ಸುಳ್ಯ: ಪರಿವಾರಕಾನದಲ್ಲಿನ ಬಸ್ಸು ನಿಲ್ದಾಣಕ್ಕೆ ದಾರಿ ಹುಡುಕಿ ಕೊಡುವಿರಾ ಜನಪ್ರತಿನಿಧಿಗಳೆ ? ಎಂಬ ತಲೆ ಬರಹದೊಂದಿಗೆ ವರದಿಯನ್ನು ಪ್ರಕಟಿಸಿದ್ದು ಇದು ಅಲೆಟ್ಟಿ ಹಾಗೂ ಸುಳ್ಯ ನಗರ ಪಂಚಾಯತ್ ಗಡಿ ಪ್ರದೇಶವಾಗಿದ್ದು ಇಲ್ಲಿನ ಬಸ್ಸು ನಿಲ್ದಾಣ ಅವ್ಯವಸ್ಥೆಯಿಂದ ಕೂಡಿದ್ದು ಕಾಡು ಬಳ್ಳಿಗಳು ಹಬ್ಬಿ ನಡೆದಾಡಲು ಕಷ್ಟವಾಗಿದ್ದು, ದಾರಿಯನ್ನು ಹುಡುಕಬೇಕಾಗಿದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಸರಿಪಡಿಸುವ ಹಿನ್ನೆಲೆಯಲ್ಲಿ ಆಡಳಿತ ವ್ಯವಸ್ಥೆಯನ್ನು ಜಾಗೃತಿ ಗೊಳಿಸುವ ನಿಟ್ಟಿನಲ್ಲಿ ವರದಿ ಪ್ರಕಟಿಸುತ್ತಿದ್ದಂತೆ ಅಲೆಟ್ಟಿ ಗ್ರಾ.ಪಂ ಸದಸ್ಯರಾದ ಸುದೇಶ್ ಅರಂಬೂರು ಪ್ರತಿಕ್ರಿಯಿಸಿ ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಸ್ಟಪಡಿಸಿದ್ದಾರೆ. ಈ ಬಸ್ಸು ತಂಗುದಾಣದ ಬಗ್ಗೆ ನಗರ ಪಂಚಾಯತ್ ಹೊಣೆಯನ್ನು ಹೊತ್ತುಕೊಂಡಿದ್ದು, ನಾಳೆಯೇ ಸ್ಥಳ ಪರಿಶೀಲನೆ ನಡೆಸಿ ಅದನ್ನು ಶುಚಿಗೊಳಿಸುವುದಾಗಿ ನಗರ ಪಂಚಾಯತ್ ಆಡಳಿತ ತಿಳಿಸಿದೆ.
- Thursday
- November 14th, 2024