Ad Widget

ಸಾಹಿತ್ಯದ ಉದ್ದೇಶವೇ ಜ್ಞಾನ ಹಂಚುವಿಕೆ : ನಾರಾಯಣ ರೈ ಕುಕ್ಕುವಳ್ಳಿ – ಬೆಳ್ಳಾರೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ

ಕನ್ನಡ ನಾಡು ನುಡಿ ಸಂಸ್ಕೃತಿಯ ಬೆಳವಣಿಗೆಯಲ್ಲಿ ಯುವ ಜನರ ಪಾತ್ರ ಮಹತ್ವವಾಗಿದೆ. ಬರವಣಿಗೆಯಿಂದ ಜ್ಞಾನ ವೃದ್ಧಿ ಸಾಧ್ಯ ಎಂದು ಸಾಹಿತಿ, ಮಧು ಪ್ರಪಂಚ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಹೇಳಿದರು. ಅವರು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ಆಶ್ರಯದಲ್ಲಿ ಆರ್. ಪಿ. ಕಲಾ ಸೇವಾ ಟ್ರಸ್ಟ್ (ರಿ) ಪಾಂಬಾರು ಇದರ ಸಹಯೋಗದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮ 2024ರ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ರಾಜ್ಯೋತ್ಸವ ಸಂಭ್ರಮ 2024ರ ಅಂಗವಾಗಿ ಗೀತ ಗಾಯನ, ನೃತ್ಯ ರೂಪಕ, ಸಾಹಿತ್ಯ ಕವಿಗೋಷ್ಠಿ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಮಿತಾ ಎಲ್ ರೈ ಉದ್ಘಾಟಿಸಿ ಶುಭಹಾರೈಸಿದರು. ಬೆಳ್ಳಾರೆ ಜ್ಞಾನದೀಪ ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಅಧ್ಯಕ್ಷತೆ ವಹಿಸಿದ್ದರು. ಬಂಗ್ಲೆಗುಡ್ಡೆ ಮಾರಿಯಮ್ಮ ದೇವಸ್ಥಾನದ ಧರ್ಮದರ್ಶಿ ಚಂದ್ರ ಕೆ, ಗ್ರಾಮ ಸಾಹಿತ್ಯ ಸಂಭ್ರಮ ಸಂಚಾಲಕ ನಾರಾಯಣ ಕುಂಬ್ರ, ಯುವ ಸಾಹಿತಿ, ರಂಗಭೂಮಿ ಕಲಾವಿದ ಧೀರಜ್ ಬೆಳ್ಳಾರೆ, ಯುವ ಸಾಹಿತಿ ಮುಸ್ತಾಫ ಬೆಳ್ಳಾರೆ ಉಪಸ್ಥಿತರಿದ್ದರು. ಆರ್ ಪಿ ಕಲಾ ಸೇವಾ ಟ್ರಸ್ಟ್ ನ ಅಕ್ಷತಾ ನಾಗನಕಜೆ ಸ್ವಾಗತಿಸಿದರು. ಸಂಚಾಲಕ ರವಿ ಪಾಂಬಾರು ವಂದಿಸಿದರು. ಉಪನ್ಯಾಸಕ ಯೋಗೀಶ್ ತಳೂರು ಕಾರ್ಯಕ್ರಮ ನಿರ್ವಹಿಸಿದರು. ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಆರ್ ಪಿ ಕಲಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಶ್ರೀಧರ್ ಎಕ್ಕಡ್ಕ ವಹಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಗೋಕುಲ್ ದಾಸ್, ಕಾಮಧೇನು ಗ್ರೂಪ್ಸ್ ನ ಎಂ ಮಾಧವ ಗೌಡ, ಮಂಗಳೂರು ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಸುಬ್ರಾಯ ಕಲ್ಪಣೆ ಸಾಹಿತಿ, ಚಲನ ಚಿತ್ರ ಸಹ ನಿರ್ದೇಶಕ ಪದ್ಮರಾಜ್ ಚಾರ್ವಕ ಉಪಸ್ಥಿತರಿದ್ದರು. ರೋಹಿತ್ ಕುರಿಕ್ಕಾರ ಕಾರ್ಯಕ್ರಮ ನಿರ್ವಹಿಸಿದರು.*ಸನ್ಮಾನ*ಆರ್ ಪಿ ಕಲಾ ಸೇವಾ ಟ್ರಸ್ಟ್ ನ ವತಿಯಿಂದ ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ನಾರಾಯಣ ರೈ ಕುಕ್ಕುವಳ್ಳಿ, ಕಲಾ ಕ್ಷೇತ್ರದ ಸಾಧನೆಗಾಗಿ ಧೀರಜ್ ಬೆಳ್ಳಾರೆ, ನೃತ್ಯ ಮತ್ತು ನಿರೂಪಣೆ ಕ್ಷೇತ್ರದ ಸಾಧನೆಗಾಗಿ ಶ್ರೇಯ ಎಂ ಜಿ, ಸಂಗೀತ ಕ್ಷೇತ್ರದ ಸಾಧನೆಗಾಗಿ ಪದ್ಮರಾಜ್ ಬಿ ಸಿ ಚಾರ್ವಕ, ಸಾಹಿತ್ಯಕ್ಷೇತ್ರದ ಸಾಧನೆಗಾಗಿ ಮುಸ್ತಫಾ ಬೆಳ್ಳಾರೆ, ಸಂಗೀತ ಮತ್ತು ಸಮಾಜಸೇವೆಗಾಗಿ ಸುಬ್ರಾಯ ಕಲ್ಪನೆ, ಧಾರ್ಮಿಕ ಕ್ಷೇತ್ರದ ಸಾಧನೆಗಾಗಿ ಬಾಬು ಅಜಿಲ ಬಾಳಿಲ, ಯೋಗಾಸನ ಕ್ಷೇತ್ರದ ಸಾಧನೆಗಾಗಿ ಗೌರಿತ ಕೆ. ಜಿ ಅವರಿಗೆ ಸುವರ್ಣ ಕರ್ನಾಟಕ 24ನೇ ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಲಾಯಿತು. *ಕವಿಗೋಷ್ಠಿ*ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿಇಂದಿನ ಶೇಖರ್ ಎಂ ದೇಳಂಪಾಡಿ,ಚಂದ್ರವತಿ ರೈ,ಪವಿತ್ರ ಮಣಿಪಾಲ,ತಸ್ಮೈ ಪಂಚೋಡಿ,ಪ್ರಿಯ ಸುಳ್ಯ,ಪವಿತ್ರ ಎಂ ಬೆಳ್ಳಿಪ್ಪಾಡಿ,ಗಿರೀಶ್ ಪೆರಿಯಡ್ಕ,ಕೇಶವ್ ನೆಲ್ಯಾಡಿ,ತನ್ಮಯ್ ಪಂಚೋಡಿ,ಸುರೇಶ್ ಚಾರ್ವಕ,ಜೀವನ್ ಕೆ,ಸುಮಿತ್ರಾ ಕೆ,ಶ್ವೇತಾ ಎಸ್ ,ಶ್ವೇತ ಡಿ ಬಡಗ ಬೆಳ್ಳೂರು,ಮುಸ್ತಫಾ ಬೆಳ್ಳಾರೆ,ಧೀರಜ್ ಬೆಳ್ಳಾರೆ,ಪೂರ್ಣಿಮ ಪೆರ್ಲoಪಾಡಿ, ರಾಜೀವ್ ಕಕ್ಕೆ ಪದವು ಕವನ ವಾಚಿಸಿದರು.

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!