Ad Widget

ನಾಲ್ಕೂರು : ಬ್ಯಾಂಕ್ ಖಾತೆ ತೆರೆಯುವ ಬಗ್ಗೆ ಮತ್ತು ಮಲ್ಲಿಗೆ ಕೃಷಿ ಮಾಹಿತಿ ಕಾರ್ಯಕ್ರಮ

. . . . . . . . .

ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ರಿ. ಮಂಗಳೂರು ಪ್ರವರ್ತಕರು ಬ್ಯಾಂಕ್ ಆಫ್ ಬರೋಡ, ವಿಜಯ ಗ್ರಾಮ ಸಮಿತಿ ನಾಲ್ಕೂರು, ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಆಶಯದಲ್ಲಿ ನ. 29ರಂದು ಹಾಲೆಮಜಲಿನ ವೆಂಕಟೇಶ್ವರ ಸಭಾಭವನದಲ್ಲಿ ಬ್ಯಾಂಕ್ ಆಫ್ ಬರೋಡದಲ್ಲಿ ಖಾತೆ ತೆರೆಯುವ ಬಗ್ಗೆ ಮತ್ತು ಮಲ್ಲಿಗೆ ಕೃಷಿ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

. . . . . . .

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಿಜಯ ಗ್ರಾಮ ಸಮಿತಿಯ ಅಧ್ಯಕ್ಷ ಡಿ.ಆರ್. ಉದಯಕುಮಾರ್ ವಹಿಸಿದ್ದರು. ಉದ್ಘಾಟನೆಯನ್ನು ಬ್ಯಾಂಕ್ ಆಫ್ ಬರೋಡ ಸುಬ್ರಮಣ್ಯ ಶಾಖೆಯ ವ್ಯವಸ್ಥಾಪಕರಾದ ವಿಸ್ರುತ್ ಕುಮಾರ್ ಕೆ.ಎಸ್.‌ ದೀಪ ಬೆಳಗಿಸಿ ಬ್ಯಾಂಕಿನಿಂದ ಸಂಘಗಳ ಮತ್ತು ರೈತರಿಗೆ ಸಿಗುವ ಸಾಲ ಮತ್ತು ಸಬ್ಸಿಡಿಯ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು.

ಇತ್ತೀಚೆಗೆ ಸಿ.ಎ. ಇಂಟರ್ಮೀಡಿಯಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿಜಯ ಗ್ರಾಮ ಸಮಿತಿಯ ಸದಸ್ಯ ಕುಚ್ಚಾಲ ರಾಜೀವಿ ನಾಗೇಶ್ ರವರ ಪುತ್ರ ಅವಿನ್ ಇವರನ್ನು ಗೌರವಿಸಲಾಯಿತು. ಮಲ್ಲಿಗೆ ಕೃಷಿಯ ಬಗ್ಗೆ ಶ್ರೀಮತಿ ನೇತ್ರಾವತಿ ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯ ಶ್ರೀಮತಿ ಅನಿತಾ ಮೆಟ್ಟಿನಡ್ಕ. ಯುವಜನ ಸಂಯುಕ್ತ ಮಂಡಳಿ ಸುಳ್ಯ ಇದರ ಅಧ್ಯಕ್ಷರಾದ ವಿಜಯಕುಮಾರ್. ಉಬರಡ್ಕ, ಪಂಜ ರೈತ ಸಂಪರ್ಕ ಕೇಂದ್ರದ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ. ಕುಮಾರಿ ಸ್ಮಿತಾ, ಸ್ವಸಸಾಯ ಸಂಘ ಮತ್ತು ಕೃಷಿ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಯುವಜನ ಸಂಯುಕ್ತ ಮಂಡಳಿಯ ಪ್ರಧಾನ ಕಾರ್ಯದರ್ಶಿ ನಮಿತಾ ಹರ್ಲಡ್ಕ, ಆತ್ಮ ರೈತ ಮಿತ್ರ ಸ್ವಸಹಾಯ ಸಂಘದ ಅಧ್ಯಕ್ಷ ಶ್ರೀಮತಿ ಗೀತಾ ಕೆ ಎಂ., ವಿಜಯ ಗ್ರಾಮ ಸಮಿತಿಯ ಸದಸ್ಯರುಗಳು ಊರಿನವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಲ್ಲಿಗೆ ಕೃಷಿಯ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಬ್ಯಾಂಕ್ ಆಫ್ ಬರೋಡದಲ್ಲಿ ನಾಗರಿಕರು ನೂತನ ಖಾತೆ ತೆರೆದುಕೊಂಡರು. ಕಾರ್ಯಕ್ರಮದಲ್ಲಿ ವಿಜಯ ಗ್ರಾಮ ಸಮಿತಿಯ ಕಾರ್ಯದರ್ಶಿ ದಿನೇಶ್ ಹಾಲೆಮಜಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading