ಸುಳ್ಯ: ರಾಜ್ಯ ಕಾಂಗ್ರೆಸ್ ಘಟಕವು ಕಾರ್ಯಕರ್ತರ ನಡುವಿನ ನಾಯಕರು ಪಕ್ಷದ ಚುಕ್ಕಾಣಿ ಹಿಡಿಯಬೇಕು ಎಂಬ ಕಲ್ಪನೆಯೊಂದಿಗೆ ರಾಷ್ಟ್ರೀಯ ನಾಯಕರು ಮಾಜಿ ಎ ಐ ಸಿ ಸಿ ಅಧ್ಯಕ್ಷರು ಹಾಗೂ ಸಂಸದರಾದ ರಾಹುಲ್ ಗಾಂಧಿ ನೇತೃತ್ವದಲ್ಲಿ ಈ ಹಿಂದೆ ಯುವ ಕಾಂಗ್ರೆಸ್ ಘಟಕಕ್ಕೆ ಚುನಾವಣೆ ನಡೆಸಿ ಯಶಸ್ವಿಯಾದ ಬಳಿಕ ಎಲ್ಲಾ ರಾಜ್ಯಗಳಲ್ಲಿಯೂ ಯುವ ಕಾಂಗ್ರೆಸ್ ನಾಯಕರ ಆಯ್ಕೆ ಪ್ರಕ್ರಿಯೆಯು ಚುನಾವಣೆ ಮೂಲಕ ನಡೆಸಲು ಆರಂಭಿಸಿತು. ಅದರಂತೆ ಈ ಭಾರಿಯು ಚುನಾವಣೆ ನಡೆಸಲಾಗಿದ್ದು ಇದರಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಉಮೇದುವಾರಿಕೆ ಸಲ್ಲಿಸಿ ಚುನಾವಣಾ ಪ್ರಕ್ರಿಯೆ ಮುಗಿದು ಫಲಿತಾಂಶ ದಿನಾಂಕವು ಘೋಷಣೆಯಾಗಿತ್ತು. ಆದರೆ ಇದೀಗ ಫಲಿತಾಂಶ ದಿನಾಂಕ ಕಳೆದು ತಿಂಗಳುಗಳು ಕಳೆದರೂ ಫಲಿತಾಂಶ ಪ್ರಕಟವಾಗದೇ ಇದ್ದು ಚುನಾವಣೆಗೆ ಸ್ಪರ್ಧಿಸಿದ್ದ ಕಾರ್ಯಕರ್ತರು ನಿರಾಶೆ ಅನುಭವಿಸುತ್ತಿದ್ದು ರಾಜ್ಯ ಕಾಂಗ್ರೆಸ್ ಘಟಕವು ಆದಷ್ಟು ಬೇಗ ಫಲಿತಾಂಶ ಪ್ರಕಟ ಮಾಡಬೇಕಿದೆ.
ಚುಣಾವಣಾ ಪ್ರಕ್ರಿಯ ಕುರಿತು ಮಾಹಿತಿ
ಅಗಸ್ಟ್ ತಿಂಗಳಿನ 20 ರಂದು ಚುನಾವಣಾ ಪ್ರಕ್ರಿಯೆ ಆರಂಭಗೊಂಡು ಸುಧೀರ್ಘವಾಗಿ ಒಂದು ತಿಂಗಳುಗಳ ಕಾಲ ಪ್ರಕ್ರಿಯೆ ನಡೆಸಿ ಒಕ್ಟೋಬರ್ ೨೦ ರಂದು ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿದ್ದರು. ಆದರೆ ಇದೀಗ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಚೇತನ್ ಕಜೆಗದ್ದೆ ಮತ್ತು ಆಶಿಕ್ ಅರಂತೋಡು ಮುಖಾಮುಖಿಯಾಗಿ ಭಾರಿ ಕುತೂಹಲ ಮೂಡಿಸಿದ್ದರು. ಅದರಂತೆ ವಿಧಾನಸಭಾ ಕ್ಷೇತ್ರದಲ್ಲಿ ರಂಜಿತ್ ರೈ ಮೇನಾಲ ಮತ್ತು ಫೈಝಲ್ ಕಡಬ ನಾಮಪತ್ರ ಸಲ್ಲಿಸಿ ಹಣಾಹಣಿ ನಡೆದಿದ್ದು ಇದೀಗ ಸಂಪೂರ್ಣವಾಗಿ ಚುನಾವಣೆ ಪ್ರಕ್ರಿಯೆ ಮುಗಿಸಿದ್ದರೂ ಫಲಿತಾಂಶ ಮಾತ್ರ ಬಾಕಿ ಇದ್ದು ಇದೀಗ ಸ್ಪರ್ಧಿಸಿದ ಅಭ್ಯರ್ಥಿಗಳು ಫಲಿತಾಂಶ ಘೋಷಣೆ ಆಗದೇ ಗೊಂದಲಕ್ಕಿಡಾಗಿದ್ದು ರಾಜ್ಯ ಮಟ್ಟದ ಪದಾಧಿಕಾರಿಗಳ ಸಹಿತ ಪದಾಧಿಕಾರಿಗಳ ಫಲಿತಾಂಶ ಪ್ರಕಟಿಸುವುದೇ ಅಥಾವ ಗ್ಯಾರಂಟಿ ಯೋಜನೆ ಅನುಷ್ಠಾನ ಹಾಗೂ ಭ್ರಷ್ಟಾಚಾರ ಆರೋಪಕ್ಕೆ ಉತ್ತರಿಸುವ ಭರದಲ್ಲಿ ಕಾರ್ಯಕರ್ತರನ್ನು ಕಡೆಗಣಿಸುವುದೇ ಎಂಬುವುದು ಕಾರ್ಯಕರ್ತರ ಪ್ರಶ್ನೆಯಾಗಿದೆ.