ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಹಾಗೂ ಜಿ.ಎಲ್. ಆಚಾರ್ಯ ಜನ್ಮಶತಮಾನೋತ್ಸವ ಸಮಿತಿ ಜಂಟಿ ಆಶ್ರಯದಲ್ಲಿ ಜಿ.ಎಲ್. ಆಚಾರ್ಯ ಸಂಸ್ಮರಣಾ ಕಾರ್ಯಕ್ರಮವು ನ.೧೭ರಂದು ಪುತ್ತೂರು ಬೈವಾಸ್‌ನಲ್ಲಿರುವ ಅಶ್ಮಿ ಕಂಫಟ್ಸ್ ಸಭಾಂಗಣದಲ್ಲಿ ನಡೆಯಿತು.
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ಇದರ ಪೂರ್ವಾಧ್ಯಕ್ಷರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕ.ಸಾ.ಪ. ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ ನಾಯಕ್ ವಹಿಸಿದ್ದರು. ಮೆ| ಜಿ.ಎಲ್. ಆಚಾರ್ಯ ಸಮೂಹ ಸಂಸ್ಥೆಯ ಆಡಳಿತ ನಿರ್ದಶಕರಾದ ಜಿ.ಎಲ್. ಬಲರಾಮ ಆಚಾರ್ಯರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ನಿಕಟಪೂರ್ವ ಅಧ್ಯಕ್ಷರಾದ ಎಸ್. ಪ್ರದೀಪ ಕುಮಾರ ಕಲ್ಕೂರ ಜಿ.ಎಲ್. ಆಚಾರ್ಯ ಶತಮಾನೋತ್ಸವದ ಲಾಂಛನ ಬಿಡುಗಡೆಯನ್ನು ಮಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಸತೀಶ್ ರಾವ್ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕೋಶಾಧ್ಯಕ್ಷರಾದ ಬಿ. ಐತ್ತಪ್ಪ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸಂಘ ಪುತ್ತೂರು ಇದರ ಅಧ್ಯಕ್ಷರಾದ ಬಿ. ಪುರಂದರ ಭಟ್, ಪುತ್ತೂರಿನ ಹಿರಿಯ ಸಾಹಿತಿಗಳಾದ ಪ್ರೊ. ವಿ.ಬಿ. ಅರ್ತಿಕಜೆ ಮತ್ತು ಪುತ್ತೂರು ಡಾ. ವಸಂತ ಕುಮಾರ್ ತಾಳ್ತಜೆ ಇವರನ್ನು ಸನ್ಮಾನಿಸಲಾಯಿತು.
ವಿಚಾರ ಗೋಷ್ಠಿಗಳನ್ನು ನಿವೃತ್ತ ಪ್ರಾಂಶುಪಾಲರಾದ ಡಾ. ಹೆಚ್. ಮಾಧವ ಭಟ್ಟರವರು ಜಿ.ಎಲ್. ಆಚಾರ್ಯರ ಶಿಕ್ಷಣ ಸೇವೆ ಎಂಬ ವಿಷಯ ಹಾಗೂ ಜಿ.ಎಲ್. ಆಚಾರ್ಯರ ಉದ್ಯಮ ಹಾಗೂ ಸಾಹಿತ್ಯ ಸೇವೆ ಎಂಬ ವಿಷಯದ ಕುರಿತು ವಿವೇಕಾನಂದ ಪದವಿ ಮಹಾವಿದ್ಯಾಲಯದ ಪರೀಕ್ಷಾಂಗ ಕುಲ ಸಚಿವರಾದ ಡಾ. ಹೆಚ್. ಜಿ. ಶ್ರೀಧರ ಹಾಗೂ ಜಿ.ಎಲ್. ಆಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಸೇವೆ ಎಂಬ ವಿಷಯದ ಕುರಿತು ವಿಷಯ ರಾಷ್ಟ್ರಪ್ರಶಸ್ತಿ ಪುರಸ್ಕೃತ ಅಧ್ಯಾಪಕರಾದ ನಾರಾಯಣ ಭಟ್ ಟಿ. ರಾಮಕುಂಜ ಗೋಷ್ಠಿ ನಡೆಸಿಕೊಟ್ಟರು. ರೊ| ಸುರೇಶ ಶೆಟ್ಟಿ, ಶಿಕ್ಷಣ ತಜ್ಞರು ಹಾಗೂ ಶ್ರೀಮತಿ ರಾಜಿ ಬಲರಾಮ್, ವರ್ತಕರ ಸಂಘ, ಪುತ್ತೂರು ಇದರ ಅಧ್ಯಕ್ಷರಾದ ವಾಮನ ಪೈ ಮತ್ತು ಲಕ್ಷ್ಮೀಕಾಂತ್ ಆಚಾರ್ಯ, ಧಾರ್ಮಿಕ ಮುಂದಾಳು ಯು. ಪೂವಪ್ಪ ಮತ್ತು ಸುಧನ್ವ ಆಚಾರ್ಯ ಉಪಸ್ಥಿತರಿದ್ದರು.