Ad Widget

ಅಕ್ರಮ ಸಕ್ರಮ ಸಮಿತಿ ಮುಂದೆ ಪ್ರಸ್ತಾಪವಿಲ್ಲ ಸ್ಥಳ ಪರಿಶೀಲನೆ ಮಾಡದೆ ಅರ್ಜಿ ತಿರಸ್ಕಾರ

. . . . .

ಅಕ್ರಮ ಸಕ್ರಮ ಷರತ್ತು ಸಡಿಲಿಸಲು : ಮುಳಿಯ ಕೇಶವ ಭಟ್ ಮನವಿ

ಸರ್ಕಾರದ ಅಕ್ರಮ-ಸಕ್ರಮ ಯೋಜನೆಯ ಷರತ್ತುಗಳನ್ನು ಸಡಿಲಿಸಿ ಯೋಜನೆಯ ಪ್ರಯೋಜನಗಳಿಂದ ರೈತರು ವಂಚಿತರಾಗದಂತೆ ಮಾಡಬೇಕೆಂದು ಸರ್ಕಾರಕ್ಕೆ ತಾ.ಪಂ ಮಾಜಿ ಅಧ್ಯಕ್ಷ ಹಾಗೂ ಭಾರತೀಯ ಮಂಡಳಿಯ ನಿರ್ದೇಶಕ ಮುಳಿಯ ಮನವಿ ಮಾಡಿದ್ದಾರೆ.

ಅರ್ಜಿದಾರರು (ನಮೂನೆ-50.53 ರಡಿ ಅರ್ಜಿ ಸಲ್ಲಿಸಿ ಕೃತಾವಳಿ ಮಾಡಿರುವ ಜಮೀನು ಮಂಜೂರಾಗದೇ ಇದ್ದರೂ) ನಮೂನೆ 50, 53 ರಲ್ಲಿ ಅರ್ಜಿಸಲ್ಲಿಸಿರುತ್ತಾರೆ ಎಂಬುದು. ಕೃತಾವಳಿ ಮಾಡಿರುವ ಜಮೀನು ಕುಮ್ಮಿ, ಕಾನ, ಬಾಣೆ ಡೀಮ್ಸ್ ಅರಣ್ಯ ವ್ಯಾಪ್ತಿಯಲ್ಲಿ ಬರುವ ಕಾರಣ ಎಂದೂ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ.

ಇದರಿಂದಾಗಿ ಕೃಷಿಯಿಂದಲೇ ಜೀವನ ನಡೆಸುತ್ತಿರುವ ಅದೆಷ್ಟೋ ರೈತರಿಗೆ ಅನ್ಯಾಯವಾಗುತ್ತಿದೆ. ಕುಮ್ಮಿ-ಕಾನ, ಬಾಣೆ ಜಮೀನುಗಳಿಗೆ ನ್ಯಾಯಾಲಯದ ತಡೆಯಾಜ್ಞೆ ಇದೆ ಎಂದು ಹೇಳುತ್ತಿದ್ದರೂ ನಮೂನೆ -50, 53ರ ಅಡಿ ಮಂಜೂರಾದ ಎಷ್ಟೋ ಉದಾಹರಣೆಗಳಿವೆ. ಆದುದರಿಂದ ತಾವುಗಳು ನಿಯಮಗಳನ್ನು ಈ ಕೆಳಗಿನಂತೆ ಸಡಿಲಿಸಿ ರೈತರಿಗೆ ಅನುಕೂಲವಾಗುವಂತೆ ಬದಲಾವಣೆ ತರಬೇಕಾಗಿ ಎಂಬ ಉಲ್ಲೇಖಿಸಿ ಅವರು ಸರ್ಕಾರವನ್ನು ವಿನಂತಿಸಿದ್ದಾರೆ ಅಕ್ರಮ ಸಕ್ರಮ ಕಡತಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಅಕ್ರಮ ಸಕ್ರಮ ಸಮಿತಿಯ ಮುಂದೆ ಅಕ್ರಮ ಸಕ್ರಮ ಅರ್ಜಿಗಳನ್ನು ಸ್ಥಳ ಪರಿಶೀಲನೆ ನಡೆಸಿ ಇಡಬೇಕು ಆದರೆ ಈಗ ಸ್ಥಳ ಪರಿಶೀಲನೆ ನಡೆಸದೆ ಅರ್ಜಿ ತಿರಸ್ಕಾರ ವಾಗುತ್ತಿರುವುದಾಗಿ ವರದಿಯಾಗಿದೆ. ಅಧಿಕಾರಿಗಳ ರಿಪೋರ್ಟ್ ಆಧರಿಸಿ ಜಿಲ್ಲಾಧಿಕಾರಿ ಅರ್ಜಿ ತಿರಸ್ಕರಿಸಿ, ಅಕ್ರಮ ತೆರವಿಗೆ ಆದೇಶ ಮಾಡಿದ್ದಾರೆ, ಮೊದಲೇ ಬೆಳೆ ನಾಶದಿಂದ ತೊಂದರೆಗೊಳಗಾದ ರೈತನಿಗೆ ಮತ್ತೆ ತೊಂದರೆ ಕಟ್ಟಿಟ್ಟ ಬುತ್ತಿ. ಈ ತೊಂದರೆ ತಪ್ಪಿಸುವಂತೆ ಕೋರಿದ್ದಾರೆ.

ಅಲ್ಲದೆ 1970 ರ ಕೈ ಬರಹದ ಪಹಣಿಯ ಆಧಾರದಂತೆ ಜಂಟಿ ಸರ್ವೆ ಮಾಡಬೇಕು ಹಾಗೂ 1998 ರ ಹಿಂದೆ ಅಕ್ರಮ ಸಕ್ರಮದಡಿ ಆದದಂತಹ ಭೂಮಿ ಒಡೆತನದ ಹಕ್ಕು ಪತ್ರ ರದ್ದತಿಗೆ ಡಿ.ಎಫ್.ಒ ಸಹಾಯಕ ಆಯುಕ್ತರಿಗೆ ಆದೇಶ ಮಾಡಿರುವುದಾಗಿ ತಿಳಿದು ಬಂದಿದ್ದು ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳ ಬೇಕಾಗಿ ಮನವಿ ಮಾಡಿದ್ದಾರೆ.

. ಸಂಸದ ಬ್ರಿಜೇಶ್ ಚೌಟ, ಸುಳ್ಯ ವಿಧಾನ ಸಭಾ ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ವಿಧಾನಪರಿಷತ್‌ ಸದಸ್ಯ ಕಿಶೋರ್ ಕುಮಾ‌ರ್ ಬೊಟ್ಯಾಡಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾಜಿ ಸಚಿವ ಎಸ್ ಅಂಗಾರ ಮತ್ತು ದ ಕ ಗ್ಯಾರೆಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಭರತ್‌ ಮುಂಡೋಡಿ ಯವರಿಗೆ ಮನವಿ ಸಲ್ಲಿಸಲಾಗಿದ್ದು ಈ ಸಂದರ್ಭ ರಾಕೇಶ್ ಮೆಟ್ಟಿನಡ್ಕ. ವರ್ಷಿತ್ ಕಡ್ತಲ್ಕಜೆ ಜೊತೆಗಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!