Ad Widget

ಗೃಹ ಸಚಿವ ಪರಮೇಶ್ವರ್ ದ.ಕ ಜಿಲ್ಲೆಗೆ ಆಗಮನ – ದೊರೆಯುವುದೇ ಕುಕ್ಕೆ ಠಾಣೆಗೆ ಉದ್ಘಾಟನೆ ಭಾಗ್ಯ

ಸುಬ್ರಹ್ಮಣ್ಯ: ರಾಜ್ಯದ ನಂಬರ್ ವನ್ ದೇವಾಲಯ ಹಾಗೂ ನಾಗಾರಾಧನೆಯ ಪವಿತ್ರ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ಹೊರ ಠಾಣೆಯ ಕೆಲಸ ಕಾಮಗಾರಿಗಳು ಸಂಪೂರ್ಣವಾಗಿ ಉದ್ಘಾಟನೆಗೆ ಸಿದ್ದಗೊಂಡಿದ್ದರೂ ಉದ್ಘಾಟನೆ ಭಾಗ್ಯ ದೊರೆಯದೇ ಇರುವುದು ದೌರ್ಭಾಗ್ಯವೇ ಸರಿ ಎನ್ನಬಹುದು.

. . . . .

ಈ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಹಿನ್ನೆಲೆಯಲ್ಲಿ ದ.ಕ ಜಿಲ್ಲೆಗೆ ಗೃಹ ಸಚಿವರು ಆಗಮಿಸುತ್ತಿದ್ದು, ಈ ಭೇಟಿ ಸಂದರ್ಭದಲ್ಲಿ ಪೋಲಿಸ್ ಇಲಾಖೆ ಮತ್ತು ನಾಯಕರು ಜನಪ್ರತಿನಿಧಿಗಳು ಗಮನ ಹರಿಸಿ ಕುಕ್ಕೆಯಲ್ಲಿ ಇಂದಿನಿಂದ ಅಧಿಕೃತವಾಗಿ ಜಾತ್ರಾ ಮಹೋತ್ಸವ ನಡೆಯಲ್ಲಿದ್ದು ಭದ್ರತೆಗಾಗಿ ಹೆಚ್ಚುವರಿ ಪೋಲಿಸ್ ಅಧಿಕಾರಿಗಳು ಆಗಮಿಸಲಿದ್ದು ಈ ಸಂದರ್ಭದಲ್ಲಿ ರಾಜ್ಯ ಆಡಳಿತ ಪಕ್ಷದ ನಾಯಕರು ಮತ್ತು ಜನಪ್ರತಿನಿಧಿಗಳು ಮತ್ತು ಪೋಲಿಸ್ ಹಿರಿಯ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಿ ನೂತನ ಪೋಲಿಸ್ ಠಾಣೆಯನ್ನು ಉದ್ಘಾಟಿಸಿ ಪೋಲಿಸ್ ಅಧಿಕಾರಿಗಳು ಮತ್ತು ಸಾರ್ವಜನಿಕರ ಉಪಯೋಗಕ್ಕೆ ದೊರಕುವಂತೆ ಮಾಡುವರೇ ಅಥವಾ ಮತ್ತೆ ಗೃಹ ಸಚಿವರನ್ನು ಕರೆತರಲು ಬ್ಲಾಕ್ , ಜಿಲ್ಲೆಯ ಕಾಂಗ್ರೆಸ್ ನಾಯಕರು ನಿರ್ಲಕ್ಷ್ಯ ಮಾಡುವರೇ ಎಂದು ಕಾದು ನೋಡಬೇಕಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!