ಕೊಲ್ಲಮೊಗ್ರ ಗ್ರಾಮದ ಚಾಂತಾಳ ದಿ. ಚಿನ್ನಪ್ಪ ಮಾಸ್ಟರ್ ರವರ ಧರ್ಮಪತ್ನಿ ದೇವರಗುಂಡ ಮನೆತನದ ನಿವೃತ್ತ ಮುಖ್ಯ ಶಿಕ್ಷಕಿ ಲಲಿತಾ ಡಿ.ಎಂ.(74) ಅಲ್ಪ ಕಾಲದ ಅಸೌಖ್ಯದಿಂದ ಇಂದು ಸ್ವಗೃಹದಲ್ಲಿ ನಿಧನರಾದರು. 1969 ರಲ್ಲಿ ಸೋಣಂಗೇರಿ ಶಾಲೆಯಲ್ಲಿ ಶಿಕ್ಷಕಿಯಾಗಿ ವೃತ್ತಿ ಆರಂಭಿಸಿದ ಇವರು ಬಳಿಕ ಕನಕಮಜಲು, ಈಶ್ವರಮಂಗಲ, ಕೊಲ್ಲಮೊಗ್ರ, ಹರಿಹರಪಲ್ಲತ್ತಡ್ಕ ಹಾಗೂ ಕಲ್ಮಕಾರಿನಲ್ಲಿ ಮುಖ್ಯಶಿಕ್ಷಕರಾಗಿ 2004 ರಲ್ಲಿ ನಿವೃತ್ತರಾದರು. ಸುಮಾರು 35 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಮೃತರು ಪುತ್ರರಾದ ಸುರತ್ಕಲ್ ನ ವಿದ್ಯಾಧಾಯಿನಿ (CBSE) ಆಂಗ್ಲಮಾಧ್ಯಮ ಶಾಲೆಯಲ್ಲಿ ಪ್ರಾಂಶುಪಾಲರಾಗಿರುವ ಶಶಿಕುಮಾರ್, ಲೋಕೇಶ್(ಲೀಲಾಧರ್), ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಶಿವಪ್ರಸಾದ್ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
- Friday
- November 22nd, 2024