ಸುಳ್ಯ : ಸುಳ್ಯ ಜಯನಗರದಲ್ಲಿ ನಿಷೇಧಿತ ಅಮಲು ಪದಾರ್ಥಗಳಾದ ಗಾಂಜ ಸೇವನೆ ಮತ್ತು ಮಾರಾಟ ಮಾಡುತ್ತಿರುವವರ ಬಗ್ಗೆ ಖಚಿತ ಮಾಹಿತಿ ಆಧರಿಸಿ ಪೋಲಿಸ್ ಅಧಿಕಾರಿಗಳು ದಾಳಿ ನಡೆಸಿ ಮೂವರನ್ನು ಕರೆತಂದಿದ್ದು ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಆರೋಪಿತರ ಆರೋಗ್ಯ ತಪಾಸಣೆ ವರದಿ ಬಂದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ ಎಂದು ತಿಳಿದು ಬಂದಿದ್ದು ಈ ಕುರಿತ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಗಾಂಜ ಸೇವನೆ ಮತ್ತು ಮಾರಾಟ ಪ್ರಕರಣ ದಾಖಲು . ಜಾಮೀನು.ಗಾಂಜ ಸೇವನೆ ಮತ್ತು ಮಾರಾಟ ಮಾಡುತ್ತಿರುವವರ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಸುಳ್ಯದ ಜನಯನಗರದಿಂದ ವರದಿಯಾಗಿತ್ತು.ಜಯನಗರದ ಅಝರ್, ರಿಯಾಝ್, ಮಹಮ್ಮದ್ ಜಾಯಿದ್ ಹಾಗೂ ಇನ್ನೊಬ್ಬ ಗಾಂಜಾ ಮಾರಾಟದ ಕೃತ್ಯದಲ್ಲಿ ತೊಡಗಿಕೊಂಡಿದ್ದು, ಮಹಮ್ಮದ್ ಜಾಯಿದ್ ಎಂಬಾತನ ಮನೆಯಲ್ಲಿ ಗಾಂಜಾ ಪತ್ತೆಯಾಗಿತ್ತು ಅಲ್ಲದೇ ಆರೋಪಿತರ ಗಾಂಜಾ ಸೇವನೆಯ ತಪಾಸಣೆಯ ವೇಳೆ ಜಾಯಿದ್ ಗಾಂಜಾ ಮನೆಯಲ್ಲಿರುವ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು ಈ ಮಾಹಿತಿಯ ಮೇರೆಗೆ ಮಹಮ್ಮದ್ ಜಾಯಿದ್ರ ಮನೆಯ ಮೇಲ್ಪಾವಣಿಯಲ್ಲಿ ಸಣ್ಣ ಗೋಡಾನ್ ಇದ್ದು ಗಾಂಜಾವನ್ನು ಅಲ್ಲಿ ಬಚ್ಚಿಟ್ಟಿದ್ದನೆನ್ನಲಾಗಿದೆ. ಅಂದಾಜು 150 ಗ್ರಾಂ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು ಆರೋಪಿತರನ್ನು ವೈಧ್ಯಕೀಯ ತಪಾಸಣೆಗೆ ಒಳಪಡಿಸಿ ವರದಿ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಜಾಮೀನಿನ ಮೇಲೆ ಬಿಡುಗಡೆ ಗೊಂಡಿದ್ದಾರೆ .