ನವೆಂಬರ್ 29 ರಂದು ಶುಕ್ರವಾರದಂದು ಲೋಕಾರ್ಪಣೆಗೊಂಡ ಅನ್ಸಾರಿಯ ಗಲ್ಫ್ ಆಡಿಟೋರಿಯಂ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಲು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಲ್ ಆಗಮಿಸಬೆಕಿತ್ತು.ಅವರು ಅನಾರೋಗ್ಯ ನಿಮಿತ ಆ ದಿನ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ . ಅವರು ನಾಳೆ ಡಿ.5 ಗುರುವಾರದಂದು ಮದ್ಯಾಹ್ನ 1 ಗಂಟೆಗೆ ಸುಳ್ಯ ಆನ್ಸಾರಿಯಕ್ಕೆ ಭೇಟಿ ನೀಡಲಿದ್ದಾರೆ. ಇನ್ನಿತ್ತರ ಉಲಮಾ ಉಮಾರಾ ನಾಯಕರು, ಧಾರ್ಮಿಕ ಸಾಮಾಜಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅನ್ಸಾರಿಯಾ ಎಜುಕೇಷನ್ ಸೆಂಟರ್ ಸುಳ್ಯ ಸಂಘಟಕರು ತಿಳಿಸಿದ್ದಾರೆ
- Wednesday
- December 4th, 2024