ಮತ್ತೆ ಮತ್ತೆ ಅಪಘಾತದಿಂದ ಸುದ್ದಿಯಾಗುತ್ತಿರುವ ಅರಂಬೂರು ಸಮೀಪದ ಪಾಲಡ್ಕ
ಇಂದು ಬೆಳಿಗ್ಗೆ ಸುಳ್ಯ ಅರಂಬೂರು ಸಮೀಪದ ಪಾಲಡ್ಕ ಎಂಬಲ್ಲಿ ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಇಕೋ ಸ್ಪೋರ್ಟ್ಸ್ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಬ್ಬಿಣದ ತಡೆಗೋಡೆಗೆ ಅಪ್ಪಳಿಸಿ ನಜ್ಜುಗುಜ್ಜಾಗಿರುವ ಘಟನೆ ಮುಂಜಾನೆ ವೇಳೆ ನಡೆದಿದೆ. ಘಟನೆಯಲ್ಲಿ ಯಾವುದೇ ಸಾವುನೋವಿನ ವರದಿಯಾಗಿಲ್ಲ. ಈ ಪರಿಸರವು ದಿನೇ ದಿನೇ ಅಪಘಾತಗಳಿಂದಾಗಿ, “ಅಪಘಾತ ವಲಯ”ವಾಗಿ ಮಾರ್ಪಟ್ಟಿದೆ.
ಕೇವಲ ಎರಡು ದಿನಗಳ ಹಿಂದೆ ಚಲಿಸುತ್ತಿದ್ದ ಗೂಡ್ಸ್ ವಾಹನದ ಮೇಲೆ ಮರ ಬಿದ್ದು, ವಾಹನ ನಜ್ಜುಗುಜ್ಜಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದನ್ನು ಸ್ಮರಿಸಬಹುದು.