Ad Widget

ನ.23: ಅರಂತೋಡಿನಲ್ಲಿ 27ನೇ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕ, ಸ್ವಾಗತ ಸಮಿತಿ 27ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರಂತೋಡು ಇದರ ಆಶ್ರಯದಲ್ಲಿ ಸುಳ್ಯ ತಾಲೂಕು 27ನೇ ಕನ್ನಡ ಸಾಹಿತ್ಯ ಸಮ್ಮೇಳನ ನ. 23 ರಂದು ಶನಿವಾರದಂದು ನೆಹರೂ ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಅರಂತೋಡು ಇಲ್ಲಿಯ ಡಾ.ಕುರುಂಜಿ ವೆಂಕಟ್ರಮಣ ಗೌಡ ವೇದಿಕೆ ನಿರಂಜನ ಸಭಂಗಣದಲ್ಲಿ ನಡೆಯಲಿದೆ ಎಂದು ಸಮ್ಮೇಳನ ಸಂಘಟನಾ ಸಮಿತಿ ಅಧ್ಯಕ್ಷರುಗಳಾದ ಕೇಶವ ಅಡ್ತಲೆ ಮತ್ತು ಸಂತೋಷ್ ಕುತ್ತಮೊಟ್ಟೆ, ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ತಿಳಿಸಿದ್ದಾರೆ.ಇಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರುಪೂರ್ವಾಹ್ನ 9 ಗಂಟೆಗೆ ಅರಂತೋಡು ಗ್ರಾಮ ಪಂಚಾಯತ್ ಕಚೇರಿ ಬಳಿಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆ ನಡೆಯಲಿದ್ದು ನಿವೃತ್ತ ಮುಖ್ಯ ಶಿಕ್ಷಕರಾದ ಹೊನ್ನಪ್ಪ ಮಾಸ್ತ‌ರ್ ಅಡ್ತಲೆ ಮೆರವಣಿಗೆಗೆ ಚಾಲನೆಯನ್ನು ನೀಡಲಿದ್ದಾರೆ.9:30ಕ್ಕೆ ರಾಷ್ಟ್ರಧ್ವಜಾರೋಹಣವನ್ನು ಅರಂತೋಡು ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಕೇಶವ ಅಡ್ತಲೆ ಹಾಗೂ ಪರಿಷತ್ತಿನ ಧ್ವಜಾರೋಹಣವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ. ಶ್ರೀನಾಥ್ ನೆರವೇರಿಸಲಿದ್ದಾರೆ. ಪುಸ್ತಕ ಪ್ರದರ್ಶನದ ಉದ್ಘಾಟನೆಯನ್ನು ತಹಸಿಲ್ದಾ‌ರ್ ಶ್ರೀಮತಿ ಮಂಜುಳಾ ಇವರು ನೆರವೇರಿಸಲಿದ್ದಾರೆ.ಪೂರ್ವಾಹ್ನ ಗಂಟೆ 10 ರಿಂದ ಹಿರಿಯ ಸಾಹಿತಿ ಶ್ರೀಮತಿ ಲೀಲಾ ದಾಮೋದರ ಇವರ ಸಮ್ಮೇಳನಾಧ್ಯಕ್ಷತೆಯಲ್ಲಿ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ. ಸಮ್ಮೇಳನದ ಉದ್ಘಾಟನೆಯನ್ನು ಸಾಹಿತಿಗಳಾದ ನರೇಂದ್ರ ರೈ ದೇರ್ಲ ನೆರವೇರಿಸಲಿದ್ದಾರೆ.ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು.ಭಾಗೀರಥಿ ಮುರುಳ್ಯ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಿದ್ದಾರೆ. ಅರೆಭಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ಇದರ ಅಧ್ಯಕ್ಷರಾದ ಸದಾನಂದ ಮಾವಜಿ ಹೊಸ ಕೃತಿಗಳ ಬಿಡುಗಡೆ ಗೊಳಿಸಲಿದ್ದಾರೆ. ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷರಾದ ಕೆ. ಆರ್. ಗಂಗಾಧರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ ಪಿ ಶ್ರೀನಾಥ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖ‌ರ್ ಪೇರಾಲ್ ಉಪಸ್ಥಿತರಿರುತ್ತಾರೆ.27ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಪ್ರಭಾಕರ್ ಶಿಶಿಲರ ಕುಂತಿ ಕಾದಂಬರಿ, ಕಲ್ಲುರ್ಟಿಯ ಕುಕ್ಕುಟ ಕಥನಗಳು ಎಂಬ ಕಥಾಸಂಕಲನ, ಶ್ರೀಮತಿ ಲೀಲಾ ದಾಮೋದರ ಅವರ ನದಿಯ ನಾದ ಕವನ ಸಂಕಲನ ಸಂಗೀತ ರವಿರಾಜ್ ಚೆಂಬು ಇವರ ಪಯಸ್ವಿನಿಯ ತೀರದಲ್ಲಿ ಲಲಿತ ಪ್ರಬಂಧ ಮತ್ತು ಅಕ್ಕರೆಯ ಕಡೆಗೋಲು ಎಂಬ ವಿಮರ್ಶ ನಾಟಕ,ಪ್ರಕಾಶ್‌ ಮೂಡಿತ್ತಾಯ ಇವರ ಲಸಿಕೆಯ ಕಥೆ ಮತ್ತು ಮೌಡ್ಯವೇಕೆ ಇನ್ನೂ ಎಂಬ ವಿಜ್ಞಾನ ನಾಟಕ,ನಿರೀಕ್ಷಾ ಸುಲಾಯ ಅವರ ನನ್ನ ಮನಸ್ಸು ನನ್ನ ಕನಸು ಎಂಬ ಕವನ ಸಂಕಲನ ಬಿಡುಗಡೆಗೊಳ್ಳಲಿದೆ. ಮಧ್ಯಾಹ್ನ 12 ರಿಂದ15 ಸಾಹಿತಿ ಶ್ರೀಮತಿ ವಿಮಲಾರುಣ ಪಡ್ಡಂಬೈಲು ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.ಕವಿಗೋಷ್ಠಿಯಲ್ಲಿ ಲೀಲಾಕುಮಾರಿ ತೊಡಿಕಾನ, ಹೆಚ್. ಭೀಮರಾವ್‌ ವಾಷ್ಟ‌ರ್, ಹೇಮಲತಾ ಕಜೆಗದ್ದೆ, ಶಿವದೇವಿ ಅವನಿಶ್ಚಂದ್ರ, ತೀರ್ಥರಾಮ ಹೊದ್ದೆಟ್ಟಿ, ವಿಜಯ್ ಕುಮಾರ್ ಕಾಣಿಚ್ಚಾ‌ರ್, ಮಮತಾ ರವೀಶ್‌ ಪಡ್ಡಂಬೈಲು ಭಾಗವಹಿಸಲಿದ್ದಾರೆ.ಮಧ್ಯಾಹ್ನ 1:30 ರಿಂದ 2 ಗಂಟೆಯ ತನಕ ನೆಹರು ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಅರಂತೋಡು ಇಲ್ಲಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ಮದ್ಯಾಹ್ನ 2.00 ರಿಂದ 3.00 ಗಂಟೆಯವರೆಗೆ ಸಾಹಿತಿ ಶ್ರೀಮತಿ ನಂದಕುಮಾರ ಸ್ವಾಮಿ ಇವರ ಅಧ್ಯಕ್ಷತೆಯಲ್ಲಿ ನಿರಂಜನ ಶತಮಾನೋತ್ಸವ ಸ್ಮರಣೆ ವಿಚಾರಗೋಷ್ಠಿ ನಡೆಯಲಿದೆ.ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಉಜಿರೆ ಇಲ್ಲಿಯ ಸಹಪ್ರಾಧ್ಯಾಪಕರಾದ ರಾಜಶೇಖರ ಹಳೆಮನೆ ಇವರು ನಿರಂಜನ ಬದುಕು ಬರಹ ಅವಲೋಕನ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 3 ರಿಂದ 4ರವರೆಗೆ ಕನ್ನಡ ಭಾಷೆ ಅನ್ನದ ಭಾಷೆ ಎಂಬ ವಿಷಯದ ಬಗ್ಗೆ ವಿದ್ಯಾರ್ಥಿಗಳ ಚರ್ಚೆ ಗೋಷ್ಠಿ ನಡೆಯಲಿದೆ. ಈ ಗೋಷ್ಠಿಯಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜಿನ ಅನುಷಾ ಕೆ., ಪೌರ್ಣಮಿ ಕೆ, ಸರಕಾರಿ ಪ್ರೌಢಶಾಲೆ ಮರ್ಕಂಜದ ಭೂಷಣ್ ಕೆಪಿ, ರೋಟರಿ ಪ್ರೌಢಶಾಲೆಯ ಶ್ರೀ ದುರ್ಗಾ ಯು, ಬೆಸ್ಟ್ ಕುರಿಯ ಕೋಸ್ ಪ್ರೌಢಶಾಲೆ ಗುತ್ತಿಗಾರಿನ ಜಾಕ್ಸನ್, ನೆಹರು ಸ್ಮಾರಕ ಪದವಿ ಪೂರ್ವ ವಿದ್ಯಾಲಯ ಅರಂತೋಡಿನ ಸೋಹನ್ ಪಿ. ಜೆ., ಕೆಪಿಎಸ್ ಬೆಳ್ಳಾರೆಯ ಅಂಜನಾ ವಿ ಭಾಗವಹಿಸಲಿದ್ದಾರೆ. ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾಕುಮಾರ್ ನಾಯರ್ ಕೆರೆ ಪರಿಸಮಾಪ್ತಿ ಮಾಡಲಿದ್ದಾರೆ.ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಪ್ರಕಾಶ್‌ ಮೂಡಿತ್ತಾಯ ಸಮನ್ವಯಕಾರರಾಗಿ ಭಾಗವಹಿಸಲಿದ್ದಾರೆ.ಗಾಯಕರಾದ ಕೆ.ಆರ್. ಗೋಪಾಲ ಕೃಷ್ಣ ಹಾಗೂ ಶ್ರೀಮತಿ ಪೂರ್ಣಿಮಾ ಇವರಿಂದ ಗೀತ ಗಾಯನ ಕೂಡ ನಡೆಯಲಿಕ್ಕಿದೆ.ಸಂಜೆ 4ಗಂಟೆಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ ಪಿ ಶ್ರೀನಾಥ್ ಇವರ ಅಧ್ಯಕ್ಷತೆಯಲ್ಲಿ ಸಮಾರಂಭ ಹಾಗೂ ಕನ್ನಡ ಕಸ್ತೂರಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ಸಮಾರೋಪ ಭಾಷಣವನ್ನು ಉಳ್ಳಾಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಧನಂಜಯ ಕುಂಬ್ಳೆ ನೆರವೇರಿಸಲಿದ್ದಾರೆ. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ ಇದರ ಅಧ್ಯಕ್ಷರಾದ ಡಾ. ಕೆ ವಿ ಚಿದಾನಂದ ಇವರು ಸಾಧಕನನ್ನು ಸನ್ಮಾನಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಸಜ್ಜನ ಪ್ರತಿಷ್ಠಾನ ಬೀಜದ ಕಟ್ಟೆ ಇದರ ಡಾ. ಉಮ್ಮರ್ ಬೀಜದಕಟ್ಟೆ ಭಾಗವಹಿಸಲಿದ್ದಾರೆ.ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಡಾ. ಹರಪ್ರಸಾದ್ ತುದಿಯಡ್ಕ, ತಾಲೂಕ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ, ಪ್ರಭಾರ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀಮತಿ ಶೀತಲ್‌ ಉಪಸ್ಥಿತರಿರುತ್ತಾರೆ.ಡಾ. ಶ್ವೇತಾ ಮಡಪ್ಪಾಡಿ ಇವರಿಗೆ ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ, ಹುಕ್ರಪ್ಪ ಇವರಿಗೆ ರಕ್ಷಣಾ ಸೇವೆ, ಕುಮಾರಸ್ವಾಮಿ ತೆಕ್ಕುಂಜೆ ಇವರಿಗೆ ಸಾಹಿತ್ಯ ಕ್ಷೇತ್ರದಲ್ಲಿ, ಸರಸ್ವತಿ ಚಿದಾನಂದ ಇವರಿಗೆ ಶಿಕ್ಷಣ ಕ್ಷೇತ್ರದಲ್ಲಿ, ಗಣೇಶ್ ಭಟ್ ಇವರಿಗೆ ಹಿರಿಯ ಲೆಕ್ಕ ಪರಿಶೋಧಕರು, ಕೆ ಆರ್ ಪದ್ಮನಾಭ ಇವರಿಗೆ ಸಹಕಾರ/ ಸಮಾಜ ಸೇವೆ, ಡಾ. ಲೀಲಾದರು ಡಿ ವಿ ಇವರಿಗೆ ಆಡಳಿತ / ವೈದ್ಯಕೀಯ ತೇಜೇಶ್ವರ ಕುಂದಲ್ಪಾಡಿ ಇವರಿಗೆ ಪತ್ರಿಕೋದ್ಯಮ, ಆನಂದ ಕಲ್ಲಗದ್ದೆ ಇವರಿಗೆ ಮಾಹಿತಿ ಮತ್ತು ತಂತ್ರಜ್ಞಾನ, ಸಲಿಂ ಸುಳ್ಯ ಇವರಿಗೆ ಸಮಾಜ ಸೇವೆ / ಉದ್ಯಮ ಕ್ಷೇತ್ರದಲ್ಲಿ ಕೇಶವ ಪರವ ಇವರಿಗೆ ಭೂತಾರಾಧನೆ ಕ್ಷೇತ್ರದ ಸಾಧನೆಗಾಗಿ ಕನ್ನಡ ಕಸ್ತೂರಿ ಸನ್ಮಾನವನ್ನು ಪ್ರಧಾನ ಮಾಡಲಿದ್ದೇವೆ.ಸಂಜೆ 5:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು ಡಾ. ಶ್ವೇತಾ ಮಡಪ್ಪಾಡಿ ಮತ್ತು ಬಳಗದವರಿಂದ ಭಾವಗಾನ ಕನ್ನಡ ಗೀತೆಗಳ ಗಾಯನ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಡಿಯಾಲ ಬೈಲ್ ಸುಳ್ಯ ಇಲ್ಲಿನ ವಿದ್ಯಾರ್ಥಿಗಳಿಂದ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ ಅರೆಭಾಷೆ ಸಿರಿ ಸಂಸ್ಕೃತಿ -ನೃತ್ಯ ರೂಪಕ ನಡೆಯಲಿದೆ.ಎಂದು ಅವರು ಹೇಳಿದರು.ತಾಲೂಕು ಸಮ್ಮೇಳನಗಳಿಗೆ ಸರಕಾರದ ಅನುದಾನ ಇಲ್ಲದಿರುವುದರಿಂದ ನಾವೇ ಸಂಗ್ರಹ ಮಾಡಿ ಸಮ್ಮೇಳನ ನಡೆಸಬೇಕಾಗುತ್ತದೆ.ತಾಲೂಕು ಸಮ್ಮೇಳನಗಳಿಗೆ 1 ಲಕ್ಷ ಅನುದಾನ ನೀಡಲಾಗುತ್ತಿತ್ತು. ಕಳೆದ ಎರಡು ವರ್ಷಗಳಿಂದ ಅದು ಬರುತ್ತಿಲ್ಲ.ಅನುದಾನ ಇಲ್ಲದಿದ್ದರೂ ಸಾಹಿತ್ಯ ನಡೆಸಬೇಕೆಂಬ ದೃಷ್ಟಿಯಿಂದ ಸರಳವಾಗಿ ಸಮ್ಮೇಳನ ಆಯೋಜಿಸುತ್ತಿದ್ದೇವೆ ಎಂದು ಚಂದ್ರಶೇಖರ ಪೇರಾಲು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕಸಾಪ ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ ಅಭ್ರಪ್ಪಾಡಿ, ಕಸಾಪ ಗೌರವ ಕಾರ್ಯದರ್ಶಿ ತೇಜಸ್ವಿ ಕಡಪಳ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಕೇಶವ ಸಿ.ಎ., ರಮೇಶ್ ನೀರಬಿದಿರೆ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading