ಅಜ್ಜಾವರ ಗ್ರಾಮದ ಮೇನಾಲ ಸ.ಕಿ.ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಮತ್ತು ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ನ.೧೭ ರಂದು ಶಾಲಾ ವೇದಿಕೆಯಲ್ಲಿ ನಡೆಯಿತು.
ಅಂಗನವಾಡಿ ಮಕ್ಕಳಿಗೆ, ಶಾಲೆಯ ವಿಧ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷರಾದ ದೇವಕಿ ಮೇನಾಲ ವಹಿಸಿದ್ದರು. ಕಾರ್ಯಕ್ರಮದಲ್ಲಿ
ರಾಮಚಂದ್ರ ಪಳ್ಳತ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಾಜಿ ಗ್ರಾ.ಪಂ ಅಧ್ಯಕ್ಷರು, ಹಾಲಿ ಸದಸ್ಯರಾದ ಪ್ರಸಾದ್ ರೈ ಮೇನಾಲ, ಸರೋಜಿನಿ ಮೇನಾಲ, ರಂಜಿತ್ ರೈ ಮೇನಾಲ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಶೌಕತ್ ಆಲಿ ಶುಭಹಾರೈಸಿದರು. ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳ ಕ್ರೀಡಾ ಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಿಸಲಾಯಿತು. ಬಳಿಕ ಅಂಗನವಾಡಿ ಶಿಕ್ಷಕಿ ದೇವಕಿ ಹಾಗೂ ಕು.ಲಕ್ಷ್ಮಿ ಪಳ್ಳತ್ತಡ್ಕ ,ರಶ್ಮಿತಾ ಕರ್ಕೆರಾ, ಉಮೇಶ್ ಅನಿಸಿಕೆ ವ್ಯಕ್ತ ಪಡಿಸಿದರು. ಹಳೆ ವಿದ್ಯಾರ್ಥಿಗಳಿಂದ ಶಾಲೆಗೆ ಶಾಲೆಗೆ ಗಡಿಯಾರ ಕೊಡುಗೆಯಾಗಿ ನೀಡಲಾಯಿತು.
ಎಸ್ ಡಿ ಎಂ ಸಿ ಅಧ್ಯಕ್ಷತೆಗೆ ಸೌಕತ್ ಆಲಿ ರಾಜೀನಾಮೆ
ಸಭಾ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಸೌಕತ್ ಆಲಿ ಮಾತನಾಡಿ ಶಾಲೆಯ ಅಭಿವೃದ್ಧಿಗಾಗಿ ಸರ್ವ ಸದಸ್ಯರ ಸಹಕಾರದಿಂದ ಕೆಲಸ ಕಾರ್ಯಗಳನ್ನು ಮಾಡಲಾಗಿದೆ. ನನ್ನ ಜೊತೆಗೆ ಕೈ ಜೋಡಿಸಿದ ಎಲ್ಲಾ ಸದಸ್ಯರುಗಳಿಗೆ ಹಾಗೂ ಶಿಕ್ಷಕರಿಗೆ ಧನ್ಯವಾದ ಸಮರ್ಪಿಸಿದರು. ನನಗೆ ನೀಡಿದ ರೀತಿಯ ಅಸಹಕಾರ ಯಾವುದೇ ಮುಂದೆ ಬರುವ ಅಧ್ಯಕ್ಷರಿಗೆ ನೀಡಬೇಡಿ ಉತ್ತಮ ರೀತಿಯಲ್ಲಿ ಸಹಕಾರ ನೀಡಿ ಶಾಲೆಯಲ್ಲಿ ಜಾತಿ , ಧರ್ಮ , ಮತ , ಪಂಕ್ತಿ ಬೇಡ ಎಂದು ಭಾವುಕರಾಗಿ ನುಡಿದು ತನ್ನ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಪ್ರಕಟಿಸಿದರು. ಎಸ್ ಡಿ ಎಂಸಿ ಅಧ್ಯಕ್ಷರಾಗಿ ಸುಮಾರು ಮೂರು ವರ್ಷಕ್ಕಿಂತ ಅಧಿಕ ಕಾಲ ಕೆಲಸ ನಿರ್ವಹಿಸಿ ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ಸೌಕತ್ ಆಲಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಕನಕಯವರನ್ನು ಶಾಲೆ ಮೈದಾನದಲ್ಲಿ ಫುಟ್ಬಾಲ್ ಮತ್ತು ಕ್ರಿಕೇಟ್ ಆಡುವ ಯುವಕರ ತಂಡವು ವಿಷ್ಣು ಯುವಕ ಮಂಡಲದ ಪದಾಧಿಕಾರಿಗಳು ಹಾಗೂ ಊರವರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಲಕ್ಕ್ ಡಿಪ್ ವಿಜೇತರನ್ನು ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಲಾಯಿತು. ಶಾಲಾ ವಿಧ್ಯಾರ್ಥಿ ನಾಯಕಿ ಸ್ವಾಗತಿಸಿ ಚಂದ್ರಶೇಖರ ಪಳ್ಳತ್ತಡ್ಕ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಸಂಧರ್ಭದಲ್ಲಿ ವಿದ್ಯಾ ಮತ್ತು ಊರಿನವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕರಾದ ಲತಾ , ಉಷಾ , ವಿಷ್ಣು ಯುವಕ ಮಂಡಲದ ಸರ್ವ ಸದಸ್ಯರು ಹಾಗೂ ಎಸ್ ಡಿ ಎಂ ಸಿ ಉಪಾಧ್ಯಕ್ಷರಾದ ರಶ್ಮಿತಾ ಕರ್ಕೆರಾ ಸಹಕರಿಸಿದರು .