Ad Widget

ಕವನ : ವಿದ್ಯಾರ್ಥಿ ಜೀವನ…

. . . . .

ಶಾಲಾ-ಕಾಲೇಜು ದಿನಗಳದು ಮುಗಿದು ಹೋಗಿದೆ ಇಂದು, ವರ್ಷಗಳ ಕಾಲ ಜೊತೆಗಿದ್ದ ಬಂಧ ದೂರ ಸಾಗುತ್ತಿದೆ ಇಂದು…
ಸ್ವಾರ್ಥವಿಲ್ಲದೇ ಪ್ರೀತಿ ತೋರಿದ ಸ್ನೇಹವದು ಸೂತ್ರ ತಪ್ಪಿದೆ ಇಂದು, ಒಲ್ಲದ ಮನಸ್ಸಿನಿಂದಲೇ ದೂರವಾಗುತ್ತಿದೆ ಇಂದು…
ವರ್ಷಗಳ ಕಾಲ ಜೊತೆಯಾಗಿ ಸಾಗಿದ ಈ ಪಯಣ ದಾರಿ ಬದಲಿಸುತ್ತಿದೆ ಇಂದು, ಇನ್ನು ಅವರವರ ಬದುಕಿನ ದಾರಿಯ ಹುಡುಕಿ ಎಲ್ಲರೂ ಸಾಗುವರು ಮುಂದು…
ಬದುಕಿನ ಬಗ್ಗೆ ಚಿಂತೆಯಿಲ್ಲದೇ ನಗು-ನಗುತ್ತಾ ಖುಷಿಯಾಗಿದ್ದ ಕಾಲ ಸರಿದು ಹೋಗಿದೆ ಇಂದು, ಬದುಕು ಎಂದರೇನೆಂದು ಅರ್ಥವಾಗುವ ಕಾಲ ಸನಿಹ ಬಂದಿದೆ ಇಂದು…
ಎಲ್ಲರೂ ಜೊತೆಗೂಡಿ ಆಡಿದ ಆಟಗಳು, ಎಲ್ಲರೂ ಜೊತೆ ಕುಳಿತು ಕೇಳಿದ ಪಾಠಗಳು, ತಪ್ಪು-ಸರಿಗಳ ತಿದ್ದಿ-ತೀಡಿ ಭವಿಷ್ಯದ ಬದುಕಿಗೆ ದಾರಿ ತೋರಿದ ಗುರುಗಳ ಮಾತುಗಳು, ಮತ್ತೆ ಬೇಕೆಂದರೂ ಮರಳಿ ಬರಲಾರವು ಈ ಮಧುರ ಕ್ಷಣಗಳು, ಮರಳಿ ಬಾರದಿದ್ದರೂ ಮನದಲ್ಲಿ ಅಚ್ಚಳಿಯದೇ ಉಳಿದಿವೆ ವಿದ್ಯಾರ್ಥಿ ಜೀವನದ ಆ ಸುಂದರ ದಿನಗಳ ನೆನಪುಗಳು…✍️ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!