ಅರಂತೋಡು ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯು ನ.21ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಮುಖ್ಯವಾಗಿ ಸುಮಾರು 14 ಮನೆ ಗಳಿಗೆ ಸಂಪರ್ಕ ಕಲ್ಪಿಸುವ 30ವರ್ಷಗಳಿಂದ ಊರ್ಜಿತ ದಲ್ಲಿರುವ ಆರಂತೋಡು, ಅಳಿಕೆ - ಕಲ್ಲುಗದ್ದೆ ಪಂಚಾಯತ್ ರಸ್ತೆಯನ್ನು ಪಂಚಾಯತಿನ ಅವಾಹಗನೆ ತರದೆ ಖಾಸಗಿ ವ್ಯಕ್ತಿಗಳು ರಸ್ತೆಯನ್ನು ಬಂದ್ ಮಾಡಲು ಯತ್ನಿಸುತ್ತಿರುವುದನ್ನು ಖಂಡಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ವಾನುಮತದಿಂದ ನಿರ್ಣಯಿಸಲಾಯಿತು. ಸಭೆಯಲ್ಲಿ, ಬೀದಿ ದೀಪಗಳ ದುರಸ್ತಿ, ಕೆಟ್ಟು ನಿಂತಿರುವ ಸೋಲಾರ್ ದುರಸ್ತಿ ಹಾಗೂ ಆರಂತೋಡು ಎಲಿಮಲೆ ಪಿ. ಡಬ್ಲ್ಯೂ. ಇ. ರಸ್ತೆಯ ಬದಿ ಬೆಳೆದಿರು ಗಿಡ ಗಂಟೆಗಳನ್ನು ಪಿಂಡಿಮನೆ ವರೆಗೆ ತೆರವು ಮಾಡುತ್ತಿದ್ದು ಮುಂದೆ ಎಲಿಮಲೆ ವರೆಗೆ ಸುಮಾರು 8 ಕಿ. ಮೀ ವರೆಗೆ ತೆರವು ಮಾಡಲು ಅನುದಾನ ಇಲ್ಲ ಎಂಬ ಮಾಹಿತಿ ಇದ್ದು ಆ ಭಾಗದಲ್ಲಿ ರಸ್ತೆಗೆ ಗಿಡ ಗಂಟಿಗಳು ಹಬ್ಬಿದ್ದು,ಇತ್ತೀಚೆಗೆ ಉಬರಡ್ಕ ದಲ್ಲಿ ನಡೆದಂತ ಅಪಘಾತಗಳು ಸಂಭವಿಸುವ ಮೊದಲೇ ಎಚ್ಚೆತ್ತು ಕೂಡಲೇ ತೆರವು ಮಾಡಬೇಕೆಂದು ಲೋಕೋಪಯೋಗಿ ಇಲಾಖೆಗೆ ಕ್ರಮ ವಹಿಸಲು ನಿರ್ಣಯಿಸಲಾಯಿತು. ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಭವಾನಿ ಚಿಟ್ಟನೂರು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಶಿವಾನಂದ ಕುಕ್ಕುಂಬಳ, ವೆಂಕಟರಮಣ ಪೆತ್ತಾಜೆ, ಪುಷ್ಪಾಧರ ಕೊಡಂಕೇರಿ, ಗಂಗಾಧರ ಗುಂಡ್ಲಬನ, ಸರಸ್ವತಿ ಬಿಳಿಯಾರು, ಸುಜಯ ಲೋಹಿತ್ ಮೇಲಡ್ತಲೆ, ಮಾಲಿನಿ ವಿನೋದ್ ಉಳುವಾರು, ಹರಿಣಿ ದಿನೇಶ್ ದೇರಾಜೆ, ಕು l ಶ್ವೇತಾ ಅರಮನೆಗಯ ಹಾಜರಿದ್ದು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಜಯಪ್ರಕಾಶ್ ಎಮ್ ಆರ್. ಸ್ವಾಗತಿಸಿ, ಸರಕಾರದ ಸುತ್ತೋಲೆಗಳನ್ನು ಮಂಡಿಸಿದರು. ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಸಂಪೂರ್ಣ ಸಹಕಾರ ನೀಡಿದರು.
Like this:
Like Loading...