Ad Widget

ಕಲ್ಲುಗುಂಡಿಯ ಸಂಪತ್ ಕೊಲೆ ಪ್ರಕರಣ : ಎರಡನೇ ಆರೋಪಿಗೆ ಜಾಮೀನು ಮಂಜೂರು

. . . . .

ಕಲ್ಲುಗುಂಡಿಯ ಸಂಪಾಜೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದವರಲ್ಲಿ ಎರಡನೇ ಆರೋಪಿಗೆ ನ್ಯಾಯಾಲಯದ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿರುವುದಾಗಿ ತಿಳಿದುಬಂದಿದೆ.
2020 ರ ಅಕ್ಟೋಬರ್ 8ರಂದು ಕಲ್ಲುಗುಂಡಿಯ ಸಂಪತ್ ಎಂಬವರನ್ನು ಸುಳ್ಯದ ಶಾಂತಿನಗರ ಅವರ ಬಾಡಿಗೆ ಮನೆಯ ಸಮೀಪ 8 ಮಂದಿಯ ತಂಡ ಅಟ್ಟಾಡಿಸಿಕೊಂಡು ಹೋಗಿ ಕೊಲೆ ಮಾಡಿತ್ತು. ಬಳಿಕ ಪೋಲೀಸರು ಎಲ್ಲ 8 ಮಂದಿ ಆರೋಪಿಗಳನ್ನು ಬಂದಿಸಿ, ಜೈಲಿಗಟ್ಟಿದ್ದರು.

ಅವರಲ್ಲಿ ಎರಡನೇ ಆರೋಪಿಯಾಗಿರುವ ಬಿಪಿನ್ ಎಂಬವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಉಚ್ಚ ನ್ಯಾಯಾಲಯದ ಆದೇಶದಂತೆ ಪುತ್ತೂರಿನ ಐದನೇ ಹೆಚ್ಚುವರಿ ನ್ಯಾಯಾಲಯವು ನ.11 ರಂದು ಜಾಮೀನು ಮೇಲೆ ಬಿಡುಗಡೆಗೆ ಆದೇಶ ಮಾಡಿದೆ.

8 ಆರೋಪಿಗಳಲ್ಲಿ ಈ ಹಿಂದೆ 6 ಮಂದಿಗೆ ಜಾಮೀನು ದೊರೆತಿದೆ. ಬಿಪಿನ್ ಗೆ ಜಾಮೀನು ದೊರೆತಿರುವುದರಿಂದ ಒಟ್ಟು 7 ಮಂದಿಗೆ ಜಾಮೀನು ದೊರೆತಂತಾಗಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!