Ad Widget

ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ನೂತನ ಕಚೇರಿ ಉದ್ಘಾಟನೆ ಹಾಗೂ ರಾಜ್ಯ ಮಟ್ಟದ ದಫ್ ಸ್ಪರ್ಧೆ.

ರಾಜ್ಯದ ಖ್ಯಾತ 8 ದಫ್ ತಂಡಗಳಿಂದ ಆಕರ್ಷಕ ದಫ್ ಮೆರವಣಿಗೆ.

. . . . . . . . .

ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ಇದರ 18 ನೇ ವಾರ್ಷಿಕ ಸ್ವಲಾತ್ ಕಾರ್ಯಕ್ರಮದ ಅಂಗವಾಗಿ ರಾಜ್ಯ ಮಟ್ಟದ ದಫ್ ಸ್ಪರ್ಧೆ ಕಾರ್ಯಕ್ರಮ ಮತ್ತು ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮ ನ. 24 ರಂದು ನಡೆಯಿತು.

. . . . . . .

ಈ ಕಾರ್ಯಕ್ರಮದ ಅಂಗವಾಗಿ ಸಂಜೆ ಅಸರ್ ನಮಾಝ್ ಬಳಿಕ ದಫ್ ರ್ಯಾಲಿಯು
ಮೊಗರ್ಪಣೆ ಮಸೀದಿ ವಠಾರದಿಂದ ಸಾಗಿ ಬಂದು ಪೈಚಾರ್ ಅಲ್ ಅಮೀನ್ ಯೂತ್ ಸೆಂಟರ್ ಇದರ ನೂತನ ಕಛೇರಿ ಬಳಿ ಸಮಾಪ್ತಿಗೊಂಡಿತು.

ಆಕರ್ಶಕ ಧಫ್ ರ್ಯಾಲಿಗೆ ದರ್ಗಾ ಝೀಯಾರತ್ ಮೂಲಕ ದುಆಃ ನೇತೃತ್ವ ವಹಿಸಿ ಮೊಗರ್ಪಣೆ ಜುಮಾ ಮಸೀದಿಯ ಮುದರಿಸ್ ಹಾಫಿಲ್ ಶೌಕತ್ ಅಲಿ ಸಖಾಫಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹೆಚ್ ಐ ಜೆ ಕಮಿಟಿ ಮೊಗರ್ಪಣೆ ಇದರ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಸೀ ಫುಡ್ ರವರು ಅಲ್ ಅಮೀನ್ ಯೂತ್ ಸೆಂಟರ್ ಅಧ್ಯಕ್ಷ ಅಬ್ದುಲ್ ಸತ್ತಾರ್ ರವರಿಗೆ ಧ್ವಜ ಹಸ್ತಾಂತರಿಸಿ ರ್ಯಾಲಿಗೆ ಚಾಲನೆ ನೀಡಿದರು.

ನೂತನ ಕಛೇರಿ ಉದ್ಘಾಟನೆ.

ಬಳಿಕ ಪೈಚಾರ್ ನಲ್ಲಿ ನೂತನವಾಗಿ ನಿರ್ಮಿಸಲಾದ ಅಲ್ ಅಮೀನ್ ಯೂತ್ ಸೆಂಟರ್ ನ ನೂತನ ಕಛೇರಿ ಉದ್ಘಾಟನೆಯನ್ನು ಉದ್ಯಮಿ ಹಾಗೂ ಸಮಾಜ ಸೇವಕ ಅಬ್ದುಲ್ ರಹಮಾನ್ ಸಂಕೇಶ್ ರವರು ನೂತನ ಕಛೇರಿಯನ್ನು ಉದ್ಘಾಟಿಸಿ ಶುಭ ಹಾರೈಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅರಂತೋಡು ತೆಕ್ಕಿಲ್‌ ಪ್ರತಿಷ್ಠಾನ ಸ್ಥಾಪಕ ಅಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್ ,ಉದ್ಯಮಿ ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು , ಹಾಜಿ ಮುಸ್ತಪಾ ಕೆ ಎಂ, ಉಪಾಧ್ಯಕ್ಷರು MEIF ದ.ಕ ಮತ್ತು ಉಡುಪಿ ಜಿಲ್ಲೆ , ಪೈಚಾರ್ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಪಿ, ನ ಪಂ ಸದಸ್ಯ ಶರೀಫ್‌ ಕಂಠಿ ಸದಸ್ಯರು,ಗ್ರಾಮ ಪಂಚಾಯತ್ ಸದಸ್ಯ ಮುಜೀಬ್‌ ಪೈಚಾರ್‌, ಸದಸ್ಯರು, ಗ್ರಾಮ ಪಂಚಾಯತ್ , ರಜಾಕ್‌ ಕೆನರಾ ಸದಸ್ಯರು, ಗ್ರಾಮ ಪಂಚಾಯತ್ ಸವಣೂರ , ಎಂ.ಎ ರಫೀಕ್ ಸದಸ್ಯರು, ಗ್ರಾಮ ಪಂಚಾಯತ್ ಸವಣೂರು ,ನಝೀರ್ ಶಾಂತಿನಗರ ಅಧ್ಯಕ್ಷರು, SDMC ಸ.ಹಿ.ಪ್ರಾ. ಶಾಲೆ ಶಾಂತಿನಗರ, ಡಾ. ಬಶೀರ್ R.B ಅಧ್ಯಕ್ಷರು, ಕಾರುಣ್ಯ ಚಾರಿಟೇಬಲ್ ಟ್ರಸ್ಟ್(ರಿ) ಪೈಚಾರ್,
ಅಶ್ರಫ್ ಟರ್ಲಿ ಸಾಮಾಜಿಕ ಹೋರಾಟಗಾರರು , ಫೈಝಲ್ ಕಟ್ಟೆಕ್ಕಾರ್ ಯುವ ಉದ್ಯಮಿಗಳು ಸುಳ್ಯ , ಸಿದ್ದೀಕ್ ಕೊಡಿಯಮ್ಮೆ ಅಧ್ಯಕ್ಷರು, ದುಲ್ ಫುಕಾರ್ ದಫ್ ಅಸೋಸಿಯೇಶನ್ ಸುಳ್ಯ ,ಬದ್ರುದ್ದೀನ್ ಪೈಚಾರ್ ಮಾಲಕರು, ಕಾವೇರಿ ಗ್ರೂಪ್ ಪುತ್ತೂರು,ಶಾಫಿ ಪ್ರಗತಿ ಮ್ಹಾಲಕರು ಪ್ರಗತಿ ಸೌಂಡ್ಸ್ ಪೈಚಾರ್ ಮತ್ತಿತರರು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading