ಗುತ್ತಿಗಾರು – ಕಂದ್ರಪ್ಪಾಡಿ- ಮಡಪ್ಪಾಡಿ ರಸ್ತೆಯ ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಎಂಬಲ್ಲಿ ಮಾಜಿ ಸಚಿವರು ಎಸ್. ಅಂಗಾರ ರವರು ಸಲ್ಲಿಸಿದ ಬೇಡಿಕೆಗೆ ಮಾಜಿ ರಾಜ್ಯಾಧ್ಯಕ್ಷರು,ಮಾಜಿ ಸಂಸದರು ಮಾಡಿದ ಶಿಪಾರಸ್ಸಿನಂತೆ ಮಂಜೂರಾತಿಗೊಂಡು ಟೆಂಡರ್ ಆಗಿ ಅನುಷ್ಠಾನ ಪ್ರಕ್ರಿಯೆ ಸರಕಾರ ಬದಲಾವಣೆಯಿಂದ ತಡೆಹಿಡಿಯಲ್ಪಟ್ಟ ಕಾಮಗಾರಿ ಇದೀಗ ಶಾಸಕಿ ಕು. ಭಾಗೀರಥಿ ಮುರುಳ್ಯ ಹಾಗೂ ಸಂಸದರು ಕ್ಯಾ. ಬ್ರಿಜೇಶ್ ಚೌಟ ರವರ ಮುತುವರ್ಜಿ ಯಿಂದ ಪುನರ್ ಅನುಷ್ಠಾನಗೊಂಡು ರೂ.30 ಲಕ್ಷ ಮೊತ್ತದಲ್ಲಿ 300 ಮೀ ಕಾಂಕ್ರೀಟೀಕರಣ ಕಾಮಗಾರಿ ನಡೆದಿದ್ದು, ಇಂದು ಉದ್ಘಾಟನೆ ಗೊಂಡಿತು.
ಸುಳ್ಯ ಮಂಡಲ ಅಧ್ಯಕ್ಷರಾದ ವೆಂಕಟ್ ವಲಳಂಬೆಯವರ ಉಪಸ್ಥಿತಿಯಲ್ಲಿ ಹಿರಿಯ ಕಾರ್ಯಕರ್ತರಾದ ಮಡಪ್ಪಾಡಿ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎನ್.ಟಿ.ಹೊನ್ನಪ್ಪರವರು ಉದ್ಘಾಟನೆ ನೆರವೇರಿಸಿದರು. ಮೀನುಗಾರಿಕೆ ನಿಗಮದ ಮಾಜಿ ಅಧ್ಯಕ್ಷರು,ಬಾಜಪ ರಾಜ್ಯ ಕಾರ್ಯಕಾರಿಣಿ ಸದಸ್ಯರು ಎ.ವಿ ತೀರ್ಥರಾಮ, ದ.ಕ ಜಿಲ್ಲಾ ಕಾರ್ಯದರ್ಶಿ ವಿನಯ ಕುಮಾರ್ ಮುಳುಗಾಡು, ಪಿಎಸಿಎಸ್ ಬ್ಯಾಂಕ್ ಗುತ್ತಿಗಾರು ಇದರ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಗುತ್ತಿಗಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಕೃಷ್ಣಯ್ಯ ಮೂಲೆತೋಟ, ದೇವಚಳ್ಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ದಿವಾಕರ ಮುಂಡೋಡಿ, ದೇವಚಳ್ಳ ಗ್ರಾಮ ಪಂಚಾಯತ್ ಸದಸ್ಯರಾದ ಭವಾನಿಶಂಕರ ಮುಂಡೋಡಿ, ಪದ್ಮನಾಭ ಮೀನಾಜೆ, ಚಂದ್ರಶೇಖರ ಬಾಳುಗೋಡು, ರಾಜೀವ ವಾಲ್ತಾಜೆ , ಉದಯ ಮುಂಡೋಡಿ , ಉದಯರವಿ ರುದ್ರಚಾಮುಂಡಿ, ಶಶಿಧರ ಬಾಳೆಗುಡ್ಡೆ, ರಾಕೇಶ್ ರಾಜ್ ಹಿರಿಯಡ್ಕ, ಪ್ರೀತಮ್ ಮುಂಡೋಡಿ, ವಿನೋದ್ ಕುಮಾರ್ ಮುಂಡೋಡಿ,ಪದ್ಮನಾಭ ಕಾಜಿಮಡ್ಕ, ನವೀನ್ ವಾಲ್ತಾಜೆ, ಹಾಗೂ ನಾಲ್ಕೂರು, ದೇವಚಳ್ಳ, ಮಡಪ್ಪಾಡಿ ಗ್ರಾಮಗಳ ರಸ್ತೆ ಫಲಾನುಭವಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ದ.ಕ. ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿನಯಕುಮಾರ್ ಮುಳುಗಾಡು ಸ್ವಾಗತಿಸಿ, ದೇವಚಳ್ಳ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ, ಬಿಜೆಪಿ ಶಕ್ತಿ ಕೇಂದ್ರ ಪ್ರಮುಖರಾದ ದಿವಾಕರ ಮುಂಡೋಡಿ ವಂದಿಸಿದರು.