ಕನಕಮಜಲು: ಕನಕಮಜಲು ಯುವಕ ಮಂಡಲ, ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು(ಕಾವಾ) ಮೈಸೂರು ಇದರ ಆಶ್ರಯದಲ್ಲಿ ಸು-ಯೋಗ 2024 ನಿಸರ್ಗ ಚಿತ್ರ ಕಲಾ ಶಿಬಿರ ಕನಕಮಜಲಿನ ಮೂರ್ಜೆ ಶ್ರೀ ಬಾಲ ನಿಲಯದಲ್ಲಿ ಆರಂಭಗೊಂಡಿತು. ಡಿ.2ರಿಂದ 8ರ ತನಕ ಚಿತ್ರ ಕಲಾ ಶಿಬಿರ ನಡೆಯಲಿದ್ದು 15ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ. ಡಿ.2ರಂದು ನಡೆದ ಸಮಾರಂಭದಲ್ಲಿ ಚಿತ್ರ ಕಲಾವಿದರಾದ ಮೋನಪ್ಪ ಪುತ್ತೂರು ಶಿಬಿರ ಉದ್ಘಾಟಿಸಿದರು. ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ವಿಶ್ವನಾಥ ಬದಿಕಾನ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಗಂಗಾಧರ ಕಲ್ಲಪಳ್ಳಿ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ವಿಜಯಕುಮಾರ್ ಉಬರಡ್ಕ ಭಾಗವಹಿಸಿದ್ದರು. ಕನಕಮಜಲು ಯುವಕ ಮಂಡಲದ ಅಧ್ಯಕ್ಷ ಹರ್ಷಿತ್ ಉಗ್ಗಮೂಲೆ ಸ್ವಾಗತಿಸಿದರು. ಯುವಕ ಮಂಡಲದ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಅಶ್ವಥ್ ಅಡ್ಕಾರು ವಂದಿಸಿದರು. ಜಯಪ್ರಸಾದ್ ಕಾರಿಂಜ ಕಾರ್ಯಕ್ರಮ ನಿರೂಪಿಸಿದರು.
- Wednesday
- December 4th, 2024