ತಾಜುಲ್ ಹುದಾ ದಫ್ ಸಮಿತಿ ರೆಂಜಲಾಡಿ ಚಾಂಪಿಯನ್,ಅನ್ಸಾರಿಯ ದಫ್ ಸಮಿತಿ ಕೃಷ್ಣಾಪುರ ರನ್ನರ್ಸ್ ಅಪ್
ಪೈಚಾರ್ ಅಲ್-ಅಮೀನ್ ಯೂತ್ ಸೆಂಟರ್ ವತಿಯಿಂದ 18 ನೇ ವಾರ್ಷಿಕ ಸ್ವಲಾತ್ ಹಾಗೂ ನೂತನ ಕಚೇರಿ ಉದ್ಘಾಟನೆ ಅಂಗವಾಗಿ ನಡೆಸಿದ ರಾಜ್ಯ ಮಟ್ಟದ ದಫ್ ಸ್ಪರ್ಧೆಯಲ್ಲಿ ಬಹಳ ಜಿದ್ದಾ ಜಿದ್ದಿನ ಸ್ಪರ್ಧೆ ನಡೆದು ತಾಜುಲ್ ಹುದಾ ದಫ್ ಸಮಿತಿ ರೆಂಜಲಾಡಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿಕ್ಕೊಂಡು ಅನ್ಸಾರಿಯ ದಫ್ ಸಮಿತಿ ಕೃಷ್ಣಾಪುರ ರನ್ನರ್ಸ್ ಅಪ್ ಪಡೆದು ಕುವ್ವತುಲ್ ದಫ್ ಕಮಿಟಿ ಪೊಳಿಪ್ಪು ಕಾಪು ತೃತೀಯ ಸ್ಥಾನಕ್ಕೆ ತೃಪ್ತಿ ಪಡೆದು ಕೊಂಡಿತು.
ಉತ್ತಮ ದಫ್ ಹಾಡುಗಾರರಾಗಿ ತಾಜುಲ್ ಹುದಾ ದಫ್ ಕಮಿಟಿ ರೆಂಜಲಾಡಿ ಪ್ರಥಮ ಸ್ಥಾನ ಪಡೆದು ಕುವ್ವತುಲ್ ದಫ್ ಕಮಿಟಿ ಪೊಳಿಪ್ಪು ದ್ವಿತೀಯ ಅನ್ಸಾರಿಯ ದಫ್ ಸಮಿತಿ ಕೃಷ್ಣಾಪುರ ತೃತೀಯ ಸ್ಥಾನ ಪಡೆದು ಕ್ಕೊಂಡಿತು.
ರಾಜ್ಯ ಮಟ್ಟದ ಈ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳ ಬಲಿಷ್ಠ ಅಹ್ವಾನಿತ 6 ತಂಡಗಳು ಮತ್ತು ತಾಲೂಕಿನ ಒಂದು ತಂಡ ಭಾಗವಹಿಸಿದ್ದವು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ತಂಡಗಳಿಗೂ ಆಯೋಜಕರು ಪ್ರೋತ್ಸಾಹ ಬಹುಮಾನ ನೀಡಿ ಗೌರವಿಸಿದರು.
ಬಹುಮಾನ ವಿತರಣಾ ವೇದಿಕೆಯಲ್ಲಿ ಸಮಿತಿಯ ಅಧ್ಯಕ್ಷ ಅಬ್ದುಲ್ ಸತ್ತಾರ್ ಪಿ.ಎ. ಅಧ್ಯಕ್ಷತೆ ವಹಿಸಿದ್ದರು.
ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್,ಬೆಂಗಳೂರು ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್, ಪೈಚಾರ್ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಪಿ, ದ.ಕ.ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೊಗರ್ಪಣೆ,ಜಾಲ್ಸೂರು ಗ್ರಾ.ಪಂ.ಸದಸ್ಯ ಮುಜೀಬ್ ಪೈಚಾರ್,ಸುದ್ದಿ ವರದಿಗಾರ ಹಸೈನಾರ್ ಜಯನಗರ, ಶಾಂತಿನಗರ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ನಝೀರ್ ಶಾಂತಿನಗರ, ಉದ್ಯಮಿ ಫೈಝಲ್ ಕಟ್ಟೆಕ್ಕಾರ್,ಶಾಫಿ ಪ್ರಗತಿ, ಬದ್ರುದ್ದೀನ್ ಪೈಚಾರ್,ಅಲ್ ಅಮೀನ್ ಯೂತ್ ಸೆಂಟರ್‌ನ ಉಪಾಧ್ಯಕ್ಷ ಹನೀಫ್ ಆಲ್ಫಾ, ಪ್ರಧಾನ ಕಾರ್ಯದರ್ಶಿ ಅಬೂಸಾಲಿ, ಕೋಶಾಧಿಕಾರಿ ಕರೀಂ ಕೆ.ಎಂ. ಹಾಗೂ ಪದಾಧಿಕಾರಿಗಳು,ಸರ್ವ ಸದಸ್ಯರು ಉಪಸ್ಥಿತರಿದ್ದರು.
ಪೈಚಾರ್ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬಶೀರ್ ಆರ್ ಬಿ,ನೌಫಲ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಪೈಚಾರ್‌ನ ಮುಳುಗು ತಜ್ಞ ತಂಡದ ಸದಸ್ಯರು, ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಸ್ಥಳೀಯ ಯುವಕರ ತಂಡದ ಸದಸ್ಯರು ಉಪಸ್ಥಿತರಿದ್ದರು.