
ಪಂಚಶ್ರೀ ಯುವಕ ಮಂಡಲ ಪಂಬೆತ್ತಾಡಿ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನಡೆಯಿತು.
2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಲೋಕೇಶ್ ಪಂಜದಬೈಲು, ಗೌರವಾಧ್ಯಕ್ಷರಾಗಿ ನಾಗಪ್ಪ ಗೌಡ ಪಂಜದಬೈಲು, ಕಾರ್ಯದರ್ಶಿಯಾಗಿ ಶ್ರೀಧರ್ ಭೀಮಗುಳಿ, ಉಪಾಧ್ಯಕ್ಷರಾಗಿ ನೇಮಿರಾಜ್ ಪಂಜದಬೈಲು, ಜತೆಕಾರ್ಯದರ್ಶಿಯಾಗಿ ರಮೇಶ್ ಮಡಿವಾಳಮಜಲು, ಖಜಾಂಜಿಯಾಗಿ ಯಕ್ಷಿತ್ ಜಾಕೆ, ಕ್ರೀಡಾ ಕಾರ್ಯದರ್ಶಿಯಾಗಿ ವಿನಯಕುಮಾರ್ ಕರಿಕ್ಕಳ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಕಿಶನ್ ಗರಡಿ, ಆಂತರಿಕ ಲೆಕ್ಕಪರಿಶೋಧಕರಾಗಿ ಉಮೇಶ್ ಪಂಜದಬೈಲು ಆಯ್ಕೆಯಾದರು.
ನಿರ್ದೇಶಕರಾಗಿ ಬಾಲಕೃಷ್ಣ ಕೋಟೆಗುಡ್ಡೆ, ಜೀವನ್ ಶೆಟ್ಟಿಗದ್ದೆ, ಸುಜಿತ್ ಪಂಬೆತ್ತಾಡಿ, ಕಾರ್ತಿಕ್ ಭೀಮಗುಳಿ, ಸುರೇಶ್ ಬೆಳಗಜೆ, ದಿನೇಶ್ ಪಾಟಾಜೆ, ಕಿರಣ್ ಕುಮಾರ್ ಭೀಮಗುಳಿ ಆಯ್ಕೆಗೊಂಡರು.
ಗೌರವ ಸಲಹೆಗಾರರಾಗಿ ಧರ್ಮಣ್ಣ ನಾಯ್ಕ ಗರಡಿ, ವಿಶ್ವನಾಥ್ ಜಾಕೆ, ಸಂತೋಷ್ ಜಾಕೆ, ದಿಲೀಪ್ ಬಾಬ್ಲುಬೆಟ್ಟು, ಹೊನ್ನಪ್ಪ ನಾಯ್ಕ ಗರಡಿ, ತೀರ್ಥಾನಂದ ಕೊಡಂಕೇರಿ, ಅಶ್ವಿನ್ ಬಾಬ್ಲುಬೆಟ್ಟು, ಉಮೇಶ್ ಪಂಜದಬೈಲು, ಜನಾರ್ಧನ ಬೆಳಗಜೆ, ದಿನೇಶ್ ಪಂಜದಬೈಲು, ಲವಕುಮಾರ್ ಕೋಟೆಗುಡ್ಡೆ ಹಾಗೂ ಜಗದೀಶ್ ಮಠ ಆಯ್ಕೆಯಾದರು.