
ಪರಿಶಿಷ್ಟ ಜಾತಿ ಮುಗೇರ ಜನಾಂಗದ ಕುಲದೈವ ಗಡಿ ಮೊಗೇರ್ಕಳ ದೈವಗಳ ಆರಾಧನೆ ಹಾಗೂ ಭವಿಷ್ಯದಲ್ಲಿ ಸಮಾಜದಲ್ಲಿ, ಜನಾಂಗದ ವಿಶ್ವಾಸವನ್ನು ಉಳಿಸಿಕೊಳ್ಳುವ ಉದ್ದೇಶದಿಂದ 2004-05 ರಲ್ಲಿ ದೀನ ದಯಾಳ್ ಎಜ್ಯುಕೇಶನಲ್ ರೂರಲ್ & ಅರ್ಬನ್ ಡೆವಲಪ್‌ಮೆಂಟ್ ಟ್ರಸ್ಟ್ (ರಿ.) ಅನ್ನು ರಚನೆ ಮಾಡಲಾಯಿತು. ಇದರ ಮೂಲಕ ದಾಸನಕನೆಯಲ್ಲಿ ಮೊಗೇರ್ಕಳ ದೈವದ ಗುಡಿ ನಿರ್ಮಾಣ, ಬ್ರಹ್ಮದೇವರ ಗುಂಡ ನಿರ್ಮಾಣ ಮತ್ತು ದೈವಸ್ಥಾನ ಹಾಗೂ ಬ್ರಹ್ಮ ದೇವರ ಗುಂಡದ ಛಾವಣಿಗೆ ತಾಮ್ರದ ಹೊದಿಕೆಯನ್ನು ಮಾಡಿಸಿ, ಕೊರಗಜ್ಜನ ಕಟ್ಟೆ ಮಂತ್ರವಾದಿ ಗುಳಿಗಕಟ್ಟಿ ಹಾಗೂ ದೈವ ನರ್ತಿಸುವ ಸ್ಥಳಕ್ಕೆ (ಕಳ) ಶಾಶ್ವತ ಕಾಂಕ್ರೀಟ್ ಚಪ್ಪರ ಮಾಡಿರುವುದು ಅಲ್ಲದೆ, ದೇವಚಳ್ಳ ಗ್ರಾಮದ ದೇವ ಎಸ್.ಸಿ ಕಾಲನಿ, ಅಲೆಟ್ಟಿ ಗ್ರಾಮದ ಕುಡೆಶಲ್ಲು ಎಸ್.ಸಿ. ಕಾಲನಿಗಳಲ್ಲಿ ಸರಕಾರದ ಜೊತೆಗೆ ಟ್ರಸ್ಟ್‌ನ ಸಹಕಾರದೊಂದಿಗೆ ವಸತಿ ನಿರ್ಮಾಣ, ಕಡುಬಡತನದಲ್ಲಿರುವ ವಿದ್ಯಾರ್ಥಿಗಳಿಗೆ, ಆರ್ಥಿಕ ಸಹಕಾರ. ಅಸೌಖ್ಯದಲ್ಲಿ ಬಳಲುತ್ತಿರುವ ವ್ಯಕ್ತಿಗಳಿಗೆ ಆರ್ಥಿಕ ಸಹಕಾರ, ಜನಾಂಗದ ಕುಲದೈವಗಳ ಗುಡಿ ನಿರ್ಮಾಣ, ಇತರ ಪರಿಶಿಷ್ಟ ಜಾತಿಗಳ ದೈವಸ್ಥಾನಕ್ಕೆ ಆರ್ಥಿಕ ಸಹಕಾರ ಅಲ್ಲದೆ ಇತರ ಸಮಾಜದ ಕಾಠ್ಯಕ್ರಮಗಳಿಗೂ ಆರ್ಥಿಕ ಸಹಕಾರ ನೀಡುತ್ತಾ ಬಂದಿದೆ.
ಇದೀಗ ನೆಲ್ಲೂರು ಕೆಮ್ರಾಜಿ ಗ್ರಾಮದ ದಾಸನಕಜೆಯಲ್ಲಿ ಸುಸಜ್ಜಿತ ಸಭಾಭವನ, ಕುಲದ ಸಾಂಸ್ಕೃತಿಕ ಅಧ್ಯಯನ ಕೇಂದ್ರ, ಕಲಾಕೇಂದ್ರವನ್ನು ಸುಮಾರು 140 ಲಕ್ಷ ಅಂದಾಜು ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸುವುದರೊಂದಿಗೆ, ಕಡು ಬಡತನದಲ್ಲಿರುವ ಜನಾಂಗದ ಹಾಗೂ ಇತರ ಎಲ್ಲಾ ವರ್ಗದ ಜನರ ಆರ್ಥಿಕ ಅಭಿವೃದ್ಧಿಯನ್ನು ಕಣ್ಣ ಮುಂದೆ ಇಟ್ಟುಕೊಂಡು ದೀನದಯಾಳ್ ಸಹಕಾರ ಸಂಘ’ ಪ್ರಾರಂಭಿಸಲು ಉದ್ದೇಶಿಸಿ ಟಿಎಪಿಸಿಎಂಎಸ್ ಕಟ್ಟಡದ 2ನೇ ಮಹಡಿ, ಕಾರ್‌ಸ್ಟ್ರೀಟ್ ಸುಳ್ಯ ಇಲ್ಲಿ ಕಛೇರಿ ಪ್ರಾರಂಭವಾಗಲಿದೆ ಎಂದು ಮಾಜಿ ಸಚಿವ, ಸಹಕಾರ ಸಂಘದ ಮುಖ್ಯ ಪ್ರವರ್ತಕ ಎಸ್. ಅಂಗಾರ ಹೇಳಿದರು.
ಉದ್ಘಾಟನಾ ಸಮಾರಂಭ
ದೀನದಯಾಳ್ ಸಹಕಾರ ಸಂಘದ ನೂತನ ಕಛೇರಿಯು ಉದ್ಘಾಟನೆಯು ಡಿ 07 ಶನಿವಾರ ಪೂರ್ವಾಹ್ನ ಗಂಟೆ 11.22ರ ಕುಂಭ ಲಗ್ನದಲ್ಲಿ ಸುಳ್ಯದ ಟಿ.ಎ.ಪಿ.ಸಿ.ಯಂ.ಯಸ್ ಬಿಲ್ಡಿಂಗ್ ನ 2ನೇ ಮಹಡಿಯಲ್ಲಿ ನಡೆಯಲಿದೆ. ಉದ್ಘಾಟನೆಯನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ। ಎಂ ಎನ್ ರಾಜೇಂದ್ರ ಕುಮಾರ್ ನೆರವೇರಿಸಲಿದ್ದಾರೆ.
ಪೂ.11.30 ಕ್ಕೆ ದುರ್ಗಾಪರಮೇಶ್ವರಿ ಕಲಾಮಂದಿರ ಬೂಡು ಕೇರ್ಪಳದಲ್ಲಿ ನಡೆಯುವ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ, ಸಂಘದ ಮುಖ್ಯಪ್ರವರ್ತಕ ಯಸ್. ಅಂಗಾರ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದ ಬ್ರಿಜೇಶ್ ಚೌಟ, ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ, ವಿಧಾನ ಪರಿಷತ್ ಸದಸ್ಯರುಗಳಾದ ಕಿಶೋರ್ ಕುಮಾರ್ , ಮಂಜುನಾಥ ಭಂಡಾರಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಟಿ.ಎ.ಪಿ.ಸಿ.ಯಂ.ಯಸ್ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಸಹಕಾರ ಸಂಘಗಳ ಉಪ ನಿರ್ದೇಶಕ ರಮೇಶ್ ಎನ್.ಎಚ್., ಸಹಕಾರ ಸಂಘಗಳ ಸಹಾಯಕ ನಿರ್ದೇಶಕ ರಘು, ತಾಲೂಕು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲೂಕು ಸಂಘ ಚಾಲಕ ಚಂದ್ರಶೇಖರ ತಳೂರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ್ , ಟಿ.ಎ.ಪಿ.ಸಿ.ಯಂ.ಯಸ್ ಕಾರ್ಯದರ್ಶಿ ಜಯರಾಮ್ ದೇರಪ್ಪಜ್ಜನ ಮನೆ, ಭಾ.ಜ.ಪ ಸುಳ್ಯ ಮಂಡಲದ ಅಧ್ಯಕ್ಷ ವೆಂಕಟ್ ವಳಲಂಬೆ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಲೆಕ್ಕ ಪರಿಶೋಧಕ ಶ್ರೀಪತಿ ಭಟ್, ರಾಜ್ಯ ಮೊಗೇರ ಸಂಘದ ಅಧ್ಯಕ್ಷ ನಂದರಾಜ್ ಸಂಕೇಶ, ಮೊಗೇರ ಅಧ್ಯಯನ ಟ್ರಸ್ಟ್ ಅಧ್ಯಕ್ಷ ಡಾ. ರಘು ಬೆಳ್ಳಿಪ್ಪಾಡಿ ಗೌರವ ಉಪಸ್ಥಿತರಿರಲಿದ್ದಾರೆ ಎಂದು ಮಾಜಿ ಸಚಿವ ಎಸ್.ಅಂಗಾರ ಕಾರ್ಯಕ್ರಮದ ವಿವರ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿ ಜಗನ್ನಾಥ , ಹರಿಶ್ಚಂದ್ರ ಹಾಸನಡ್ಕ ಉಪಸ್ಥಿತರಿದ್ದರು.