
ಸುಳ್ಯ: ಸುಳ್ಯ ಗಾಂಧಿನಗರದಲ್ಲಿ ಕಾರ್ಯಚರಣೆ ನಡೆಸುತ್ತಿದ್ದ ಅಡಿಕೆ ಅಂಗಡಿಯ ವ್ಯವಸ್ಥಾಪಕ ತನ್ನ ಮನೆಗೆ ತೆರಳಿ ವಾಪಸ್ಸ್ ಬಂದು ಅಲೆಟ್ಟಿಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೋಲ್ಚಾರಿನ ಅಭಿಲಾಷ್ ಕೊಲ್ಲೆರಮೂಲೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು.ಅಭಿಲಾಷ್ ಆಲೆಟ್ಟಿ ಗ್ರಾಮದಲ್ಲಿ ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಇವರು ಯಾವ ಕಾರಣಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ನಿಗೂಢವಾಗಿದ್ದು ಮೃತಪಟ್ಟ ಅಭಿಲಾಷ್ ಪತ್ನಿ, , ತಂದೆ, ತಾಯಿ ಹಾಗೂ ಓರ್ವ ಸಹೋದರಿ ಮತ್ತು ಬಂಧು ಮಿತ್ರರನ್ನು ಅಗಲಿದ್ದಾರೆ.