್ಷತ್ರದ ದಿನದಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.00 ರ ತನಕ ಸ್ವರ್ಣ ಬಿಂದು ಪ್ರಾಶನ ಲಭ್ಯವಿರುತ್ತದೆ ಎಂದು ಡಾ.ನಿತಿನ್ ಅಡ್ತಲೆ ತಿಳಿಸಿದ್ದಾರೆ.
ನಿವೃತ್ತ ಶಿಕ್ಷಕ ಚಿದಾನಂದ ಅಡ್ತಲೆ ಸ್ವಾಗತಿಸಿ, ಡಾ| ನಿತಿನ್ ಅಡ್ತಲೆ ವಂದಿಸಿದರು.