ಮಹಿಳೆ ಚಲಾಯಿಸುತ್ತಿದ್ದ ಕಾರಿಗೆ ಗುದ್ದಿ ಹಿಟ್ ಅಂಡ್ ರನ್ ಮಾಡಿ ಎಸ್ಕೆಪ್ ಆಗಿದ್ದ ಹಿಟಾಚಿ ಸಾಗಿಸುತ್ತಿದ್ದ ಟಿಪ್ಪರ್ ಸುಳ್ಯ ಕೆಇಬಿ ಬಳಿ ಇದೀವ ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಈ ಘಟನೆ ಗುರುವಾರ ತಡರಾತ್ರಿ ನಡೆದಿತ್ತು. ಅದಾದ ಬಳಿಕ ಶುಕ್ರವಾರ ಬೆಳಗ್ಗಿನಿಂದ ಸಂಜೆ ತನಕ ಸುಳ್ಯ ಆಂಬ್ಯುಲೆನ್ಸ್ ಚಾಲಕ-ಮಾಲಕರ ಸಂಘದವರು ಸೇರಿಕೊಂಡು ಸುಳ್ಯದಾಧ್ಯಂತ ಟಿಪ್ಪರ್ ಗಾಗಿ ಹುಡುಕಾಡಿದರೂ ಟಿಪ್ಪರ್ ಮಾತ್ರ ಪತ್ತೆಯಾಗಿರಲಿಲ್ಲ.
ಮಡಿಕೇರಿ ಕಡೆಯಿಂದ ಬರುತ್ತಿದ್ದ ಕಾವೇರಿ ಆಂಬ್ಯುಲೆನ್ಸ್ ಮಾಲಕರ ವಾಹನಕ್ಕೆ ಪುತ್ತೂರು ಕಡೆಯಿಂದ ಬರುತ್ತಿದ್ದ ಟಿಪ್ಪರ್ ಬೈತಡ್ಕ ಎಂಬಲ್ಲಿ ಗುದ್ದಿದ್ದು ಚಾಲಕನು ಮಾನವೀಯತೆ ಮರೆತ ಟಿಪ್ಪರ್ ಚಾಲಕ ತನ್ನ ವಾಹನವನ್ನು ನಿಲ್ಲಿಸದೆ ಪರಾರಿಯಾಗಿದ್ದ. ಈ ವಾಹನ ಹುಡುಕಾಡಲು ಎಲ್ಲ ರೀತಿಯ ಪ್ರಯತ್ನ ಇಂದು ಸಂಜೆ ತನಕ ನಡೆಯಿತು. ಆದರೆ ಕೊನೆಗೆ ಕೆಇಬಿ ಬಳಿ ನಂಬರ್ ಪ್ಲೇಟ್ ಇಲ್ಲದ ಸ್ಥಿತಿಯಲ್ಲಿ ಲಾರಿ ಪತ್ತೆಯಾಗಿದೆ. ಇದೀಗ ಪೊಲೀಸರು ಲಾರಿ ಮತ್ತು ಕಾರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ.