ಸುಬ್ರಹ್ಮಣ್ಯ ಡಿ1: ಕುಮಾರಸ್ವಾಮಿ ಪದವಿಪೂರ್ವ ಕಾಲೇಜಿನಲ್ಲಿ ಕಡಬ ಸುಳ್ಯ ಮತ್ತು ಪುತ್ತೂರು ತಾಲೂಕುಗಳ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ಆಸಕ್ತಿ ಮೂಡಿಸಿ, ತಾವೇ ಸ್ವತಃ ಪ್ರಯೋಗಗಳನ್ನು ಕೈಗೊಳ್ಳಲು ಅನುಕೂಲ ಹೊಂದಿದ್ದು ನೂತನ ಆವಿಷ್ಕಾರಗಳನ್ನು ಮಾಡಲು ಪ್ರೆರೇಪಿಸುವ ವಿಶಿಷ್ಟ ಪ್ರಯೋಗಾಲಯ ದ ವೀಕ್ಷಣೆ ಹಾಗೂ ಮಾಹಿತಿ ಸಂಗ್ರಹಣೆಯನ್ನು
ಶನಿವಾರ ಏನೆಕಲ್ಲು ಪ್ರೌಢಶಾಲಾ 8ನೇ ತರಗತಿಯ ವಿದ್ಯಾರ್ಥಿಗಳು ಪಡಕೊಂಡರು. ಏನೇ ಕಲ್ ಸರಕಾರಿ ಪ್ರೌಢಶಾಲಾ ಶಿಕ್ಷಕಿ ದೀಪ್ತಿಯವರೊಂದಿಗೆ ಇಲ್ಲಿಗೆ ಭೇಟಿ ನೀಡಿ ಪಠ್ಯಕ್ಕೆ ಸಂಬಂದಿಸಿದ ಮತ್ತು ಇತರ ಪ್ರಯೋಗಗಳನ್ನು ಮಾಡಿ ಆನಂದಿಸಿದರು. ಕುಮಾರಸ್ವಾಮಿ ಪದೇಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾll ಸಂಕೀರ್ತ ಹೆಬ್ಬಾರ್ ಮಾರ್ಗದರ್ಶಿ ಶಿಕ್ಷಕರಾದ ಗೌತಮಿ ಮತ್ತು ರಶ್ಮಿ ಸಹಕರಿಸಿದರು.
- Thursday
- December 5th, 2024