ಸುಳ್ಯ : ಸುಳ್ಯ ತಾಲೂಕಿನ ವಿಸ್ತಾರದಲ್ಲಿ ದೊಡ್ಡದಾದ ಗ್ರಾಮ ಹಾಗೂ ಸಂಪನ್ಮೂಲಗಳನ್ನು ಹೊಂದಿರುವ ಗ್ರಾಮವಾದ ಅಲೆಟ್ಟಿಯಲ್ಲಿ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಮತ್ತೆ ಮತ್ತೆ ಕಾಣಸಿಗುತ್ತಿದ್ದು ಅಲ್ಲಿನ ಪ್ರತಿನಿಧಿಗಳು ಮತ್ತು ಆಡಳಿತವು ನಿದ್ರೆಗೆ ಜಾರಿದೆಯೇ ಎಂಬ ಪ್ರಶ್ನೆ ಜನ ಸಾಮಾನ್ಯರಲ್ಲಿ ಉದ್ಬವಿಸಿದೆ.
ಕೆಲ ದಿನಗಳ ಹಿಂದೆ ಸ್ವತಹ ಗ್ರಾ.ಪಂ ಅಧ್ಯಕ್ಷರಾದ ವೀಣಾ ವಸಂತ್ ರವರ ವಾರ್ಡಿನ ಮೊರಂಗಲ್ಲು ಎಂಬಲ್ಲಿ ಬಸ್ಸು ನಿಲ್ದಾಣವು ಕಾಡುಗಳನ್ನು ತುಂಬಿ ಜೊತೆಗೆ ಅಲ್ಲಿ ಸೌದೆಯನ್ನು ಅಟ್ಟಿ ಕಟ್ಟಲಾಗಿತ್ತು ಇದರ ಕುರಿತಾಗಿ ಅಮರ ಸುಳ್ಯ ಸುದ್ದಿ ವರದಿಯನ್ನು ಪ್ರಕಟಿಸುತ್ತಿದ್ದಂತೆ ಎಚ್ಚೆತ್ತ ಗ್ರಾ.ಪಂ ಕಾಟಾಚಾರಕ್ಕೆ ಶುಚಿತ್ವವನ್ನು ಮಾಡಿತ್ತು ಇದೀಗ ಇದೇ ಗ್ರಾ.ಪಂ ವ್ಯಾಪ್ತಿಯ ಪರಿವಾರಕಾನದಲ್ಲಿ ಖಾಸಗಿಯವರು ನಿರ್ಮಿಸಿ ನೀಡಲಾದ ಬಸ್ಸು ನಿಲ್ದಾಣಕ್ಕೆ ತೆರಳಲು ಇದೀಗ ದಾರಿ ಹುಡುಕಿ ತೆರಳಬೇಕಾದ ಅನಿವಾರ್ಯತೆ ಎದುರಾಗಿದ್ದು ಸುಳ್ಯ ನಗರದಿಂದ ಕೂಗಳತೆ ದೂರಲ್ಲಿನ ಈ ಬಸ್ಸು ನಿಲ್ದಾಣದ ಪರಿಸ್ಥಿತಿ ಈ ರೀತಿಯಲ್ಲಾದರೆ ಗ್ರಾಮದ ಇತರ ಕಡೆಗಳ ಬಸ್ಸು ನಿಲ್ದಾಣಗಳು ಯಾವ ರೀತಿಯಲ್ಲಿರಲಬಹುದು ಊಹಿಸಬಹುದಾಗಿದೆ . ಗ್ರಾ.ಪಂ ಆಡಳಿತವು ತಕ್ಷಣ ಎಚ್ಚೆತ್ತುಕೊಂಡು ತಮ್ಮ ಗ್ರಾ.ಪಂ ವ್ಯಾಪ್ತಿಯ ಬಸ್ದು ನಿಲ್ದಾಣ , ಶಾಲೆ ಹಾಗೂ ಎಲ್ಲಾ ಸರಕಾರಿ ಕಟ್ಟಡಗಳ ಬಗ್ಗೆ ಪರಿಶೀಲನೆ ನಡೆಸಿ ಒಂದಿಷ್ಟು ಶುಚಿತ್ವ ಮತ್ತು ಜನರಿಗಾಗಿ ಕೆಲಸ ಮಾಡಿದರೆ ಉತ್ತಮವಾಗಬಹುದು ಅಲ್ಲದೇ ಪರಿವಾರಕಾನದ ಬಸ್ಸು ತಂಗುದಾಣಕ್ಕೆ ದಾರಿ ಹುಡುಕಿಕೊಡುವಿರಾ ಎಂದು ಪ್ರಯಾಣಿಕರು ಪ್ರಶ್ನಿಸುವಂತಾಗಿದ್ದು ಕೂಡಲೇ ಗ್ರಾ.ಪಂ ಎಚ್ಚೆತ್ತುಕೊಂಡರೆ ಉತ್ತಮ ಎಂದು ಜನತೆ ಹೇಳತೊಡಗಿದ್ದಾರೆ. ಮಾಹಿತಿಗಾಗಿ ಅಧ್ಯಕ್ಷರು ಹಾಗೂ ಸ್ಥಳೀಯ ಪ್ರತಿನಿಧಿಗಳನ್ನು ಸಂಪರ್ಕಿಸಿದ್ದು, ಸಂಪರ್ಕಕ್ಕೆ ಲಭ್ಯವಾಗಿಲ್ಲ.