ಕಳೆದ ಹತ್ತು ವರ್ಷಗಳಿಂದ ದ ಕ ಜಿಲ್ಲಾ ಗ್ರಹ ರಕ್ಷಕ ದಳದಲ್ಲಿ ನೀಡಿದ ನ್ಯಾಯಸಮ್ಮತ, ನಿಷ್ಕಾಮ,ನಿಷ್ಕಳಂಕ ಮತ್ತು ಪ್ರಾಮಾಣಿಕ ಸೇವೆಯನ್ನು ಗುರುತಿಸಿ,ದಿನಾಂಕ 06/12/2024 ನೆ ಶುಕ್ರವಾರದಂದು ಭಾರತ ಸರ್ಕಾರದ ಗೃಹ ಸಚಿವಾಲಯ, ನವದೆಹಲಿ ಇವರಿಂದ ನೀಡಲ್ಪಟ್ಟ ಡಿಜಿ ಡಿಸ್ಕ್ ಪುರಸ್ಕಾರವನ್ನು ಪೋಲಿಸ್ ಮಹಾನಿರ್ದೇಶಕರ ಕಚೇರಿ ಬೆಂಗಳೂರು ಇಲ್ಲಿ ನಡೆದ ಗೃಹರಕ್ಷಕ ದಳದ 62ನೆಯ ಉತ್ತಾನ ದಿನಾಚರಣೆಯಂದು ಪೋಲಿಸ್ ಮಹಾನಿರ್ದೇಶಕರು ಹಾಗೂ ಗೃಹರಕ್ಷಕದಳ ಮಹಾ ಸಮಾದೇಷ್ಠರಾದ ಪ್ರಶಾಂತ್ ಕುಮಾರ್ ಸಿಂಗ್ ಠಾಕೂರ್ (ಐ.ಪಿ.ಎಸ್) ಅವರು ದ ಕ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ ಮುರಲೀ ಮೋಹನ್ ಚೂಂತಾರು ಅವರಿಗೆ ಪ್ರಧಾನ ಮಾಡಿದರು ಈ ಸಂದರ್ಭದಲ್ಲಿ ಗೃಹರಕ್ಷಕದಳದ ಉಪ ಮಹಾ ಸಮಾದೇಷ್ಠರಾದ ಅಕ್ಷಯ್.ಎಂ.ಹಾಕೆ
(ಐ.ಪಿ.ಎಸ್.), ನಂಜುಂಡ ಸ್ವಾಮಿ (ಐ ಪಿ ಎಸ್),ಅಪರ ಮಹಾ ಸಮಾದೇಷ್ಟರು ಗೃಹರಕ್ಷಕ ದಳ ಹಾಗೂ ಇತರ ಉನ್ನತ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
- Thursday
- December 12th, 2024