ನ.27 ರಂದು ಕೊಪ್ಪರಿಗೆ ಏರುವುದು, ನ.30 ರಂದು ಲಕ್ಷದೀಪೋತ್ಸವ, ಡಿ.07 ರಂದು ಪ್ರಾತಃಕಾಲ ಚಂಪಾಷಷ್ಠಿ ಮಹಾರಥೋತ್ಸವರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.27 ರಿಂದ ಡಿ.12 ರವರೆಗೆ ಚಂಪಾಷಷ್ಠಿ ಮಹೋತ್ಸವ ನಡೆಯಲಿದ್ದು, ನ.27 ಬುಧವಾರದಂದು ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ, ನ.30 ಶನಿವಾರದಂದು ಲಕ್ಷದೀಪೋತ್ಸವ, ಡಿ.01 ಆದಿತ್ಯವಾರದಂದು ರಾತ್ರಿ ಶೇಷವಾಹನೋತ್ಸವ, ಡಿ.02 ಸೋಮವಾರದಂದು ರಾತ್ರಿ ಅಶ್ವವಾಹನೋತ್ಸವ, ಡಿ.03 ಮಂಗಳವಾರದಂದು ರಾತ್ರಿ ಮಯೂರವಾಹನೋತ್ಸವ, ಡಿ.04 ಬುಧವಾರದಂದು ರಾತ್ರಿ ಶೇಷವಾಹನೋತ್ಸವ, ಡಿ.05 ಗುರುವಾರದಂದು ರಾತ್ರಿ ಹೂವಿನ ತೇರಿನ ಉತ್ಸವ, ಡಿ.06 ಶುಕ್ರವಾರದಂದು ರಾತ್ರಿ ಪಂಚಮಿ ಉತ್ಸವ, ತೈಲಾಭ್ಯಂಜನ, ಡಿ.07 ಶನಿವಾರದಂದು “ಪ್ರಾತಃಕಾಲ ಚಂಪಾಷಷ್ಠಿ ಮಹಾರಥೋತ್ಸವ” ನಡೆಯಲಿದ್ದು, ಡಿ.08 ಆದಿತ್ಯವಾರದಂದು ಅವಭೃತೋತ್ಸವ, ನಾಕಾವಿಹಾರ, ಡಿ.12 ಗುರುವಾರದಂದು ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ ಹಾಗೂ ದೈವಗಳ ನಡಾವಳಿ ನಡೆಯಲಿದೆ.ಡಿ.26 ಮಂಗಳವಾರದಂದು “ಮೂಲಮೃತ್ತಿಕಾ” ಪ್ರಸಾದ ವಿತರಣೆ ನಡೆಯಲಿದ್ದು, ಜ.05 ಆದಿತ್ಯವಾರದಂದು ಕಿರುಷಷ್ಠಿ ಮಹೋತ್ಸವವು ನಡೆಯಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ)
- Sunday
- November 24th, 2024