Ad Widget

ಸುಳ್ಯ ಸರಕಾರಿ ಆಸ್ಪತ್ರೆ – ಸಿಬ್ಬಂದಿಗಳಿಗೆ ವಾಹನ ಪಾರ್ಕಿಂಗ್ ಗೆ ಕಾಯ್ದಿರಿಸಿದ ಸ್ಥಳದಲ್ಲಿ ಖಾಸಗಿ ಆಂಬುಲೆನ್ಸ್ ವಾಹನ ನಿಲುಗಡೆ

ವೈದ್ಯರಿಗೊಂದು ನ್ಯಾಯ ಆಂಬುಲೆನ್ಸ್ ಚಾಲಕರಿಗೊಂದು ನ್ಯಾಯವಾ? ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ

. . . . . . .

ಸುಳ್ಯ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳ ವಾಹನ ನಿಲುಗಡೆಗೆ ಕಾಯ್ದಿರಿಸಿದ ಸ್ಥಳದಲ್ಲಿ ನ.19 ರಂದು ಮಧ್ಯಾಹ್ನ ವೇಳೆ ಖಾಸಗಿ ಆಂಬುಲೆನ್ಸ್‌ ವಾಹನವೊಂದು ನಿಲ್ಲಿಸಿದ್ದು ಇದರ ಫೋಟೋ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣ ವಾಗಿದೆ.ಇದೇ ರೀತಿಯ ಘಟನೆ ಕಳೆದ ಕೆಲವು ದಿನಗಳ ಹಿಂದೆ ವೈದ್ಯರ ಕಾರೊಂದು ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಹೊರ ಭಾಗದಲ್ಲಿ ತುರ್ತು ಸಂದರ್ಭ ಆಂಬುಲೆನ್ಸ್‌ ವಾಹನಗಳು ಬಂದು ನಿಲ್ಲುವಲ್ಲಿ ನಿಂತದನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮಾಧ್ಯಮಗಳಲ್ಲಿ ವರದಿ ಬಿತ್ತರಗೊಂಡಿದ್ದವು.ಇದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೂ ಕಾರಣವಾಗಿತ್ತು.ಈ ಘಟನೆಯ ಬಗ್ಗೆ ಸ್ಪಷ್ಟನೆ ನೀಡಿರುವ ವೈದ್ಯರು ಆ ದಿನ ಕ್ಯಾಶ್ವಾಲಿಟಿ ರೋಗಿಯನ್ನು ಚಿಕಿತ್ಸೆಗೆ ತರಲಾಗಿತ್ತು. ಈ ವೇಳೆ ನಾನು ಆಸ್ಪತ್ರೆಯಲ್ಲಿ ಇರಲಿಲ್ಲ. ಮಾಹಿತಿ ಬಂದ ಕೂಡಲೇ ನಾನು ಕಾರಿನಲ್ಲಿ ಆಸ್ಪತ್ರೆಗೆ ಬಂದೆ. ಈ ವೇಳೆ ಮಳೆ ಬರುತಿದ್ದ ಕಾರಣ ಆ ಸ್ಥಳದಲ್ಲಿ ಕಾರ್ ಪಾರ್ಕ್ ಮಾಡಿ ನಾನು ಕೇನ್ಯೂ ವಾಲ್ಟ್ ಗೆ ಬೇಗನೇ ಓಡಿದ್ದು ಅಲ್ಲಿ ರೋಗಿಯನ್ನು ಪರೀಕ್ಷೆ ಮಾಡುತಿದ್ದ ವೇಳೆ ಈ ಘಟನೆ ನಡೆದಿದೆ.ಆದ್ದರಿಂದ ಇದು ಆ ಸಮಯದಲ್ಲಿ ಆದ ಅನಿರೀಕ್ಷಿತ ಘಟನೆ. ಅಲ್ಲದೆ ನಾವು ಒಬ್ಬ ವೈದ್ಯರಾಗಿದ್ದು ಬೇಕು ಎಂದು ಈ ರೀತಿಯ ತಪ್ಪುಗಳನ್ನು ಮಾಡುವವರಲ್ಲ. ಕಾರಿನ ಫೋಟೋ ತೆಗೆದಾಗ ಫೋಟೋ ಏಕೆ ತೆಗೆಯುತ್ತೀರಿ ಎಂದು ಪ್ರಶ್ನೆ ಮಾಡಿದ್ದೇನೆ ಬಿಟ್ಟರೆ ಬೇರೆ ಏನು ನಾನು ಹೇಳಿರಲಿಲ್ಲ ಎಂದು ಅಮರ ಸುದ್ದಿಗೆ ತಿಳಿಸಿದ್ದಾರೆ.ಇದೀಗ ಅದೇ ರೀತಿಯ ಕೆಲಸ ಆಂಬುಲೆನ್ಸ್ ನ ಚಾಲಕರೋರ್ವರಿಂದ ನಡೆದಿದ್ದು ಕೆಲವು ಸಂಧರ್ಭಗಳಲ್ಲಿ ಇಂತಹ ಘಟನೆ ಸಾಮಾನ್ಯವಾಗಿ ನಡೆಯುವುದು ಸಹಜವಾಗಿದೆ. ತಪ್ಪು ಯಾರಿಂದಲೂ ಸಂಭವಿಸುತ್ತದೆ. ಆದರೆ ಅದನ್ನು ಮಾತಿನ ಮೂಲಕ ಸರಿ ಪಡಿಸಿಕ್ಕೊಂಡು ಸಣ್ಣ ಪುಟ್ಟ ತಪ್ಪು ಗಳನ್ನು ದೊಡ್ಡದಾಗಿ ಬಿಂಬಿಸದೇ ಪರಸ್ಪರ ವಿಶ್ವಾಸವನ್ನು ಮೆರೆಯುವುದು ಉತ್ತಮ ವಲ್ಲವೇ ಎಂದು ಸಾರ್ವಜನಿಕರು ಇದೀಗ ಮಾತಾಡಿಕೊಳ್ಳುತ್ತಿದ್ದಾರೆ.ಆಂಬುಲೆನ್ಸ್‌ ಪಾರ್ಕ್ ಮಾಡಿದ ವಿಷಯದ ಬಗ್ಗೆ ಅದರ ಚಾಲಕರಲ್ಲಿ ವಿಚಾರಿಸಿದಾಗ ನಾಳೆ ಆಸ್ಪತ್ರೆ ಪರಿಸರದಲ್ಲಿ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಬಗ್ಗೆ ವೈದ್ಯಾಧಿಕಾರಿಗಳಲ್ಲಿ ಮಾತಾಡಲು ಹೋಗಿದ್ದು ಈ ವೇಳೆ ಒಂದು 5,10 ನಿಮಿಷ ಕಾರು ನಿಲ್ಲಿಸಲಾಗಿತ್ತು ಎಂದು ಅಮರ ಸುದ್ದಿಗೆ ತಿಳಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!