ಸುಳ್ಯದಲ್ಲಿ ಕಳೆದ ನಾಲ್ಕು ತಿಂಗಳಿಂದ ಕೆ.ಎಂ. ವಿಕ್ರಮ್ ಎಂಬವರು ನೆಲೆಸಿ, ಕೂಲಿ ಮಾಡಿಕೊಂಡಿದ್ದು, ನ.7 ರಂದು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಮೂಲದ ಮಂಗಳ ಯಾನೆ ಕಾವ್ಯ ಎಂಬಾಕೆಯನ್ನು ವಿವಾಹವಾಗಿದ್ದರು. ನ.20 ರಂದು ಈಕೆ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುತ್ತೇನೆ ಎಂದು ಹೋದವರು ನಾಪತ್ತೆಯಾಗಿದ್ದಾಳೆ ಎಂದು ಸುಳ್ಯ ಪೋಲೀಸರಿಗೆ ಪತಿ ವಿಕ್ರಮ್ ದೂರಿನಲ್ಲಿ ತಿಳಿಸಿದ್ದಾರೆ. ಈಕೆ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಿದರೇ ಸುಳ್ಯ ಅಥವಾ ಹತ್ತಿರದ ಪೋಲೀಸ್ ಠಾಣೆಗೆ ದೂರು ನೀಡುವಂತೆ ಪೋಲೀಸರು ಮನವಿ ಮಾಡಿದ್ದಾರೆ.
- Thursday
- December 5th, 2024