ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾಗಿ ಸುಳ್ಯದ ನ್ಯಾಯವಾದಿ ಹಾಗೂ ನೋಟರಿ ಅಬೂಬಕ್ಕರ್ ಅಡ್ಕಾರ್ ಅವರನ್ನು ನೇಮಿಸಿದ ಸರಕಾರದ ಆದೇಶ ಮತ್ತೆ ಜಾರಿಗೆ ಬಂದಿದೆ.
ಸೆಪ್ಟೆಂಬರ್ 9 ರಂದು ಸರಕಾರ ರಾಜ್ಯದ ಹಲವು ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಬಾಲ ನ್ಯಾಯ ಮಕ್ಕಳ ಪಾಲನೆ ಮತ್ತು ರಕ್ಷಣಾ ಕಾಯ್ದೆ 2015 ತಿದ್ದುಪಡಿ ಕಾಯ್ದೆ 2021 ಹಾಗೂ ಬಾಲನ್ಯಾಯ ಮಾದರಿ ನಿಯಮಗಳು 2016 ರನ್ವಯ ತಿದ್ದುಪಡಿ ನಿಯಮಗಳು 2022 ರಂತೆ ಈ ನೇಮಕಾತಿಯನ್ನು ಕರ್ನಾಟಕದ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನೇಮಿಸಿತ್ತು.
ಈ ನೇಮಕಾತಿಗೆ ಗಂಭೀರ ಸ್ವರೂಪದ ದೂರುಗಳು ಬಂದ ಹಿನ್ನೆಲೆಯಲ್ಲಿ ಅದೇ ಇಲಾಖೆಯ ಕಾರ್ಯದರ್ಶಿಯವರು ಈ ಆದೇಶವನ್ನು12 -9- 2024 ರಂದು ತಡೆ ಹಿಡಿದು ಆದೇಶ ಮಾಡಿದ್ದರು. ಅಬೂಬಕ್ಕರ್ ಲಾಯರ್‌ರವರ ನೇಮಕಾತಿಯೂ ಈ ತಡೆಹಿಡಿದ ಆದೇಶಕ್ಕೆ ಒಳಪಟ್ಟಿತ್ತು. ಇದೀಗ ಸರಕಾರವು ಈ ತಡೆಯನ್ನು ತೆರೆವುಗೊಳಿಸಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಮಕ್ಕಳ ಕಲ್ಯಾಣ ಸಮಿತಿಗಳಿಗೂ ಕಾರ್ಯ ನಿರ್ವಹಿಸುವ ಆದೇಶ ನೀಡಿದೆ.
ದಿನಾಂಕ 28.11.2024ರಂದು ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯವರ ಪರವಾಗಿ ಸಂಬಂಧಿಸಿದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಆದೇಶ ಕಳುಹಿಸಿರುವ ಇಲಾಖೆಯ ಅಧೀನ ಕಾರ್ಯದರ್ಶಿ ಆರ್. ಲತಾರವರು ಈಗ ನೇಮಕ ಬಂದಿರುವ ಅಧ್ಯಕ್ಷರು ಮತ್ತು ಸದಸ್ಯರು ವಿದೇಶಿ ದೇಣಿಗೆಯನ್ನು ಸ್ವೀಕರಿಸುವ ಯಾವುದೇ ಸಂಸ್ಥೆಗಳಲ್ಲಿ ಸಂಬಂಧ ಹೊಂದಿರುವರೇ ಅಥವಾ ಸರ್ಕಾರಿ ಇತರ ಸಂಸ್ಥೆಗಳಲ್ಲಿ ಇರುವರೇ ಎಂದು ಪರಿಶೀಲಿಸಿ ವರದಿ ನೀಡುವಂತೆ ಆದೇಶಿಸಿದ್ದರು.
ಇದರ ಬೆನ್ನಲ್ಲಿ ಹೊಸದಾಗಿ ನೇಮಕಗೊಂಡ ಎಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರುಗಳನ್ನು ಒಂದು ದಿನದ ಪುನಶ್ಚತನ ತರಬೇತಿಗಾಗಿ ಬೆಂಗಳೂರಿಗೆ ಆಹ್ವಾನಿಸಲಾಗಿದೆ. ದ.೩ರಂದು ಬೆಂಗಳೂರಿನಲ್ಲಿರುವ ಕರ್ನಾಟಕ ಜ್ಯುಡಿಶಿಯಲ್ ಅಕಾಡೆಮಿಯಲ್ಲಿ ತರಬೇತಿ ನಡೆಯಲಿದೆ.
ಅಬೂಬಕ್ಕರ್ ಅಡ್ಕಾರ್‌ರವರು ಸುಳ್ಯದಲ್ಲಿ ನ್ಯಾಯವಾಗಿ ಹಾಗೂ ನೋಟರಿಯಾಗಿದ್ದು, ಹೈಕೋರ್ಟಿನಲ್ಲಿ ಕಾನೂನು ಸೇವಾ ಪ್ರಾಧಿಕಾರದ ಪ್ಯಾನಲ್ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.