ಗ್ರಾ.ಪಂ ಸಮಸ್ಯೆಗಳ ಬಗ್ಗೆ ವಿಷಯ ಮಂಡನೆ. ಸುಳ್ಯ ತಾಲೂಕು ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟ ವತಿಯಿಂದ ಪಂಚಾಯತ್ ರಾಜ್ ಸಮಾವೇಶವು ತಾಲೂಕು ಪಂಚಾಯತ್ ಸಭಾಂಗಣ ಸುಳ್ಯ ಇಲ್ಲಿ ದ.4 ರಂದು ನಡೆಯಿತು . ಕಾರ್ಯಕ್ರಮವನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ದೀಪ ಬೆಳಗಿ ಉದ್ಘಾಟಿಸಿದರು .
ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿ ಮಾತನಾಡುತ್ತಾ ಗ್ರಾ.ಪಂ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮುಂದಿನ ಅಧಿವೇಶನದಲ್ಲಿ ನಾವೆಲ್ಲ ಒಗ್ಗಟ್ಟಾಗಿ ಧ್ವನಿ ಎತ್ತಲಿದ್ದೆವೆ ಅಲ್ಲದೇ ವೇದಿಕೆಯಲ್ಲಿ ಪುರುಷ ಅಭ್ಯರ್ಥಿಗಳೆ ಕುಳಿತುಕೊಂಡಿದ್ದಾರೆ ಆದರೆ ಮುಂದಿನ ದಿನಗಳಲ್ಲಿ ಮಹಿಳೆಯರು ಕೂಡ ವೇದಿಕೆಯಲ್ಲಿ ಕುಳಿತುಕೊಳ್ಳುವಂತಾಗಲಿ ಎಂದು ಹೇಳಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೈಲೇಶ್ ಅಂಬೆಕಲ್ಲು ಅಧ್ಯಕ್ಷರು, ಗ್ರಾ.ಪಂ. ಸದಸ್ಯರ ಮಹಾ ಒಕ್ಕೂಟ ,ಮುಖ್ಯ ಅಥಿತಿಗಳಾಗಿ ಮಂಜುನಾಥ ಭಂಡಾರಿ ವಿಧಾನಸಭಾ ಪರಿಷತ್ ಸದಸ್ಯರು, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆ , ರಾಜಣ್ಣ ಕಾರ್ಯನಿರ್ವಹಣಾಧಿಕಾರಿಗಳು, ತಾ.ಪಂ ಸುಳ್ಯ , ಹರೀಶ್ ಉಬರಡ್ಕ ಜಿಲ್ಲಾಧ್ಯಕ್ಷರು, ಗ್ರಾ.ಪಂ. ಸದಸ್ಯರ ಮಹಾ ಒಕ್ಕೂಟ , ಮಹೇಶ್ ಕರಿಕ್ಕಳ ಸಂಚಾಲಕರು, ಗ್ರಾ.ಪಂ. ಸದಸ್ಯರ ಮಹಾ ಒಕ್ಕೂಟ, ಕೇಶವ ಅಡ್ತಲೆ ಪ್ರಧಾನ ಕಾಯದರ್ಶಿಗಳು, ಗ್ರಾ.ಪಂ. ಸದಸ್ಯರ ಮಹಾ ಒಕ್ಕೂಟ ,ಸುಭಾಷ್ ಚಂದ್ರ , ವೇದಿಕೆಯಲ್ಲಿ ಉಪಸ್ಥಿತರಿದ್ದರು . ಈ ಸಮಾವೇಶ ಕಾರ್ಯಕ್ರಮದಲ್ಲಿ ಗ್ರಾ.ಪಂ ಸಮಸ್ಯೆಗಳ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತಿದೆ.