ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಂಬೆತ್ತಾಡಿ ಪಂಚಶ್ರೀ ಯುವಕ ಮಂಡಲ (ರಿ)ಪಂಬೆತ್ತಾಡಿ. ಅಕ್ಷತಾ ಯುವತಿ ಮಂಡಲ (ರಿ) ಪಂಬೆತ್ತಾಡಿ. ಅಮೃತಾ ಮಹಿಳಾ ಮಂಡಲ(ರಿ)ಪಂಬೆತ್ತಾಡಿ ಇವುಗಳ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯನ್ನು ಪಂಬೆತ್ತಾಡಿ ಶಾಲೆಯಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ವಿದ್ಯಾರ್ಥಿಗಳು ನೆರವೇರಿಸಿದರು
ಸಭಾಧ್ಯಕ್ಷತೆಯನ್ನು ಶಾಲಾ ವಿದ್ಯಾರ್ಥಿನಾಯಕಿ ಧಕ್ಷಾ ಎಂ ವಹಿಸಿದ್ದರು ಜಂಟಿ ಸಂಸ್ಥೆಯ ಪರವಾಗಿ ಶಾಲಾ ಮಕ್ಕಳಿಗೆ ಮತ್ತು ಅಂಗನವಾಡಿ ಪುಟಾಣಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಶಾಲಾ ಶಿಕ್ಷಕವರ್ಗದವರು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ದೆಗಳನ್ನು ನಡೆಸಿ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಜಗದೀಶ ಮಠ.ಉಪಾಧ್ಯಕ್ಷೆ ಅಶ್ವಿನಿ ಮೊಡಪ್ಪಾಡಿ, ಯುವಕ ಮಂಡಲ ಅಧ್ಯಕ್ಷ ಲೋಕೇಶ್ ಪಂಜದಬೈಲು ಕಾರ್ಯದರ್ಶಿ ಶ್ರೀಧರ ಭೀಮಗುಳಿ, ಯುವತಿ ಮಂಡಲ ಅಧ್ಯಕ್ಷೆ ಧನಲಕ್ಷ್ಮಿ ಮಠ.ಕಾರ್ಯದರ್ಶಿ ಅಶ್ವಿನಿ ಪಂಜದಬೈಲು ಮಹಿಳಾ ಮಂಡಲ ಅಧ್ಯಕ್ಷೆ ಶ್ರೀಮತಿ ಲಲಿತ ಬಾಬ್ಲಿಬೆಟ್ಟು.ಮುಖ್ಯಶಿಕ್ಷಕಿ ಭಾರ್ಗವಿ ಜಿ ಎಸ್, ಹಿರಿಯ ವಿದ್ಯಾರ್ಥಿ ಸತ್ಯಶಂಕರ ಕಲ್ಚಾರ್ ಉಪಸ್ಥಿತರಿದ್ದರು. ಗೌರವ ಶಿಕ್ಷಕಿ ದಯಾಮಣಿ ಬಹುಮಾನಿತರ ಪಟ್ಟಿ ವಾಚಿಸಿದರು. ಸಹಶಿಕ್ಷಕಿ ಭವ್ಯ. ಬಿ ಕಾರ್ಯಕ್ರಮ ನಿರೂಪಣೆ ಮಾಡಿದರೂ.ಅತಿಥಿ ಶಿಕ್ಷಕಿ ಮಮತಾ ಧನ್ಯವಾದವಿತ್ತರು.
- Tuesday
- January 28th, 2025