Ad Widget

ಸುಬ್ರಹ್ಮಣ್ಯ ಮಹಿಳಾ ಸೊಸೈಟಿ ಆಶ್ರಯದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹ 2024

. . . . . . .

ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಸಾಮಾಜಿಕ ಭದ್ರತೆ ದೊರೆಯುತ್ತದೆ – ಆರತಿ ಕೆ

ವೇದಗಳ ಕಾಲದಲ್ಲಿ ಮಹಿಳೆಯರಿಗೆ ಪೂರ್ಣ ಸ್ವಾತಂತ್ರ್ಯವಿತ್ತು. ಅವರೂ ಪುರುಷರ ಹಾಗೆ ಮುಖ್ಯ ವಾಹಿನಿಯಲ್ಲಿದ್ದರು. ಕಾಲಾನಂತರ ಮುಸಲ್ಮಾನರ ಧಾಳಿಯ ಸಂದರ್ಭದಲ್ಲಿ ಮಹಿಳೆಯರ ಅತ್ಯಾಚಾರ ನಡೆಯುತ್ತಿದ್ದು. ಆಗ ಅನಿವಾರ್ಯವಾಗಿ ಮಹಿಳೆಯರು ತಮ್ಮ ರಕ್ಷಣೆಗಾಗಿ ಮನೆಯ ಒಳಗೆ ನಿಲ್ಲುವಂತಾಯಿತು. ಆದರೆ ಈಗ ಹಾಗಲ್ಲ ಹಲವು ಮಂದಿ ಸಬಲರಾಗಿದ್ದಾರೆ. ಆದರೂ ಎಷ್ಟೋ ಮಹಿಳೆಯರು ಇನ್ನೂ ಮುಖ್ಯ ವಾಹಿನಿಗೆ ಬಾರದವರಿದ್ದಾರೆ. ಅವರನ್ನು ಸಹಕಾರಿ ಸಂಘಗಳು ಮುಂದೆ ತರುವ ಕೆಲಸ ಮಾಡಬೇಕಿದೆ. ಅವರಿಗೆ ಬದುಕುವ ಹಾದಿಯನ್ನು ತೋರಿಸಬೇಕಿದೆ. ಈಗಿನ ಹುಡುಗರಲ್ಲಿ ಮೊಬೈಲ್ ಚಟದಿಂದಾಗಿ ಸಾಮಾಜಿಕವಾಗಿ ತೊಡಗಿಸಿಕೊಳ್ಳುವುದು ಕಡಿಮೆಯಾಗಿದೆ. ಅಂತವರನ್ನು ಸಹಕಾರಿ ಸಂಘಗಳ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಮಹಿಳೆಯರು ಆರ್ಥಿಕವಾಗಿ ಸಬಲರಾದರೆ ಸಾಮಾಜಿಕ ಭದ್ರತೆ ದೊರೆಯುತ್ತದೆ ಎಂದು ಸುಬ್ರಹ್ಮಣ್ಯ ಕೆ.ಎಸ್.ಎಸ್. ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಆರತಿ ಕೆ ಹೇಳಿದರು.

ಅವರು ನ. 19ರಂದು ಸುಬ್ರಹ್ಮಣ್ಯ ಗ್ರಾ.ಪಂ.ನ ರಾಜೀವ್ ಗಾಂಧಿ ಸೇವಾ ಕೇಂದ್ರದ ಕುಮಾರಧಾರಾ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ೩ ಮಂಗಳೂರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು, ಸಹಕಾರ ಇಲಾಖೆ, ಸುಳ್ಯ ತಾಲೂಕು ಸಹಕಾರಿ ಯೂನಿಯನ್,
ಕಡಬ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಇತರ ಸಹಕಾರಿ ಸಂಘಗಳ
ಯೂನಿಯನ್, ಸುಳ್ಯ ರೆಸ್ಟೋರೆಂಟ್
ಸಹಭಾಗಿತ್ವದಲ್ಲಿ ಮಹಿಳೆಯರ ವಿವಿಧೋದ್ದೇಶ ಸಹಕಾರ ಸಂಘ ಸುಬ್ರಹ್ಮಣ್ಯ ಇದರ
ಅಶ್ರಯದಲ್ಲಿ ನಡೆದ 71ನೇ ಅಖಿಲ ಭಾರತ ಸಹಕಾರ
ಸಪ್ತಾಹ 2024 ಕಾರ್ಯಕ್ರಮದಲ್ಲಿ ದಿಕ್ಕೂಚಿ ಭಾಷಣ
ಮಾಡುತ್ತಾ ಹೇಳಿದರು. ಮಹಿಳೆಯರ ವಿವಿಧೋದ್ದೇಶ
ಸಹಕಾರ ಸಂಘ ಸುಬ್ರಹ್ಮಣ್ಯ ಇದರ ಅಧ್ಯಕ್ಷೆ ಶ್ರೀಮತಿ
ರಾಜೀವಿ ಆ‌ರ್. ರೈಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ
ಕಾರ್ಯಕ್ರಮವನ್ನು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್‌ ನಿರ್ದೇಶಕ
ಶಶಿಕುಮಾ‌ರ್ ರೈ ಬಾಲ್ಗೊಟ್ಟು ಉದ್ಘಾಟಿಸಿ ಮಾತನಾಡಿ ಸಾಲದ ಅಗತ್ಯ ಬಿದ್ದಾಗ ಕೃಷಿಕರ ಪಾಲಿಗೆ ವರದಾನವಾದದ್ದು ಸಹಕಾರಿ ಸಂಘಗಳು.
ಸಹಕಾರಿ ಸಂಘದ ಸಾಲ ಎಂದರೆ ಮನೆಯ ಪೆಟ್ಟಿಗೆಯಲ್ಲಿಟ್ಟ ಹಣದ ಹಾಗೆ. ಸ್ವ ಸಹಾಯ ಸಂಘಗಳ ಮೂಲಕ ನಾಲ್ಕು ಗೋಡೆಗಳ ಮಧ್ಯೆ ಇದ್ದ ಮಹಿಳೆಯರು ಇವತ್ತು ವೇದಿಕೆಗೆ ಬರುವಂತಾಯಿತು. ಮಹಿಳಾ ಸೊಸೈಟಿ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ ಎಂದರು. ದ.ಕ. ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಧ್ವಜಾರೋಹಣಗೈದರು. ಶಾಸಕಿ ಕು. ಭಾಗೀರಥಿ ಮುರುಳ್ಯ ಸಂಘದ ಮಾಜಿ ಅಧ್ಯಕ್ಷರುಗಳು ಮತ್ತು ನೌಕರರನ್ನು ಸನ್ಮಾನಿಸಿ ಮಾತನಾಡುತ್ತಾ ಮಹಿಳೆಯರು ಜವಾಬ್ದಾರಿ ಮೇಲೆ ನಗುಮೊಗದಿಂದ ಸ್ವಾಗತಿಸುವುದನ್ನು ಕಲಿಯಬೇಕು. ಈ ಗುಣವನ್ನು ರಾಜೀವಿ ರೈಯವರು ಬೆಳೆಸಿಕೊಂಡಿರುವ ಕಾರಣ ಸಂಘ ಬೆಳೆದಿದೆ. ಮಹಿಳೆಯರ ಸಮಸ್ಯೆಗಳಿದ್ದರೆ ನನಗೆ ತಿಳಿಸಿ. ನಾನು ಸಾಧ್ಯವಾದಷ್ಟು ವಿಧಾನ ಸಭೆಯಲ್ಲಿ ಪ್ರಸ್ತಾಪಿಸುವ ಕೆಲಸ ಮಾಡುತ್ತೇನೆ ಎಂದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್.ಎನ್. ಮನ್ಮಥ ಮಾತನಾಡಿ ದುರ್ಬಲ ವರ್ಗದ ಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸ ಸಹಕಾರಿ ಸಪ್ತಾಹದ ಮೂಲಕ ನೆರವೇರಲಿ ಎಂದರು. ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕಿ ಸಾವಿತ್ರಿ ರೈ ಅತಿಥಿಯಾಗಿ ವೇದಿಕೆಯಲ್ಲಿ ಭಾಗವಹಿಸಿದ್ದರು. ಪುತ್ತೂರು ಉಪ ವಿಭಾಗ ಸಹಕಾರ ಸಂಘಗಳ ಸಹಾಯಕ ನಿರ್ದೇಶಕರಾದ ಎಸ್‌.ಎಂ. ರಘು, ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಜಯಪ್ರಕಾಶ್‌ ಕೂಜುಗೋಡು, ಮಂಗಳೂರು ನವೋದಯ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪೂರ್ಣಿಮಾ ಶೆಟ್ಟಿ, ಹಿರಿಯ ನಿರ್ದೇಶಕರಾದ ಶ್ರೀಮತಿ ಸುವರ್ಣಿನಿ ಎನ್‌.ಎಸ್, ಶ್ರೀಮತಿ ಶೋಭ ನಲ್ಲೂರಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ರಾಜೀವಿ ಆರ್ ರೈಯವರು ಮಾತನಾಡಿ ಈ ಸಂಸ್ಥೆ ನನಗೆ ಮಗು ಇದ್ದ ಹಾಗೆ. ಈ ಸಂಸ್ಥೆಯನ್ನು ಬೆಳೆಸುವುದಕ್ಕೆ ನಾನು ಸಿಬ್ಬಂದಿಯಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ತುಂಬಾ ಕಷ್ಟ ಪಟ್ಟಿದ್ದೇನೆ. ಈಗ ಸಂಘ ಬಲಿಷ್ಟವಾಗಿ ಎದ್ದು ನಿಂತಿದೆ ಎಂದು ಹೇಳಲು ಸಂತೋಷಪಡುತ್ತೇನೆ ಎಂದು ಹೇಳುತ್ತಾ ಸಂಘ ಬೆಳೆದು ಬಂದ ಹಾದಿಯನ್ನು ವಿವರಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ವಾರಿಜಾಕ್ಷಿ ಪಿ ಸಂಘದ ವರದಿ ವಾಚಿಸಿದರು. ಶಾಸಕಿ ಕು. ಭಾಗೀರಥಿ ಮುರುಳ್ಯ, ಶ್ರೀಮತಿ ಸಾವಿತ್ರಿ ರೈ, ಸಂಘದ ಮಾಜಿ ಅಧ್ಯಕ್ಷರುಗಳಾದ ಶ್ರೀಮತಿ ಎಸ್. ಎಸ್ ಮಹಾದೇವಿ, ಶ್ರೀಮತಿ ಪ್ರೇಮಲತಾ ರೈ ಮತ್ತು ಸಂಘದ ನಿವೃತ್ತ ಶಾಖಾಧಿಕಾರಿ ಶ್ರೀಮತಿ ಕಮಲಾವತಿ ಎನ್.ಎಸ್.ರವರನ್ನು ಸನ್ಮಾನಿಸಲಾಯಿತು. ನಿರ್ದೇಶಕರಾದ ಶ್ರೀಮತಿ ಶ್ಯಾಮಲಾ ಮೋಹನ್, ಶ್ರೀಮತಿ ಶೋಭ ನಲ್ಲೂರಾಯ, ಶ್ರೀಮತಿ ದಿವ್ಯಕಲಾ ಮತ್ತು ಶ್ರೀಮತಿ ಸೌಮ್ಯ ಬಿ.ಕೆ ಸನ್ಮಾನ ಪತ್ರ ವಾಚಿಸಿದರು. ಶ್ರೀಮತಿ ತ್ರಿವೇಣಿ ದಾಮ್ಲೆ ಆರತಿಯವರನ್ನು ಪರಿಚಯಿಸಿದರು. ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ಉಪ್ಪಳಿಕೆ ಸ್ವಾಗತಿಸಿ, ಶ್ರೀಮತಿ ಸುವರ್ಣಿನಿ ವಂದಿಸಿದರು.

ಕು. ಪೂರ್ವಿ ದಾಮ್ಲೆ ಪ್ರಾರ್ಥಿಸಿದರು. ಶ್ರೀಮತಿ ಲೀಲಾ ಮನಮೋಹನ್ ಮತ್ತು ಶ್ರೀಮತಿ ದಿವ್ಯಕಲಾ ಕಾರ್ಯಕ್ರಮ ನಿರೂಪಿಸಿದರು. ದ.ಕ. ಜಿಲ್ಲಾ ಯೂನಿಯನ್ ಅಧ್ಯಕ್ಷ ಬೆಳ್ಳಿಪ್ಪಾಡಿ ಪ್ರಸಾದ್‌ ಕೌಶಲ್ ಶೆಟ್ಟಿ ರೂ. 25 ಸಾವಿರದ ಚೆಕ್ ನೀಡಿದರು. ಸಂಘದ ಸಿಬ್ಬಂದಿಗಳು ಸಹಕಾರ ನೀಡಿದರು. ವಿವಿಧ ಸಹಕಾರಿ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಅಧ್ಯಕ್ಷರು, ನಿರ್ದೇಶಕರು, ಮಹಿಳಾ ಸೊಸೈಟಿಯ ನಿರ್ದೇಶಕರು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!