ಭಾರತವು ಜಾತ್ಯಾತೀತ ರಾಷ್ಟ್ರ ಅದರ ಭಾಗವಾಗಿಯೇ ಶಿರೂರು ದುರಂತದಲ್ಲಿ ಸಾವನ್ನಪ್ಪಿದ ಅರ್ಜುನ್ ಹುಡುಕಾಟಕ್ಕಾಗಿ ಅಲ್ಲೆ ಕುಳಿತೆ – ಮಂಜೇಶ್ವರ ಶಾಸಕ ಎ .ಕೆ ಅಶ್ರಫ್ .
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬುವ ಮುನ್ನ ಅದರ ಕುರಿತು ಅವಲೋಕಿಸಿ –
ಮುಸ್ಲಿಂ ದೇಶದ್ರೋಹಿಗಳು ಎನ್ನುವವರ ಮಧ್ಯೆ ದಫ್ ಮೂಲಕ ರಾಷ್ಟ್ರ ಪ್ರೇಮದ ಕುರಿತ ಹಾಡಿನ ಮೂಲಕ ಮುಸ್ಲಿಂ ಸಂಸ್ಕೃತಿಗಳ ಅನಾವರಣ – ಎಂ ಎಸ್ ಮಹಮ್ಮದ್ .
ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ಇದರ 18 ನೇ ವಾರ್ಷಿಕ ಸ್ವಲಾತ್ ಕಾರ್ಯಕ್ರಮದ ಅಂಗವಾಗಿ ರಾಜ್ಯ ಮಟ್ಟದ ದಫ್ ಸ್ಪರ್ಧೆ ಹಾಗೂ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮ ನ. 24 ರಂದು ನಡೆಯಿತು. ಇದರ ಅಂಗವಾಗಿ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕುಂಞಿ ಕೋಯ ಸ ಅದಿ ತಂಙಳ್ ಸುಳ್ಯ ನೆರವೇರಿಸಿದರು . ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬುವ ಮುನ್ನ ಅದರ ಕುರಿತು ಅವಲೋಕಿಸಿ ಹಾಕಬೇಕು ಅಲ್ಲದೇ ಒಳ್ಳೆತನ ಮುಸ್ಲಿಂ ಸಂಕೇತವಾಗಿದೆ ಮತ್ತು ಯುವ ಜನತೆ ಯಾವ ವಿಷಯಕ್ಕೆ ನಾವು ಪ್ರತಿಕ್ರಿಯೆ ನೀಡುತ್ತಿದ್ದೆವೆ ಯಾವುದಕ್ಕೆಬನೀಡಬೇಕು ಅದರ ಸತ್ಯಾಸತ್ಯತೆಯನ್ನು ತಿಳಿದು ಮಾತನಾಡಬೇಕು ಹಾಗೂ ನಮಗೆ ಅವಶ್ಯಕತೆ ಇದ್ದಲ್ಲಿ ಮಾತ್ರವೇ ಮಾತನಾಡಬೇಕು ನಾವು ಮೌನಿಯಾದಲ್ಲಿಯು ತೊಡಕಿಲ್ಲಾ ಆದರೆ ನಾವು ನಮ್ಮ ನಾಲಗೆಯ ಮೇಲೆ ಹಿಡಿತವನ್ನು ಇಟ್ಟುಕೊಂಡಿರಬೇಕು ಎಂದು ಹೇಳಿದರು . ಹಾಗೂ ನಾವು ಕೇಳುವುದು ಎಲ್ಲವು ಸತ್ಯವಾಗಿರುವುದಿಲ್ಲಾ ಅದನ್ನು ಹೇಳುವ ಮೊದಲು ಪರಿಶೀಲನೆ ಮಾಡಿಕೊಳ್ಳಬೇಕು ಮತ್ತು ಒಮ್ಮೆ ಕೇಳಿದ್ದು ಮತ್ತೆ ಅದು ಬದಲಾಗಬಹುದು ಆದರೆ ಮೊದಲು ಹೇಳಿದ ಮಾತಿನಿಂದಾಗುವ ಅನಾಹುತಗಳಿಗೆ ಕಾರಣವಾಗುವುದಿಲ್ಲವೇ ಆದ್ದರಿಂದ ವಿಷಯಗಳ ಕುರಿತಾಗಿ ಎಲ್ಲರು ವಿಮರ್ಶೆ ಮಾಡಿಕೊಳ್ಳುವುದು ಅವಶ್ಯಕವಾಗಿದೆ ಎಂದು ಅಡ್ವಕೇಟ್ ಹನೀಫ್ ಹುದವಿ ಪ್ರಾಂಶುಪಾಲರು ನೂರುಲ್ ಹುದಾ ಮಾಡನ್ನೂರು ಪ್ರಾಸ್ತಾವಿಕ ಮಾತುಗಳಲ್ಲಿ ಹೇಳಿದರು .
ದಾನಗಳಲ್ಲಿ ಮಹಾದಾನವಾದ ರಕ್ತ ದಾನದ ಸಂದರ್ಭದಲ್ಲಿ ಜಾತಿ ಕಾಣುವುದಿಲ್ಲ ಅಲ್ಲಿ ಓರ್ವ ಮನುಷ್ಯನಿಗೆ ಬೇಕಾಗಿರುವುದು ರಕ್ತ ಮಾತ್ರ ಅಂತಹ ದಾನಗಳನ್ನು ಮಾಡುತ್ತಾ ಸಮಾಜದಲ್ಲಿ ಸೇವಾ ಕಾರ್ಯದಲ್ಲಿ ತೋಡಗಿರುವ ಅಲ್ ಅಮೀನ್ ಪುಣ್ಯದ ಕೆಲಸಗಳನ್ನು ಮಾಡುತ್ತಿದೆ ಅಲ್ಲದೇ ಓರ್ವ ಮುಸ್ಲಿಂ ಹುಟ್ಟಿದ ದೇಶದ ಮಣ್ಷನ್ನು ಗೌರವಿಸಬೇಕು ಅಲ್ಲದೇ ಯುವ ಜನತೆಯಲ್ಲಿ ದೇಶ ಪ್ರೇಮವನ್ನು ಹೆಚ್ಚಿಸಲು ದಫ್ ಹಾಡಿನ ಮೂಲಕ ಪರಿಣಾಮವಾಗಿ ಕೆಲಸ ಮಾಡುತ್ತಿದೆ ಎಂದು ಮಾಜಿ ಜಿ.ಪಂ ಉಪಾಧ್ಯಕ್ಷರಾದ ಎಂ ಎಸ್ ಮಹಮ್ಮದ್ ಹೇಳಿದರು .
ಭಾರತವು ಜಾತ್ಯಾತೀತ ರಾಷ್ಟ್ರ ಅದರ ಭಾಗವಾಗಿಯೇ ಶಿರೂರು ದುರಂತದಲ್ಲಿ ಸಾವನ್ನಪ್ಪಿದ ಅರ್ಜುನ್ ಹುಡುಕಾಟಕ್ಕಾಗಿ ಅಲ್ಲೆ ಕುಳಿತೆ ನನ್ನ ಬಳಿಯಲ್ಲಿ ಹಲವಾರು ಜನರು ಪ್ರಶ್ನಿಸಿದರು ಅವರು ನಿಮ್ಮ ಕ್ಷೇತ್ರದವರೇ ಅಥಾವಾ ಜಿಲ್ಲೆಯವರೇ ಅಥವಾ ಜಾತಿಯವರೇ ಎಂದು ಇವೆಲ್ಲದಕ್ಕು ನಾನು ಓರ್ವ ಜಾತ್ಯಾತೀತ ಮನುಷ್ಯ ನಾನು ಕೇರಳದಲ್ಲಿನ ಜಾತ್ಯಾತೀತ ಪಕ್ಷಗಳ ಹಿನ್ನಲೆಯುಲ್ಲ ಪಕ್ಷದ ಕಾರ್ಯಕರ್ತ ನಾವೆಲ್ಲರು ಕೇರಳಿಗರು ಒಂದೇ ಎಂಬ ಸಂದೇಶವನ್ನು ರವಾನಿಸಿದೆ ಅಲ್ಲದೇ ದುಬೈಯಲ್ಲಿ ಓರ್ವ ಯುವಕ ಮರಣದಂಡನೆ ಶಿಕ್ಷೆಗೆ ಒಳಗಾದಾಗ ನಾವೆಲ್ಲ ಕೇರಳಿಗರು ಆ ಯುವಕನ ತಾಯಿಯ ಕಣ್ಣಿರಿನ ಪರಿಣಾಮವಾಗಿ ೩೦ ಕೋಟಿ ರೂಪಾಯಿಗಳನ್ನು ಹಿಂದು ಮುಸ್ಲಿಂ ಕ್ರೈಸ್ತ ಎಂಬ ಭೇಧ ಭಾವವಿಲ್ಲದೇ ಸಂಗ್ರಹಿಸಿ ಮರಣದಂಡನೆ ಶಿಕ್ಷೆಯಿಂದ ಬಚಾವ್ ಮಾಡಿದ್ದೆವೆ ಅಂತಹ ನಾಡು ನಮ್ಮದು ಎಂದು ಹೇಳಿದರು . ನಾವೆಲ್ಲರು ಭಾವೈಕ್ಯತೆಯ ನೆಲೆಯಲ್ಲಿ ಕೆಲಸ ಕಾರ್ಯಗಳನ್ನು ಮಾಡಬೇಕಿದೆ ಮತ್ತು ಜಾತ್ಯಾತೀತ ರಾಷ್ಟ್ರವನ್ನು ನಾವೆಲ್ಲರು ಗಟ್ಟಿಗೊಳಿಸಬೇಕಿದೆ ಅಲ್ ಅಮೀನ್ ಇಂತಹ ಹತ್ತು ಹಲವು ಸಮಾಜಮುಖಿ ಕೆಲಸ ಕಾರ್ಯಗಳನ್ನು ನಿರಂತರವಾಗಿ 18 ವರ್ಷಗಳಿಂದ ಮಾಡುತ್ತಿದ್ದು ಇದು ಇನ್ನಷ್ಟು ಯುವಕರ ಸೇರ್ಪಡೆ ಮತ್ತು ಉತ್ತಮ ಕೆಲಸಗಳಿಂದ ಹೆಸರುವಾಸಿಯಾಗಲಿ ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಶುಭ ಹಾರೈಸಿದರು. ಸಭಾ ವೇದಿಕೆಯಲ್ಲಿ ಉಪಸ್ಥಿತರಿದ್ದ ಟಿ ಎಂ ಶಹೀದ್ ತೆಕ್ಕಿಲ್ , ಅಹಮ್ಮದ್ ಕುಂಞಿ ಗೋನಡ್ಕ , ಮೂಸೆ ಕುಂಞಿ ಪೈಂಬಾಚ್ಚಾಲ್ , ನಝೀರ್ ಶಾಂತಿನಗರ ಸೇರಿದಂತೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಅಥಿತಿಗಳು ಶುಭ ಹಾರೈಸಿದರು ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಮುಖರಾದ ಹಾಫಿಲ್ ಶೌಕತ್ ಆಲಿ ಸಖಾಫಿ , ಇಬ್ರಾಹಿಂ ಹಾಜಿ ಸೀ ಫುಡ್ , ಅಬ್ದುಲ್ ರಹಿಮಾನ್ ಸಂಕೇಶ್ , ಅಬ್ದುಲ್ ಸತ್ತಾರ್ ಪಿ ಎ , ಶಮೀರ್ ಅಹಮದ್ ನ ಈಮಿ , ಇಕ್ಬಾಲ್ ಕೊಲ್ಪೆ , ಅಬ್ದುಲ್ ರಹಿಮಾನ್ ಮೊಗರ್ಪಣೆ , ಇಬ್ರಾಹಿಂ ಪಿ , ಮುಸ್ತಫಾ ಕೆ ಎಂ , ಆದಂ ಹಾಜಿ ಕಮ್ಮಾಡಿ , ಮಜೀದ್ ಜನತಾ , ಅಬ್ದುಲ್ ಲತೀಫ್ ಹರ್ಲಡ್ಕ , ಹಮೀದ್ ಹಾಜಿ , ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ , ಉಮ್ಮರ್ ಕೆ ಎಸ್ , ಶರೀಫ್ ಕಂಠಿ , ಮುಜೀಬ್ ಪೈಚಾರ್ , ರಜಾಕ್ ಕೆನಾರ , ಎಂ ಎ ರಫೀಕ್ , ರಹಿಮಾನ್ ಕಾವು , ಅಡ್ವಕೇಟ್ ಅಬೂಬಕ್ಕರ್ ಅಡ್ಕಾರ್ , ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ , ಅಬೂಬಕ್ಕರ್ ಹಾಜಿ ಮಂಗಳ , ಹಾಜಿ ಕತ್ತರ್ ಇಬ್ರಾಹಿಂ ,ಕಲಾಂ ಕೆ , ಯೂಸುಫ್ ಹಾಜಿ ಗೌಸಿಯಾ , ಅನ್ಸಾರ್ ಬೆಳ್ಳಾರೆ , ಬಶೀರ್ ಆರ್ ಬಿ , ಅಶ್ರಫ್ ಟರ್ಲಿ , ಉನೈಸ್ ಪೆರಾಜೆ , ಲತೀಫ್ ಅಡ್ಕಾರ್ , ಇಬ್ರಾಹಿಂ ಕರೀಂ ಕದ್ಕಾರ್ , ಹನೀಫ್ ಹಾಜಿ , ಇಕ್ಬಾಲ್ ಟಿ ಎಂ , ಸಿದ್ದಿಕ್ ಕೊಡಿಯಮ್ಮೆ ,ಶಾಫಿ ಪ್ರಗತಿ , ಅನ್ವರ್ ಪಂಜಿಕಲ್ಲು , ನಾಸೀರ್ ಪೆರಾಜೆ , ಸಾಜೀದ್ ಐ ಜಿ , ರಿಫಾಯಿ , ಉಪಸ್ಥಿತರಿದ್ದರು ಇದೇ ವೇದಿಕೆಯಲ್ಲಿ ಡಾ ಸಲೀ ಮಲಿಕ್ , ಹಾಜಿ ಪಿ ಇಸಾಕ್ ಸಾಹೇಬ್ ಪಾಜಪಳ್ಳ , ಅಬ್ದುಲ್ ರಹಿಮಾನ್ ಸಂಕೇಶ್ ಹಾಗೂ ಅಲ್ ಅಮೀನ್ ಪೈಚಾರ್ ತಂಡದ ಹಿರಿಯ ಮುಳುಗು ತಜ್ಞರನ್ನು ಸನ್ಮಾನಿಸಲಾಯಿತು. ಬಶೀರ್ ಆರ್ ಬಿ ಸ್ವಾಗತಿಸಿ, ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು